Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

Samantha Ruth Prabhu: ಸಮಂತಾ ಅವರ ಶಾಕುಂತಲಂ ಎಂಬ ಪೌರಾಣಿಕ ಚಿತ್ರ ಒಟಿಟಿಗೆ ಬರುತ್ತಿದೆ. ಗುಣಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಸಮಂತಾ ಟೈಟಲ್ ರೋಲ್​ನಲ್ಲಿ ನಟಿಸಿದ್ದಾರೆ. ಉತ್ತಮ ನಿರೀಕ್ಷೆಗಳ ನಡುವೆ ಏಪ್ರಿಲ್ 14 ರಂದು ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಯಿತು. ಈ ಸಿನಿಮಾ ಶೀಘ್ರದಲ್ಲೇ ಜನಪ್ರಿಯ OTTಯಲ್ಲಿ ಸ್ಟ್ರೀಮ್ ಆಗಲಿದೆ.

First published:

  • 18

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಯಶೋದಾ ನಟಿ ಸಮಂತಾ ಅವರ ಶಾಕುಂತಲಂ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಗುಣಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಸಮಂತಾ ಟೈಟಲ್ ರೋಲ್​ನಲ್ಲಿ ನಟಿಸಿದ್ದಾರೆ. ಏಪ್ರಿಲ್ 14 ರಂದು ವಿಶ್ವಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಿಲ್ಲ.

    MORE
    GALLERIES

  • 28

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಸುಮಾರು 60 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಬಿಡುಗಡೆಯಾದ ಮೊದಲ ದಿನವೇ ನೆಗೆಟಿವ್ ಟಾಕ್ ಬಂದಿದ್ದು ನಿರ್ಮಾಪಕರಿಗೆ ಭಾರೀ ನಷ್ಟವನ್ನುಂಟು ಮಾಡಿದೆ. ಈಗ ಚಿತ್ರ ಜನಪ್ರಿಯ OTT ನಲ್ಲಿ ಮನರಂಜನೆ ನೀಡಲು ಸಿದ್ಧವಾಗಿದೆ.

    MORE
    GALLERIES

  • 38

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಶಾಕುಂತಲಂ ಚಿತ್ರ ಇದೇ ತಿಂಗಳ 12 ರಂದು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಾಗಲಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಥಿಯೇಟರ್​ನಲ್ಲಿ ಸಿನಿಮಾ ನೋಡದವರು ಒಟಿಟಿಯಲ್ಲಿ ವೀಕ್ಷಿಸಬಹುದು.

    MORE
    GALLERIES

  • 48

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಗುಣಶೇಖರ್ ಜೊತೆಗೆ ಸ್ಟಾರ್ ನಿರ್ಮಾಪಕ ದಿಲ್ ರಾಜು ಈ ಸಿನಿಮಾದ ನಿರ್ಮಾಣ ಪಾಲುದಾರರಾಗಿದ್ದಾರೆ. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಗುಣಶೇಖರ್ ಮತ್ತು ದಿಲ್ ರಾಜುಗೆ ಭಾರೀ ನಷ್ಟವಾಗಿದೆಯಂತೆ.

    MORE
    GALLERIES

  • 58

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    60 ಕೋಟಿಯಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಸಿನಿಮಾದ ಬಜೆಟ್​ನ್ನು ಅರ್ಧದಷ್ಟು ಸ್ಟ್ರೀಮಿಂಗ್ ಹಕ್ಕುಗಳ ಮೂಲಕ ಮರುಪಡೆಯಲಾಗಿದೆ. ಆದರೆ, ಥಿಯೇಟರ್ ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್ ಡೀಲ್ ಕ್ಲೋಸ್ ಆಗದ ಕಾರಣ ಉಳಿದ ಅರ್ಧ ಭಾಗವನ್ನು ವಸೂಲಿ ಮಾಡಿಲ್ಲ.

    MORE
    GALLERIES

  • 68

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಈ ಹಿನ್ನೆಲೆಯಲ್ಲಿ ರೂ. 20 ಕೋಟಿ ನಷ್ಟವಾಗಿದೆ ಎಂದು ಬ್ಯುಸಿನೆಸ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ಸಿನಿಮಾದಿಂದ ನಿರ್ದೇಶಕ ಹಾಗೂ ನಿರ್ಮಾಪಕರಿಬ್ಬರಿಗೂ ಭಾರೀ ನಷ್ಟವಾಗಿದೆಯಂತೆ.

    MORE
    GALLERIES

  • 78

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಈ ಚಿತ್ರಕ್ಕಾಗಿ ಸಮಂತಾ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಪೌರಾಣಿಕ ನಾಟಕದಲ್ಲಿ ದೇವ್ ಮೋಹನ್ ರಾಜು ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಣಿ ಶರ್ಮಾ ಅವರ ಸಂಗೀತವಿದ್ದು ಮೋಹನ್ ಬಾಬು, ಪ್ರಕಾಶ್ ರಾಜ್, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗೆಲ್ಲ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ

    MORE
    GALLERIES

  • 88

    Shaakuntalam: ಒಟಿಟಿಗೆ ಬರ್ತಿದೆ ಶಾಕುಂತಲಂ! ಇಲ್ಲಿದೆ ಡೀಟೆಲ್ಸ್

    ಸಮಂತಾ ಅವರು ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಲೈಗರ್ ನಂತರ ಇದು ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಸಿನಿಮಾ ಆಗಿದೆ.

    MORE
    GALLERIES