Samantha Ruth Prabhu: ಸಮಂತಾ ಅವರು ಬಾಲಿವುಡ್ನಿಂದ ಆಫರ್ ಪಡೆಯುತ್ತಿದ್ದಾರೆ. ಇದೀಗ ನಟ ವರುಣ್ ಧವನ್ ಜೊತೆ ಹೊಸ ಪ್ರಾಜೆಕ್ಟ್ ಮಾಡಲಿದ್ದು ಒಟಿಟಿಯಲ್ಲಿ ಮತ್ತೊಮ್ಮೆ ರಾಕ್ ಮಾಡಲಿದ್ದಾರೆ.
ಸಮಂತಾ ಒಂದೆಡೆ ಸಿನಿಮಾ ಮಾಡುತ್ತಿದ್ದು, ಇನ್ನೊಂದೆಡೆ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಅದರ ಭಾಗವಾಗಿ ಸೌತ್ ನಟಿ ಈಗಾಗಲೇ ಅಮೆಜಾನ್ ಪ್ರೈಮ್ಗಾಗಿ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ನಟಿಸಿದ್ದಾರೆ.
2/ 9
ಫ್ಯಾಮಿಲಿ ಮ್ಯಾನ್ 2 ಸಕ್ಸಸ್ ಬಗ್ಗೆ ಹೇಳಬೇಕಾಗಿಲ್ಲ. ಈಗ ನಟಿ ಮತ್ತೊಂದು ವೆಬ್ ಸರಣಿಗೆ ಓಕೆ ಅಂದಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಬರುತ್ತಿದೆ.
3/ 9
ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ದೇಶಕರಾದ ರಾಜ್ ಮತ್ತು ಡಿಕೆ ನಿರ್ದೇಶನದ ಈ ಇತ್ತೀಚಿನ ವೆಬ್ ಸರಣಿಯಲ್ಲಿ ಹಿಂದಿಯ ಯುವ ನಟ ವರುಣ್ ಧವನ್ ಅವರೊಂದಿಗೆ ಸಮಂತಾ ರೊಮ್ಯಾನ್ಸ್ ಮಾಡಲಿದ್ದಾರೆ.
4/ 9
ನವೆಂಬರ್ ಮೊದಲ ವಾರಗಳಲ್ಲಿ ಈ ವೆಬ್ ಸಿರೀಸ್ ಶೂಟಿಂಗ್ ಆರಂಭವಾಗಲಿದೆಯಂತೆ. ಈ ವೆಬ್ ಸೀರೀಸ್ ಸಿಟಾಡೆಲ್ ಅಂತರಾಷ್ಟ್ರೀಯ ಹಿಟ್ ಸರಣಿಯ ಭಾರತೀಯ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದೆ.
5/ 9
ದಿ ಫ್ಯಾಮಿಲಿ ಮ್ಯಾನ್ 2 ಸರಣಿಯ ನಂತರ ರಾಜ್ ಮತ್ತು ಡಿಕೆ ಜೊತೆ ಸಮಂತಾ ಅವರ ಎರಡನೇ ಪ್ರಾಜೆಕ್ಟ್ ಇದಾಗಿದೆ. ಮೊದಲನೆ ಪ್ರಾಜೆಕ್ಟ್ ಸಮಂತಾಗೆ ಬಾಲಿವುಡ್ನಲ್ಲಿಯೂ ಮನ್ನಣೆ ತಂದುಕೊಟ್ಟಿತು.
6/ 9
ಸದ್ಯ ಸತತ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಸಮಂತಾ. ಈ ವರ್ಗದಲ್ಲಿ ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಸಿನಿಮಾದಲ್ಲಿ ಸಮಂತಾ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
7/ 9
ಈ ಚಿತ್ರ ನವೆಂಬರ್ 4 ರಂದು ಬೆಳ್ಳಿತೆರೆಗೆ ಬರಲಿದೆ ಎಂದು ಕೆಲವು ದಿನಗಳ ಹಿಂದೆ ಚಿತ್ರದ ನಿರ್ಮಾಪಕರು ಹೇಳಿದ್ದರು. ಆದರೆ ಆ ದಿನಾಂಕಕ್ಕೆ ಈ ಸಿನಿಮಾ ಬರುತ್ತಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಇದರಿಂದ ಸಮಂತಾ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.
8/ 9
ಇನ್ನು ಅಸಲಿ ವಿಚಾರಕ್ಕೆ ಬಂದರೆ ನವೆಂಬರ್ 4ಕ್ಕೆ ಈ ಸಿನಿಮಾಗೆ ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಮುಗಿಯುವುದಿಲ್ಲ. ಇದರ ಜೊತೆಗೆ ಈ ಸಿನಿಮಾವನ್ನು 3ಡಿ ರೂಪದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಬಯಸಿದೆ.
9/ 9
ಈ ಹಿನ್ನಲೆಯಲ್ಲಿ 3ಡಿ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ಚಿತ್ರತಂಡ ಚಿತ್ರವನ್ನು ಮುಂದೂಡಲು ನಿರ್ಧರಿಸಿದೆಯಂತೆ. ಆದರೆ ಹೊಸ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.