ಸ್ಯಾಮ್ ಅನೇಕ ಸಂದರ್ಶನದಲ್ಲಿ ಭಾಗಿಯಾಗಿದ್ರು. ಈ ವೇಳೆ ಸಮಂತಾ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಸಿನಿಮಾ ರಂಗದಲ್ಲಿ ನಟ-ನಟಿಯರಿಗೆ ಸಮಾನ ಸಂಭಾವನೆ ನೀಡುವ ಬಗ್ಗೆ ಸ್ಯಾಮ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಮಾನ ವೇತನಕ್ಕಾಗಿ ನೇರವಾಗಿ ಹೋರಾಟ ಮಾಡುವುದಕ್ಕಿಂತ ಪರೋಕ್ಷವಾಗಿ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಿರ್ಮಾಪಕರು ಚಿತ್ರಕ್ಕಾಗಿ ನಾಯಕಿಯರು ಶ್ರಮಿಸುವುದನ್ನು ಗುರುತಿಸಿ ಅದಕ್ಕೆ ತಕ್ಕಂತೆ ಸಂಭಾವನೆ ನೀಡಬೇಕು ಎಂದು ಸಮಂತಾ ಹೇಳಿದ್ದಾರೆ. ಫೋಟೋ: ಟ್ವಿಟರ್
ಸಮಂತಾ ಅಭಿನಯದ ಇನ್ನೊಂದು ಚಿತ್ರ ಯಶೋದಾ. ಕಳೆದ ವರ್ಷ ನವೆಂಬರ್ 11 ರಂದು ಬಿಡುಗಡೆಯಾಗಿದ್ದು, ಸಿನಿಮಾ ಸಕ್ಸಸ್ ಕಂಡಿದೆ. ಹರಿ ಮತ್ತು ಹರೀಶ್ ನಿರ್ದೇಶನ ಮಾಡಿದ್ದಾರೆ. ಸಮಂತಾ ಜೊತೆಗೆ ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ ಕುಮಾರ್ ಮತ್ತು ರಾವ್ ರಮೇಶ್ ಈ ಆಕ್ಷನ್ ಥ್ರಿಲ್ಲರ್ನಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿದ್ದಾರೆ. ಈ ಸಿನಿಮಾಗೂ ಮಣಿ ಶರ್ಮಾ ಅವರು ಸಂಗೀತ ನೀಡಿದ್ದಾರೆ. ಫೋಟೋ: ಟ್ವಿಟರ್