ಯೇ ಮಾಯೆ ಚೆಸಾವೆ ಸಿನಿಮಾ ಮೂಲಕ ಸಮಂತಾ (ಸಮಂತಾ ರುತ್ ಪ್ರಭು) ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಅದೇ ಸಿನಿಮಾದ ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ನಾಲ್ಕು ವರ್ಷಗಳ ನಂತರ ವಿಚ್ಛೇದನಾ ನೀಡುವ ಮೂಲಕ ಇಬ್ಬರೂ ಎಲ್ಲರಿಗೂ ಶಾಕ್ ನೀಡಿದರು. ನಾಗ ಚೈತನ್ಯ ಜೊತೆಗಿನ ಬ್ರೇಕ್ ಅಪ್ ಬಳಿಕ ಸಮಂತಾ ಸದ್ಯ ಸಿನಿಮಾಗಳ ಬಗ್ಗೆ ಹೆಚ್ಚು ಅಗ್ರೆಸ್ಸಿವ್ ಆಗಿದ್ದಾರೆ. ಇತ್ತೀಚಿನ ಅವರ ಯಶೋದಾ ಚಿತ್ರ 2022ರ ನವೆಂವರ್ 11 ರಂದು ಬಿಡುಗಡೆಯಾಗಿ, ಯಶಸ್ವಿ ಕೂಡ ಆಯಿತು. ಸದ್ಯ ಈ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಸಮಂತಾ ನಟಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಶಾಕುಂತಲಂ. ಪುರಾಣದ ಹಿನ್ನೆಲೆ ಇರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ ಮತ್ತು ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಸಿನಿಮಾ ಫೆಬ್ರವರಿ 17 ರಂದು ತೆರೆಗೆ ಬರಲಿದೆ.
ಪ್ರಚಾರದ ಅಂಗವಾಗಿ ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಮಲ್ಲಿಕಾ.. ಮಲ್ಲಿಕಾ (ಮಲ್ಲಿಕಾ ಮಲ್ಲಿಕಾ - ಸಾಹಿತ್ಯ) ಈ ಹಾಡನ್ನು ಮಣಿ ಶರ್ಮಾ ಸಂಯೋಜಿಸಿದ್ದಾರೆ ಮತ್ತು ರಮ್ಯಾ ಬೆಹರಾ ಹಾಡಿದ್ದಾರೆ. ಹಾಗೂ ಚೈತನ್ಯ ಪ್ರಸಾದ್ ಬರೆದಿದ್ದಾರೆ. ಮಲ್ಲಿಕಾ..ಮಲ್ಲಿಕಾ ಎನ್ನುವ ಈ ಮೆಲೋಡಿ ಹಾಡು ಕೇಳಲು ತುಂಬಾ ಇಂಪಾಗಿದೆ ಎನ್ನುತ್ತಾರೆ ನೆಟ್ಟಿಗರು. ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಾಡು ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಇನ್ನು ಶಾಕುಂತಲಂ ಚಿತ್ರದ ವಿಚಾರಕ್ಕೆ ಬಂದರೆ... ಸಮಂತಾ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪೌರಾಣಿಕ ನಾಟಕದಲ್ಲಿ ದೇವ್ ಮೋಹನ್ ರಾಜು ದುಷ್ಯಂತು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಮೋಹನ್ ಬಾಬು, ಪ್ರಕಾಶ್ ರಾಜ್, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗೆಲ್ಲ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗಷ್ಟೇ ಸಮಂತಾ ಅಭಿನಯಿಸಿದ್ದ ಯಶೋಧ ಚಿತ್ರ ನವೆಂಬರ್ 11 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಹರಿ ಮತ್ತು ಹರೀಶ್ ನಿರ್ದೇಶಿಸಿದ್ದರು. ಸಮಂತಾ ಜೊತೆಗೆ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ಕುಮಾರ್ ಮತ್ತು ರಾವ್ ರಮೇಶ್ ಈ ಆಕ್ಷನ್ ಥ್ರಿಲ್ಲರ್ನಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿದ್ದರು. ಮಣಿ ಶರ್ಮಾ ಅವರ ಸಂಗೀತ ಚಿತ್ರಕ್ಕಿತ್ತು.
ಸಮಂತಾ ಒಂದೆಡೆ ಸಿನಿಮಾ ಮಾಡುತ್ತಿದ್ದು, ಇನ್ನೊಂದೆಡೆ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅಮೆಜಾನ್ ಪ್ರೈಮ್ಗಾಗಿ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಸಮಂತಾ ನಟಿಸಿದ್ದಾರೆ. ಅಲ್ಲದೇ ಇದೇ ವೇಳೆ ಮತ್ತೊಂದು ವೆಬ್ ಸರಣಿಗೆ ಸಮಂತಾ ಓಕೆ ಅಂದಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಬರುತ್ತಿದೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ದೇಶಕರಾದ ರಾಜ್ ಮತ್ತು ಡಿಕೆ ನಿರ್ದೇಶನದ ಇತ್ತೀಚಿನ ವೆಬ್ ಸರಣಿಯಲ್ಲಿ ಹಿಂದಿಯ ಯುವ ನಟ ವರುಣ್ ಧವನ್ ಅವರೊಂದಿಗೆ ಸಮಂತಾ ರೊಮ್ಯಾನ್ಸ್ ಮಾಡಲಿದ್ದಾರೆ. ಈ ವೆಬ್ ಸೀರೀಸ್ ಸಿಟಾಡೆಲ್ ಅಂತರಾಷ್ಟ್ರೀಯ ಹಿಟ್ ಸರಣಿಯ ಭಾರತೀಯ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತದೆ. ದಿ ಫ್ಯಾಮಿಲಿ ಮ್ಯಾನ್ 2 ಸರಣಿಯ ನಂತರ ರಾಜ್ ಮತ್ತು ಡಿಕೆ ಜೊತೆ ಸಮಂತಾ ಅವರ ಎರಡನೇ ಪ್ರಾಜೆಕ್ಟ್ ಇದಾಗಿದೆ.
ಆ ನಡುವೆ ಸಮಂತಾ ಕೆಲವು ದಿನಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಈ ವಿಷಯವನ್ನು ಸಮಂತಾ ಸಾಮಾಜಿಕ ಜಾಲತಾಣದ ಹಂಚಿಕೊಂಡಿದ್ದರು. ಇದರಿಂದಾಗಿ ಅವರ ಆರೋಗ್ಯದ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡಿತ್ತು. ಮೇಲಾಗಿ ಆಕೆ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದು ಕೇವಲ ವದಂತಿ ಎಂದು ಸಮಂತಾ ಸ್ಪಷ್ಟನೆ ನೀಡಿದ್ದರು.
ಸಮಂತಾ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ವದಂತಿ ಹಬ್ಬಿಸಿದ್ದಕ್ಕೆ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿತ್ತು. ಸದ್ಯ ಸಮಂತಾ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಸದ್ಯ ಮನೆಯಲ್ಲಿಯೇ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಕಾಯಿಲೆಗೆ ಚಿಕಿತ್ಸೆ ಪಡೆದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಇಂತಹ ವದಂತಿಗಳನ್ನು ಯಾರೂ ನಂಬಬೇಡಿ ಎಂದು ಸಮಂತಾ ಚಿತ್ರತಂಡ ಹೇಳಿತ್ತು. ಹೀಗಾಗಿ ಸಮಂತಾ ಆರೋಗ್ಯದ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಬಿದ್ದಿದೆ.
ಇನ್ನು ಸಮಂತಾ ಯಶೋದಾ ಸಿನಿಮಾದ ವಿಚಾರಕ್ಕೆ ಬಂದರೆ. ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ಕುಮಾರ್ ಮತ್ತು ರಾವ್ ರಮೇಶ್ ಈ ಆಕ್ಷನ್ ಥ್ರಿಲ್ಲರ್ನಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ.
ಸದ್ಯ ಸಮಂತಾ ಸತತ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಗದಲ್ಲಿ ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಸಿನಿಮಾ ಕೂಡ ಒಂದಾಗಿದೆ. ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರ ನವೆಂಬರ್ 4 ರಂದು ಬೆಳ್ಳಿತೆರೆಗೆ ಬರಲಿದೆ ಎಂದು ಕೆಲವು ದಿನಗಳ ಹಿಂದೆ ಚಿತ್ರದ ನಿರ್ಮಾಪಕರು ಘೋಷಿಸಿದರು. ಆದರೆ ಆ ದಿನಾಂಕದಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎಂದು ನಿರ್ಮಾಪಕರು ಹೇಳಿದ್ದರು. ನಿಜ ಸಂಗತಿ ಏನೆಂದರೆ ನವೆಂಬರ್ 4ರಂದು ಸಿನಿಮಾ ಬಿಡುಗಡೆಗೊಳಿಸಲು ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಮುಗಿದಿರಲಿಲ್ಲ.
ಇದರ ಜೊತೆಗೆ ಈ ಸಿನಿಮಾವನ್ನು 3ಡಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಈ ಹಿನ್ನಲೆಯಲ್ಲಿ 3ಡಿ ವರ್ಕ್ಗಳಿಗೆ ಹೆಚ್ಚಿನ ಸಮಯ ಬೇಕಾಗಿದ್ದರಿಂದ ಚಿತ್ರವನ್ನು ಮುಂದೂಡಲಾಗಿದೆ. ಫೆಬ್ರವರಿ 17 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಮೊದಲ ಬಾರಿಗೆ ಸಮಂತಾ ಪೌರಾಣಿಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಪೌರಾಣಿಕ ನಾಟಕದಲ್ಲಿ ದೇವ್ ಮೋಹನ್ ರಾಜು ದುಷ್ಯಂತು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ದೇವ್ ಮೋಹನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಮಂತಾ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು
ಈ ಚಿತ್ರದಲ್ಲಿ ಸಮಂತಾ ಮತ್ತು ದೇವ್ ಮೋಹನ್ ಜೊತೆಗೆ ಮೋಹನ್ ಬಾಬು, ಪ್ರಕಾಶ್ ರಾಜ್, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗೆಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಣ ಟೀಮ್ ವರ್ಕ್ಸ್ನಲ್ಲಿ ನೀಲಿಮಾ ಗುಣ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.