Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

Samantha Ruth Prabhu: ಮೈಯೋಸಿಟಿಸ್ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ ನಟಿ ಸಮಂತಾ ದೇವರಿಗೆ ಹರಕೆ ತೀರಿಸಿದ್ದಾರೆ. ಸಾಲು ಸಾಲು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿರುವ ಸ್ಯಾಮ್ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

First published:

  • 18

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ವಿಚಿತ್ರ ಕಾಯಿಲೆಗೆ ಒಳಗಾಗಿದ್ದ ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕೆಲ ತಿಂಗಳು ಬ್ರೇಕ್ ತೆಗೆದುಕೊಂಡಿದ್ದ ಸಮಂತಾ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಸಮಂತಾ ತಮಿಳುನಾಡಿನ ಪ್ರಸಿದ್ಧ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

    MORE
    GALLERIES

  • 28

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ಪಳನಿ ದೇವಸ್ಥಾನದಲ್ಲಿ ಸಮಂತಾ ಪೂಜೆ ಸಲ್ಲಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಸಮಂತಾ ಸಿಂಪಲ್​ ವೈಟ್​ ಬಿಳಿ ಸಲ್ವಾರ್ ಕಮೀಜ್‌ ಧರಿಸಿ ದೇಗುಲಕ್ಕೆ ಬಂದಿದ್ರು, ಈ ವೇಳೆ ಪಳನಿ ಮುರುಗನ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    MORE
    GALLERIES

  • 38

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ಪಳನಿ ಮುರುಗನ್ ಸ್ವಾಮಿ ದೇವಾಲಯದಲ್ಲಿ 600 ಮೆಟ್ಟಿಲುಗಳನ್ನು ಹತ್ತಿದ ಸಮಂತಾ, ಪ್ರತಿ ಮೆಟ್ಟಿಲಿಗೂ ಕರ್ಪೂರ ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಸ್ಯಾಮ್ ಭಕ್ತಿ ಭಾವ ಕಂಡು ನೆರೆದಿದ್ದ ಜನರು ಅಚ್ಚರಿಪಟ್ಟಿದ್ದಾರೆ.

    MORE
    GALLERIES

  • 48

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ನಟಿ ಸಮಂತಾ ಹರಕೆ ತೀರಿಸಿದ ವೇಳೆ ಚಿತ್ರ ನಿರ್ಮಾಪಕ ಸಿ ಪ್ರೇಮ್ ಕುಮಾರ್ ಜೊತೆಗಿದ್ದರು. ಅವರ ಜೊತೆ ಸ್ಯಾಮ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹಳೇ ಸಿನಿಮಾ ಟೀಮ್ ಜೊತೆ ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿದ್ರು.

    MORE
    GALLERIES

  • 58

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ಸಮಂತಾ ಆಧ್ಯಾತ್ಮಿಕತೆಯತ್ತ ಮನಸ್ಸು ಮಾಡಿದಂತೆ ಕಾಣುತ್ತದೆ. ಅನೇಕ ಬಾರಿ ಸಮಂತಾ ಹಲವು ದೇಗುಲಕ್ಕೆ ಭೇಟಿ ನೀಡುತ್ತಾರೆ. ಸಮಂತಾಗೆ ದೇವರ ಮೇಲೆ ಅಪಾರ ನಂಬಿಕೆ ಕೂಡ ಇದೆ.

    MORE
    GALLERIES

  • 68

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ಆಗಾಗ ಸಮಂತಾ ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡ್ತಾರೆ. ಈ ಹಿಂದೆ 2021ರಲ್ಲಿ ಸಮಂತಾ ಪವಿತ್ರ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದರು. ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಮಂತಾ ಫೋಟೋಗಳು ಕೂಡ ವೈರಲ್ ಆಗಿವೆ.

    MORE
    GALLERIES

  • 78

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ಇತ್ತೀಚಿಗಷ್ಟೆ ಸ್ಯಾಮ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ತಮ್ಮ ಆರೋಗ್ಯದ ಅಪ್ಡೇಟ್ ಹಂಚಿಕೊಂಡಿದ್ದರು. ಮೈಯೋಸಿಟಿಸ್​ಗಾಗಿ ಮಾಸಿಕ ಐವಿಐಜಿ (ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ ಥೆರಪಿ) ಸೆಷನ್​ಗೆ ಹಾಜರಾಗಿದ್ದೇನೆ ಎಂದು ಸಮಂತಾ ಹೇಳಿದ್ರು. ಈ ಹೆಲ್ತ್ ಅಪ್ಡೇಟ್ ಜೊತೆಗೆ ನಾನು ಮತ್ತೆ ನಾರ್ಮಲ್ ಸ್ಥಿತಿಗೆ ಮರಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    MORE
    GALLERIES

  • 88

    Samantha: 600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಸಮಂತಾ! ಸ್ಯಾಮ್​ ವಿಶೇಷ ಪೂಜೆ ಸಲ್ಲಿಸಿದ್ದು ಎಲ್ಲಿ?

    ನಟಿ ಬಹು ನಿರೀಕ್ಷಿತ ಸಿನಿಮಾ ಶಾಕುಂತಲಂ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಸಮಂತಾ ಬ್ಯುಸಿ ಆಗಿದ್ದು, ಜೊತೆಗೆ ರಾಜ್ ಮತ್ತು ಡಿಕೆ ಅವರ ಮುಂಬರುವ ವೆಬ್ ಸೀರಿಸ್ ಸಿಟಾಡೆಲ್​ ಶೂಟಿಂಗ್​​ನಲ್ಲಿ ಸಮಂತಾ ಭಾಗಿಯಾಗಿದ್ದಾರೆ.

    MORE
    GALLERIES