Samantha Ruth Prabhu: ಸಮಂತಾ ಆರೋಗ್ಯ ಇನ್ನೂ ಸುಧಾರಿಸಿಲ್ವಾ? ಅಭಿಮಾನಿಗಳಿಗೆ ಆತಂಕ ಸಮಂತಾ ಅವರು ಬಾಲಿವುಡ್ ಪ್ರಾಜೆಕ್ಟ್ ಕೈಬಿಟ್ಟ ವಿಚಾರ ಈಗಾಗಲೇ ಸುದ್ದಿಯಾಗಿದೆ. ಆದರೆ ಈಗ ಅಭಿಮಾನಿಗಳ ಮಧ್ಯೆ ಮತ್ತೊಂದು ಚರ್ಚೆ ಶುರುವಾಗಿದೆ. ನಟಿಯ ಆರೋಗ್ಯ ಸುಧಾರಿಸಿಲ್ವಾ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.
1 / 8
ನಟಿ ಸಮಂತಾ ರುಥ್ ಪ್ರಭು ಅವರು ಬಾಲಿವುಡ್ ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಎಷ್ಟೊಳ್ಳೆ ಪ್ರಾಜೆಕ್ಟ್ ಬಿಟ್ಟರು ಎಂದು ಜನ ಮಾತನಾಡುತ್ತಿದ್ದಾರೆ.
2 / 8
ಸಮಂತಾ ಬಾಲಿವುಡ್ ಪ್ರಾಜೆಕ್ಟ್ನಿಂದ ಹಿಂದೆ ಸರಿದಿರೋ ವಿಚಾರ ಹೈಲೈಟ್ ಆಗಿದ್ದರೂ ಅದರೊಂದಿಗೆ ಈಗ ಅವರ ಅಭಿಮಾನಿಗಳಲ್ಲಿ ಹೊಸ ಆತಂಕ ಶುರುವಾಗಿದೆ.
3 / 8
ಆರೋಗ್ಯದ ವಿಚಾರವಾಗಿ ನಟಿ ಅಷ್ಟು ದೊಡ್ಡ ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ್ದಾರೆ ಎಂದರೆ ಸಮಂತಾ ಅವರ ಆರೋಗ್ಯ ಇನ್ನೂ ಸುಧಾರಿಸಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
4 / 8
ಇದೇ ಒಂದು ವಿಚಾರ ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ನಟಿಯ ಆರೋಗ್ಯ ಸ್ಥಿತಿ ಈಗ ಹೇಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
5 / 8
ಆದರೆ ಈ ಬಗ್ಗೆ ನಟಿಯೇ ಯಾವುದೇ ಹೇಳಿಕೆ ಕೊಡದ ಕಾರಣ ಏನನ್ನೂ ಊಹಿಸುವುದು ಕಷ್ಟ. ಈ ಹಿಂದೆ ಆರೋಗ್ಯ ಸುಧಾರಿಸುತ್ತಿರುವುದಾಗಿ ನಟಿ ಹೇಳಿದ್ದರು.
6 / 8
ಆದರೂ ನಟಿ ಈಗ ಪ್ರಾಜೆಕ್ಟ್ನಿಂದ ಹಿಂದೆ ಸರಿದು ರೆಸ್ಟ್ ಮಾಡುತ್ತಿದ್ದಾರೆ ಎಂದಾದರೆ ಇನ್ನೂ ಸಂಪೂರ್ಣವಾಗಿ ಸುಧಾರಿಸಿಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ಸ್ಪಷ್ಟವಾಗಿದೆ.
7 / 8
ಸಮಂತಾ ಅವರ ಯಶೋದಾ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಮಹಿಳಾ ಪ್ರಧಾನ ಸಿನಿಮಾ ಒಂದು ಭರ್ಜರಿ 30 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಸೈ ಎನಿಸಿಕೊಂಡಿತು.
8 / 8
ಹೊಟ್ಟೆಯಲ್ಲಿರುವ ಮಗುವನ್ನು ಅವಧಿಗೆ ಮುನ್ನವೇ ಹೊರತೆಗೆದು ಅದನ್ನು ಸೌಂದರ್ಯವರ್ಧಕ ಉತ್ನನ್ನಗಳಿಗಾಗಿ ಬಳಸಿಕೊಳ್ಳುವ ಜಾಲದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.
First published: January 02, 2023, 06:32 IST