Samantha: ಬಾಲಿವುಡ್ ಸಿನಿಮಾಗಳಿಂದ ಸಮಂತಾ ಔಟ್! ಲಾಂಗ್ ಬ್ರೇಕ್ ತೆಗೆದುಕೊಳ್ತಾರಾ ಸ್ಯಾಮ್?
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಬಹು ಬೇಡಿಕೆ ನಟಿ ಸಮಂತಾ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅಭಿನಯದಿಂದ ಲಾಂಗ್ ಬ್ರೇಕ್ ತೆಗೆದುಕೊಳ್ಳಲು ಸ್ಯಾಮ್ ನಿರ್ಧಾರ ಮಾಡಿದ್ದಾರೆ.
ನಟಿ ಸಮಂತಾ ಮಯೋಸಿಟಿಸ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸಮಂತಾಗೆ ವಿಶ್ರಾಂತಿ ಅವಶ್ಯಕತೆ ಇದೆ.
2/ 8
ಸಂಪೂರ್ಣ ಗುಣಮುಖರಾಗುವವರೆಗು ಚಿತ್ರಗಳಿಂದ ದೀರ್ಘ ವಿರಾಮ ತೆಗೆದುಕೊಳ್ಳಲು ಸಮಂತಾ ನಿರ್ಧರಿಸಿದ್ದಾರಂತೆ.
3/ 8
ಅನಾರೋಗ್ಯದ ಕಾರಣಕ್ಕೆ ನಟಿ ಸಮಂತಾ ಅಭಿನಯ ಯಶೋದ ಚಿತ್ರದ ಪ್ರಚಾರಕ್ಕೂ ಅವರು ಬರಲಿಲ್ಲ. ಬಾಲಿವುಡ್ ನಟ ವರುಣ್ ಧವನ್ ಜೊತೆ ಸಮಂತಾ ಅವರ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿತ್ತು.
4/ 8
ವರುಣ್ ಧವನ್ ಜೊತೆಗಿನ ಸಿನಿಮಾದಿಂದ ಸಮಂತಾ ಹೊರನಡೆದಿದ್ದಾರೆ ಎನ್ನಲಾಗಿದೆ. ಸಂಪೂರ್ಣವಾಗಿ ಗುಣವಾಗುವವರೆಗೂ ಸಿನಿಮಾದಿಂದ ದೂರ ಉಳಿಯಲು ನಟಿ ನಿರ್ಧರಿಸಿದ್ದಾರೆ.
5/ 8
ಅಮೆಜಾನ್ ಪ್ರೈಮ್ನ ವೆಬ್ ಸರಣಿ ಫ್ಯಾಮಿಲಿ ಮ್ಯಾನ್ 2ರ ಅದ್ಭುತ ಯಶಸ್ಸಿನ ನಂತರ ಸಮಂತಾ ಸ್ಟಾರ್ಡಮ್ ಗಗನಕ್ಕೇರಿದೆ. ಪ್ರಸ್ತುತ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು
6/ 8
ವಿಜಯ್ ದೇವರಕೊಂಡ ಜೊತೆಗಿನ ಖುಷಿ ಚಿತ್ರದ ಶೂಟಿಂಗ್ ಕೂಡ ಅರ್ಧಕ್ಕೆ ನಿಂತಿದೆ. ಕಾರಣಾಂತರಗಳಿಂದ ಬಿಡುಗಡೆ ತಡವಾಗಲಿದೆ ಎಂದು ವಿಜಯ್ ದೇವರಕೊಂಡ ಈ ಹಿಂದೆ ಹೇಳಿಕೆ ನೀಡಿದ್ದರು.
7/ 8
ಸಮಂತಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಅಭಿಮಾನಿಗಳ ಬಹು ನಿರೀಕ್ಷಿತ ಚಿತ್ರ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ ಮಸ್-ಹೊಸ ವರ್ಷದ ಬಿಡುಗಡೆ ಎಂದು ಘೋಷಿಸಿದ್ರು.
8/ 8
ಇದುವರೆಗೆ ಚಿತ್ರದ 60 ಭಾಗವಷ್ಟೇ ಚಿತ್ರೀಕರಣ ಪೂರ್ಣಗೊಂಡಿದೆ. ಕಾರಣಾಂತರಗಳಿಂದ ಮುಂದಿನ ವರ್ಷಕ್ಕೆ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿರುವುದಾಗಿ ವಿಜಯ್ ದೇವರಕೊಂಡ ಹೇಳಿದ್ದಾರೆ. ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.