Samantha Ruth Prabhu: ಸಮಂತಾ ಉಟ್ಟಿದ್ದ ಸಿಂಪಲ್ ವೈಟ್ ಸೀರೆ ಬೆಲೆಗೆ ಐಫೋನ್ ಕೊಳ್ಬೋದು
ಸ್ಟಾರ್ ನಟಿಯರು ದುಬಾರಿ ಸೀರೆಗಳನ್ನು ಉಡುತ್ತಾರೆ. ಇನ್ನು ಸಿನಿಮಾ ಸಂಬಂಧಿಸಿದ ಇವೆಂಟ್ಗಳಾದರೆ ಅಷ್ಟೇ ಬಿಡಿ. ಸೀರೆ ಬೆಲೆ ರೇಂಜ್ ಹೆಚ್ಚಾಗುತ್ತದೆ. ಸಮಂತಾ ಶಾಕುಂತಲಂ ಸಿನಿಮಾ ಟ್ರೈಲರ್ ಲಾಂಚ್ನಲ್ಲಿ ಉಟ್ಟ ಬಿಳಿ ಸೀರೆಯ ಬೆಲೆ ಎಷ್ಟು ಗೊತ್ತಾ?
ಟಾಲಿವುಡ್ ನಟಿ ಸಮಂತಾ ರುಥ್ ಪ್ರಭು ಅವರು ಶಾಕುಂತಲಂ ಸಿನಿಮಾದ ಟ್ರೈಲರ್ ಲಾಂಚ್ನಲ್ಲಿ ಸುಂದರವಾರ ಬಿಳಿ ಸೀರೆ ಉಟ್ಟುಕೊಂಡಿದ್ದರು. ಅತ್ಯಂತ ಸಿಂಪಲ್ ಆಗಿದ್ದ ಸೀರೆ ಫೋಟೋ ವೈರಲ್ ಆಗಿದೆ.
2/ 8
ಸ್ಟಾರ್ ನಟಿಯರು ದುಬಾರಿ ಸೀರೆಗಳನ್ನು ಉಡುತ್ತಾರೆ. ಇನ್ನು ಸಿನಿಮಾ ಸಂಬಂಧಿಸಿದ ಇವೆಂಟ್ಗಳಾದರೆ ಅಷ್ಟೇ ಬಿಡಿ. ಸೀರೆ ಬೆಲೆ ರೇಂಜ್ ಹೆಚ್ಚಾಗುತ್ತದೆ. ಸಮಂತಾ ಶಾಕುಂತಲಂ ಸಿನಿಮಾ ಟ್ರೈಲರ್ ಲಾಂಚ್ನಲ್ಲಿ ಉಟ್ಟ ಬಿಳಿ ಸೀರೆಯ ಬೆಲೆ ಎಷ್ಟು ಗೊತ್ತಾ?
3/ 8
ಈ ಸೀರೆ ದೇವನಾಗಿರಿ ಎಂಬ ಬ್ರ್ಯಾಂಡ್ನದ್ದು. ಸೀರೆಯಿಂದ ಹಿಡಿದು ಇಯರಿಂಗ್ಸ್, ನಟಿ ಧರಿಸಿದ್ದ ಕನ್ನಡಕ ಎಲ್ಲವೂ ಕೂಡಾ ಈ ಸೀರೆಗೆ ಹೊಂದಿಸಿದ ಸ್ಟೈಲ್ನ ಭಾಗ.
4/ 8
ಬಾರ್ಡರ್ನಲ್ಲಿ ಬಿಳಿ ಬಣ್ಣದ ಎಂಬ್ರಾಯ್ಡರಿಯನ್ನು ಕಾಣಬಹುದು. ಅತ್ಯಂತ ಸರಳವಾದ ವೈಟ್ ಕಲರ್ ಸೀರೆಯಲ್ಲಿ ವೈಟ್ ಕಲರ್ ಎಂಬ್ರಾಯ್ಡರಿ ಕ್ಲಾಸೀ ಲುಕ್ ಕೊಟ್ಟಿದೆ.
5/ 8
ಈ ಸೀರೆಗೆ ನಟಿ ಸ್ಲೀವ್ಲೆಸ್ ವೀ ಹ್ಯಾಂಗಿಂಗ್ ನೆಕ್ ಬ್ಲೌಸ್ ಧರಿಸಿದ್ದರು. ಆಗ್ರಾನ್ಝಾ ಮೆಟಿರೀಯಲ್ ಸೀರೆಗೆ ಸೆರಗನ್ನು ಹರವಿ ಬಿಟ್ಟಿದ್ದರು ಸಮಂತಾ.
6/ 8
ಈ ಸೀರೆಯ ಬೆಲೆ 50 ಸಾವಿರ ರೂಪಾಯಿ ಎಂದು ಹೇಳಲಾಗಿದೆ. ಇದರೊಂದಿಗೆ ಆ್ಯಸಸರೀಸ್ ಎಲ್ಲವೂ ಸೇರಿ ಸಮಂತಾ ಈ ಸೀರೆ ಸ್ಟೈಲ್ಗೆ 70 ಸಾವಿರ ಖರ್ಚು ಮಾಡಿದ್ದಾರೆ.
7/ 8
ಸಮಂತಾ ಕೈಯಲ್ಲಿದ್ದ ಜಪಮಾಲೆ ಎಲ್ಲರ ಗಮನ ಸೆಳೆದಿತ್ತು. ಆದರೆ ಅದೂ ಕೂಡಾ ಈ ಸೀರೆಗೆ ಹೊಂದಿಕೆಯಾಗುವ ಫ್ಯಾಷನ್ ಬೀಟ್ಸ್ ಎಂದು ಹೇಳಲಾಗುತ್ತಿದೆ.
8/ 8
ಏನೇ ಆದ್ರೂ ಇಷ್ಟು ಸಿಂಪಲ್ ಆಗಿರೋ ಸೀರೆಗೆ ಇಷ್ಟೊಂದು ಹಣ ಕೊಟ್ಟಿರೋದನ್ನು ಕೇಳಿರೋ ನೆಟ್ಟಿಗರು ಛೇ ಒಂದು ಐಫೋನ್ ಬರ್ತಿತ್ತಲ್ಲ ಎನ್ನುತ್ತಿದ್ದಾರೆ.