ಸಮಂತಾ (Samantha) ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಟಾಕ್ ಆಫ್ ದಿ ಟೌನ್ (Talk of The Town) ಅಂದರೆ ತಪ್ಪಾಗುವುದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಸಮಂತಾ ಸುದ್ದಿಯಾಗುತ್ತಿರುತ್ತಾರೆ
2/ 7
ನಟಿ ಸಮಂತಾ ಸದ್ಯ ‘ಶಾಕುಂತಲೆ’ ಅವತಾರ ರಿವೀಲ್ ಮಾಡಿ ಸುದ್ದಿ ಆಗಿದ್ದರು. ‘ಶಾಕುಂತಲೆ’ ರೂಪದಲ್ಲಿ ದರ್ಶನ ಕೊಟ್ಟ ಸಮಂತಾಳನ್ನು ಅಭಿಮಾನಿ(Fans)ಗಳು ಕೊಂಡಾಡಿದ್ದಾರೆ. ‘ಶಾಕುಂತಲಂ’ (Shaakuntalam) ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ.
3/ 7
ಸಮಂತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಸೀರೆ ಉಟ್ಟ ಫೋಟೋ ಹಾಕಿ ಗಮನ ಸೆಳೆಯುತ್ತಿದ್ದಾರೆ. ಈ ಫೋಟೋದಲ್ಲಿ ಅವರ ಸೀರೆ ಹಾಗೂ ಕಿವಿಯ ಓಲೆ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬೆಲೆಯನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ.
4/ 7
ಈ ಸೀರೆಯ ಬೆಲೆ ಬರೋಬ್ಬರಿ 1,14,999 ರೂಪಾಯಿ. ಸಮಂತಾರ ಸೀರೆ ಬೆಲೆ ಕೇಳಿ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕೆಲವರು ಸೀರೆಯನ್ನು ನೋಡಿ ಮೆಚ್ಚುಗೆ ಹೊರಹಾಕುತ್ತಿದ್ದಾರೆ. ಇನ್ನೂ ಕೆಲವರು ಈ ದುಬಾರಿ ಬೆಲೆಯ ಸೀರೆ ಬೇಕಾ ಎಂದು ಕಮೆಂಟ್ ಮಾಡಿದ್ದಾರೆ.
5/ 7
ಚಿತ್ರರಂಗಕ್ಕೆ ಬಂದು ಸಮಂತಾ 12 ವರ್ಷಗಳು ಪೂರೈಸಿದ್ದಾರೆ. ‘ಯೇ ಮಾಯ ಚೇಸಾವೆ’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಸಮಂತಾ ಕಾಲಿಟ್ಟಿದ್ದರು. ಇದಾದ ಬಳಿಕ ಇವರು ಹಿಂದೆ ತಿರುಗಿ ನೋಡಲೇ ಇಲ್ಲ. ಈ ಮುದ್ದು ಮುಖದ ಚೆಲುವೆ ‘ಈಗಾ’ ಸಿನಿಮಾದ ಮೂಲಕ ವಿಶ್ವವಿಖ್ಯಾತಿ ಹೊಂದಿದರು.
6/ 7
ಟಾಲಿವುಡ್, ಕಾಲಿವುಡ್ನ ಸೂಪರ್ ಸ್ಟಾರ್ಗಳ ಜೊತೆ ನಟಿಸಿ ಸಮಂತಾ ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಅಭಿನಯಕ್ಕೆ ಹೆಸರಾಗಿರುವ ಸಮಂತಾ ರುತ್ ಪ್ರಭು 1987 ಎಪ್ರಿಲ್ 28 ರಲ್ಲಿ ಚೆನ್ನೈನಲ್ಲಿ ಜನಿಸಿದರು.
7/ 7
ತಾವು ವಾಣಿಜ್ಯ ಪದವಿ ಓದುವಾಗ ಪಾರ್ಟ್ ಟೈಮ್ ಮಾಡೆಲಿಂಗ್ ಮಾಡಿಕೊಂಡಿದ್ದ ಸಮಂತಾ 2010 ರಲ್ಲಿ ತೆರೆಕಂಡ ಗೌತಮ್ ಮೆನನ್ ರ `ಯೇ ಮಾಯಾ ಚೇಸಾವೆ' ತೆಲಗು ಚಿತ್ರದಿಂದ ಸಿನಿಜೀವನ ಪ್ರಾರಂಭಿಸಿದರು.