Samantha: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಕ್ಯಾಮೆರಾ ಮುಂದೆ ಬರ್ತಿದ್ದಾರೆ ಸ್ಯಾಮ್!
ಕಳೆದ ಕೆಲವು ದಿನಗಳಿಂದ ಸಮಂತಾ ಅನಾರೋಗ್ಯ ಕಾಡುತ್ತಿದ್ದು, ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಇತ್ತೀಚೆಗೆ ಸಮಂತಾ ಚೇತರಿಸಿಕೊಂಡಿದ್ದು, ಶೀಘ್ರವೇ ಸಿನಿಮಾ ಶೂಟಿಂಗ್ಗೆ ಮರಳಲಿದ್ದಾರಂತೆ.
ಕಳೆದ ಕೆಲವು ದಿನಗಳಿಂದ ಸಮಂತಾ ಅನಾರೋಗ್ಯ ಕಾಡುತ್ತಿದ್ದು, ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಇತ್ತೀಚೆಗೆ ಸಮಂತಾ ಚೇತರಿಸಿಕೊಂಡಿದ್ದು, ಶೀಘ್ರವೇ ಸಿನಿಮಾ ಶೂಟಿಂಗ್ಗೆ ಮರಳಲಿದ್ದಾರಂತೆ.
2/ 8
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಮೈಯೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಸ್ಯಾಮ್ ಸ್ವತಃ ಅವ್ರೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇದ್ರಿಂದ ಸಿನಿಮ ಕೆಲಸದಿಂದಲೂ ದೂರ ಉಳಿದಿದ್ದಾರೆ.
3/ 8
ಇತ್ತೀಚೆಗೆ ಸಮಂತಾ ಆರೋಗ್ಯ ಹದಗೆಟ್ಟಿದೆ ಎಂಬ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿಕಿತ್ಸೆಗಾಗಿ ಕೇರಳಕ್ಕೆ ಬಳಿಕ ದಕ್ಷಿಣ ಕೊರಿಯಾಕ್ಕೆ ಹೋಗಿದ್ದಾರೆ ಎಂಬ ವರದಿಗಳೂ ಬಂದಿದ್ದವು. ಆದರೆ ಸಮಂತಾ ಕುಟುಂಬದವರು ಸಮಂತಾ ಎಲ್ಲೂ ಹೋಗಿಲ್ಲ ಚೆನ್ನಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
4/ 8
ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಸರಿಯಿಲ್ಲದ ಕಾರಣ ಸಮಂತಾ ಶೂಟಿಂಗ್ ನಿಂದ ದೂರ ಉಳಿದಿದ್ದರು. ಇದರಿಂದ ಸಮಂತಾ ಸಿನಿಮಾ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಜೊತೆಗೆ ಹಲವು ಪ್ರಾಜೆಕ್ಟ್ ಗಳಿಂದಲೂ ಸಹ ನಟಿ ಹೊರ ಬಂದಿದ್ದಾರೆ.
5/ 8
ಸಮಂತಾ ಚೇತರಿಸಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಸದ್ಯದಲ್ಲೇ ಎಲ್ಲ ಚಿತ್ರಗಳನ್ನೂ ಕಂಪ್ಲೀಟ್ ಮಾಡಲಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ಖುಷಿ ಚಿತ್ರದ ಶೂಟಿಂಗ್ ಶೇ.80ರಷ್ಟು ಕಂಪ್ಲೀಟ್ ಆಗಿದೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲಿದೆ.
6/ 8
ಬಾಲಿವುಡ್ ನಲ್ಲೂ ಸಿನಿಮಾ ಮಾಡ್ತಿರುವ ಸ್ಯಾಮ್ ಬಾಲಿವುಡ್ ಪ್ರಾಜೆಕ್ಟ್ ಸಿಟಾಡೆಲ್ ಸೀರಿಸ್ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ರಾಜ್ ಮತ್ತು ಡಿಕೆ ಈ ಸೀರಿಸ್ ನಿರ್ದೇಶಿಸುತ್ತಿದ್ದಾರೆ
7/ 8
ಸಮಂತಾ ಅಭಿನಯದ ಇತ್ತೀಚಿನ ಚಿತ್ರ ಯಶೋದಾ ನವೆಂಬರ್ 11 ರಂದು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು. ಚಿತ್ರವು ಪ್ರಸ್ತುತ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಒಟಿಟಿಯಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
8/ 8
ಸಮಂತಾ ನಟಿಸುತ್ತಿರುವ ಮತ್ತೊಂದು ಚಿತ್ರ ಶಾಕುಂತಲಂ. ಇತ್ತೀಚೆಗಷ್ಟೇ ಚಿತ್ರ ತಂಡ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ಸಿನಿಮಾ ಫೆಬ್ರವರಿ 17 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈ ಸಿನಿಮಾವನ್ನು 3ಡಿಯಲ್ಲಿ ನೋಡಬಹುದಾಗಿದೆ.