2021ನೇ ವರ್ಷ ಸಮಂತಾಗೆ ಕಹಿ ನೆನಪು ನೀಡಿದೆ, ಅದೇ ವರ್ಷ ನಾಗ ಚೈತನ್ಯ ಜೊತೆ ವಿಚ್ಛೇದನ, ಸಮಂತಾ ಹಲವು ಟೀಕೆಗಳಿಗೆ ಗುರಿಯಾದರು. ಅದರ ನಂತರ, ಮೈಯೋಸಿಟಿಸಸ್ ಕಾಯಿಲೆಗೆ ಒಳಗಾಗಿ ಕಳೆದ ವರ್ಷವೂ ಸಂತೋಷವಾಗಿರಲಿಲ್ಲ. ಇದೀಗ ಈ ಎರಡು ವರ್ಷಗಳ ಕಹಿ ಅನುಭವಗಳಿಂದ ಹೊರ ಬಂದಿದ್ದೇನೆ ಎಂದು ಹೇಳುತ್ತಲೇ ಸಮಂತಾ ಈ ವರ್ಷ ಚೆನ್ನಾಗಿರುತ್ತೆ ಎಂದಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.