Samantha: ರೆಡ್ ಡ್ರೆಸ್ನಲ್ಲಿ ಸ್ಯಾಮ್ ಪೋಸ್, ಯಾಕಮ್ಮ ಹಿಂಗಾದೆ ಅಂದ್ರು ಅಭಿಮಾನಿಗಳು
Samantha Red dress Photo: ಟಾಲಿವುಡ್ ಬೆಡಗಿ ಸಮಂತಾ ದಿನೇ ದಿನೇ ತಮ್ಮ ಚಾರ್ಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ದಿನಕ್ಕೊಂದು ಹಾಟ್ ಫೋಟೋ ಹಾಕಿ ಅಭಿಮಾನಿಗಳ ನಿದ್ದೆ ಹಾಳು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಸಮಂತಾ ಅವರ ಒಂದು ಫೋಟೋ ವೈರಲ್ ಆಗಿದ್ದು, ಈಗ ಮತ್ತೆ ಮತ್ತೊಂದು ಫೋಟೋ ವೈರಲ್ ಆಗಿದ್ದು, ಈ ಡ್ರೆಸ್ ನಲ್ಲಿ ಸ್ಯಾಮ್ ಬಹಳ ಹಾಟ್ ಆಗಿ ಕಾಣುತ್ತಿದ್ದಾರೆ.
ಸಮಂತಾ ಯಾವಾಗಲೂ ಸುದ್ದಿಯಲ್ಲಿರುವ ನಟಿ, ಅದರಲ್ಲೂ ಡೈವೋರ್ಸ್ ನಂತರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದು ಸಿನಿಮಾ ವಿಚಾರವಾಗಲಿ ಅಥವಾ ವೈಯಕ್ತಿವಾಗಿಯಾಗಲಿ ಸಮಂತಾ ಸುದ್ದಿಯಲ್ಲಿರದ ದಿನಗಳಿಲ್ಲ.
2/ 8
ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿರುವ ಸಮಂತಾ ಫುಲ್ ಬ್ಯುಸಿ ಇದ್ಧಾರೆ, ಸಿನಿಮಾ, ಜಾಹೀರಾತು ಹೀಗೆ ಎಲ್ಲ ಕಡೆ ಸಮಂತಾ ಮೋಡಿ ಮಾಡುತ್ತಿದ್ದಾರೆ. ಎಲ್ಲಾ ಕಡೆ ಸ್ಯಾಮ್ ಹವಾ ಎಂದರೆ ತಪ್ಪಿಲ್ಲ.
3/ 8
ಈ ಸಮಂತಾ ಅವರ ಮತ್ತೊಂದು ಫೋಟೋ ವೈರಲ್ ಆಗಿದೆ. ರೆಡ್ ಟಾಪ್ನಲ್ಲಿ ಕಾಣಿಸಿಕೊಂಡಿರುವ ಸ್ಯಾಮ್ ಫೋಟೋ ಅಭಿಮಾನಿಗಳ ಕಣ್ಣು ಕುಕ್ಕಿದೆ. ಎಲ್ಲಾ ಕಡೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
4/ 8
ಅಲ್ಲದೇ ಸಮಂತಾ ಅವರ ಇತ್ತೀಚಿನ ಅವತಾರಗಳನ್ನು ನೋಡಿ ಅಭಿಮಾನಿಗಳು ಯಾಕಮ್ಮ ಹಿಂಗಾದೆ ಎನ್ನುತ್ತಿದ್ದಾರೆ. ಅಲ್ಲದೇ ಸಮಂತಾ ಫುಲ್ ಬದಲಾಗಿದ್ದಾರೆ ಎಂದು ಸಹ ಹೇಳುತ್ತಿದ್ದಾರೆ.
5/ 8
ಇನ್ನು ಈ ರೆಡ್ ಡ್ರೆಸ್ನಲ್ಲಿ ಸಮಂತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಚೆಂದದ ಪೋಸ್ ಕೂಡ ಕೊಟ್ಟಿದ್ದಾರೆ. ಹಾಗೆಯೇ ಸ್ಯಾಮ್ ಯಾವುದೇ ಫೋಟೋ ಹಾಕಿದರೂ ಸಹ ಜನ ಅದನ್ನು ಟ್ರೋಲ್ ಮಾಡುವುದನ್ನ ಬಿಡುವುದಿಲ್ಲ.
6/ 8
ಇನ್ನು ಸಮಂತಾ ಸಿನಿ ರಂಗಕ್ಕೆ ಬಂದು 12 ವರ್ಷವಾಗಿದೆ. ಮೊದಲಿನಿಂದಲೂ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಸಮಂತಾ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಿದ್ದಾರೆ. ಸಿನಿಮಾಗಳನ್ನು ಕೂಡ ಬಹಳ ಚೂಸಿಯಾಗಿ ಆಯ್ಕೆ ಮಾಡುತ್ತಿದ್ಧಾರೆ.
7/ 8
ಇನ್ನು ಪುಷ್ಪ ಚಿತ್ರದಲ್ಲಿ ಸೊಂಟ ಬಳುಕಿಸಿ ಕಿಚ್ಚು ಹತ್ತಿಸಿದ್ದ ಸ್ಯಾಮ್ ನಂತರ ಸಂಭಾವನೆ ಹೆಚ್ಚಿಸಿಕೊಂಡು ಸುದ್ದಿ ಮಾಡಿದ್ದರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಈ ಸುಂದರಿ.
8/ 8
ಸದ್ಯ ಸ್ಯಾಮ್ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಬ್ಯುಸಿ ಇದ್ದು, ಆಗಾಗ ಶೂಟಿಂಗ್ ಜಾಗದಿಂದ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.