Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

Samantha Ruth Prabhu: ಶಾಕುಂತಲಂ ಸಿನಿಮಾ ಸೋತ ಬಳಿಕ ಸಮಂತಾ, ತಮ್ಮ ಮುಂದಿನ ವೆಬ್ ಸರಣಿ ಸಿಟಾಡೆಲ್ ವೆಬ್ ಸೀರಿಸ್ ತಂಡ ಸೇರಿದ್ದಾರೆ. ಸಿಟಾಡೆಲ್ ಪ್ರೀಮಿಯರ್ ಶೋಗಾಗಿ ಲಂಡನ್ ಗೆ ಹೋಗಿದ್ದರು. ಸ್ಯಾಮ್ ಮಾತು ಇದೀಗ ಭಾರೀ ಟ್ರೋಲ್ ಆಗಿದೆ.

First published:

  • 18

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಯಶೋದಾ ಸಿನಿಮಾ ಸೂಪರ್ ಹಿಟ್ ನಂತರ ಸಮಂತಾ, ಶಾಕುಂತಲಂ ಎಂಬ ಪೌರಾಣಿಕ ಚಿತ್ರದಲ್ಲಿ ನಟಿಸಿದ್ರು. ಆದ್ರೆ ಸಿನಿಮಾ ಜನರ ನಿರೀಕ್ಷೆ ತಲುಪುವಲ್ಲಿ ಎಡವಿದೆ. ರಿಲೀಸ್ ಆದ ಮೊದಲ ದಿನ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೆ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಲಿಲ್ಲ.

    MORE
    GALLERIES

  • 28

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಶಾಕುಂತಲಂ ಚಿತ್ರದ ನಂತರ ಸಮಂತಾ ವೆಬ್ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹಾಲಿವುಡ್ ವರ್ಸನ್ ಸಿಟಾಡೆಲ್ ಪ್ರೀಮಿಯರ್​ಗಾಗಿ ಸಮಂತಾ ಲಂಡನ್​ಗೆ ಹೋಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತಾಡಿದ ಸಮಂತಾ ಫಾರಿನ್ ಇಂಗ್ಲಿಷ್ ಮಾತಾಡಲು ಹೋಗಿ ಟ್ರೋಲ್ ಆಗಿದ್ದಾರೆ.

    MORE
    GALLERIES

  • 38

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಸಮಂತಾ ಲಂಡನ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಅವಳು ಬ್ರಿಟಿಷ್ ಉಚ್ಚಾರಣೆಯಲ್ಲಿ ಮಾತನಾಡಲು ಪ್ರಯತ್ನಿಸಿದ್ರು. ಸ್ಯಾಮ್ ಸಂವಾದದ ವಿಡಿಯೋ ವೈರಲ್ ಆಗಿದೆ. ಫೋಟೋ: Instagram

    MORE
    GALLERIES

  • 48

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಫಾರಿನ್ ಇಂಗ್ಲಿಷ್ ಕೇಳಿದ ನೆಟ್ಟಿಗರು, ಉಚ್ಚಾರಣೆಯೆಲ್ಲವೂ ಕಾಪಿ ಎಂದಿದ್ದಾರೆ. ಭಾರತೀಯ ಶೈಲಿಯಲ್ಲೇ ಮಾತಾಡಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 58

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಇತ್ತೀಚಿಗೆ ಅಮೆರಿಕಾದಲ್ಲಿ ಜೂನಿಯರ್ NTR ಇಂಗ್ಲಿಷ್ ಮಾತಾಡುವ ರೀತಿ ಸಾಕಷ್ಟು ಟ್ರೋಲ್ ಆಗಿತ್ತು. ಆಸ್ಕರ್ ಪ್ರಚಾರದ ಅಂಗವಾಗಿ ಅಮೆರಿಕದ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಅಮೆರಿಕದ ಉಚ್ಚಾರಣೆಯಲ್ಲಿ ಮಾತನಾಡಿದ NTR ಅವರನ್ನು ಟ್ರೋಲ್ ಮಾಡಿದ್ದರು. ಫೋಟೋ: Instagram

    MORE
    GALLERIES

  • 68

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಇದೀಗ ನಟಿ ಸಮಂತಾ ಟ್ರೋಲ್ ಆಗಿದ್ದಾರೆ. ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ ಎಂದು ಸಮಂತಾಗೆ ನೆಟ್ಟಿಗರ ತರಾಟೆಗೆ ತೆಗೆದುಕೊಂಡಿದ್ದಾರೆ. ಲಂಡನ್​ನಲ್ಲಿ ಸಮಂತಾ ಸಖತ್ ಫೋಟೋಶೂಟ್ ವೈರಲ್ ಆಗಿದೆ.

    MORE
    GALLERIES

  • 78

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಶಾಕುಂತಲಂ ಸಿನಿಮಾವನ್ನು 65 ಕೋಟಿ ಬಜೆಟ್​ನಲ್ಲಿ ಮಾಡಲಾಗಿದೆ. ತೆಲುಗಿನಲ್ಲಿ 18 ಕೋಟಿ ರೂಪಾಯಿ ಪ್ರೀ ರಿಲೀಸ್ ಬಿಸಿನೆಸ್ ಮಾಡಿದೆ. ಇಲ್ಲಿಯವರೆಗೆ ಈ ಚಿತ್ರ ಕೇವಲ 4 ಕೋಟಿ ಶೇರ್ ಗಳಿಕೆಯೊಂದಿಗೆ ಎಪಿಕ್ ಡಿಸಾಸ್ಟರ್ ಆಗಿದೆ.

    MORE
    GALLERIES

  • 88

    Samantha: 'ನಿನ್ನ ಫಾರಿನ್ ಇಂಗ್ಲಿಷ್ ಸಾಕಮ್ಮ, ನೀನು ಆಂಧ್ರ ಪಿಲ್ಲಾ ಅನ್ನೋದು ಮರೆಯಬೇಡಮ್ಮ'! ಸಮಂತಾಗೆ ನೆಟ್ಟಿಗರ ಕ್ಲಾಸ್

    ಈ ಚಿತ್ರಕ್ಕೆ ದಿಲ್ ರಾಜು ಮತ್ತು ಗುಣಶೇಖರ್ ಎಷ್ಟು ಬಂಡವಾಳ ಹಾಕಿದ್ದಾರೋ ಅದರಲ್ಲಿ 20 ಕೋಟಿ ನಷ್ಟವಾಗಿದೆ ಎಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ನೋಡಿ ನಿರ್ದೇಶಕ ಹಾಗೂ ನಿರ್ಮಾಪಕರಿಬ್ಬರಿಗೂ ಮುಳುವಂತಾಗಿದೆ. ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಶಾಕುಂತಲಂ ಸೋಲು ಬಹುದೊಡ್ಡ ದುರಂತ ಎಂದೇ ಹೇಳಲಾಗುತ್ತಿದೆ.

    MORE
    GALLERIES