Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

Samantha Ruth Prabhu: ಪೌರಾಣಿಕ ಕಥೆಯುಳ್ಳ ಶಾಕುಂತಲಂ ಸಿನಿಮಾ ಮೂಲಕ ತೆರೆ ಮೇಲೆ ಬಂದ ಸಮಂತಾ ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ಸೋತಿದ್ದಾರೆ. ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸದ್ದು ಮಾಡಲಿಲ್ಲ. ನಿರ್ಮಾಪಕರಿಗೂ ಭಾರೀ ನಷ್ಟ ಉಂಟಾಗಿದೆ.

First published:

  • 18

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಗುಣಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ಸಮಂತಾ ಶಾಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಉತ್ತಮ ನಿರೀಕ್ಷೆಗಳ ನಡುವೆ ಏಪ್ರಿಲ್ 14 ರಂದು ಶಾಕುಂತಲಂ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ರೂ, ಕಲೆಕ್ಷನ್ ಕಳಪೆಯಾಗಿದೆ.

    MORE
    GALLERIES

  • 28

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಟಾಲಿವುಡ್​ನಲ್ಲಿ ಬಹುತೇಕ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳನ್ನು ನಿರ್ಮಿಸಿರುವ ನಿರ್ದೇಶಕ ಗುಣಶೇಖರ್ ತೆಲುಗು ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಶಾಕುಂತಲಂ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ ಸಿನಿಮಾ ಮಕಾಡೆ ಮಲಗಿದೆ. ಇದೀಗ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಸೋಲಿಗೆ ಕಾರಣ ಏನು ಎಂದು ವಿಮರ್ಶಕರು ಹುಡುಕಾಡುತ್ತಿದ್ದಾರೆ.

    MORE
    GALLERIES

  • 38

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ತೆಲುಗು ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿಲ್ಲದ ನಾಯಕನನ್ನು ಶಾಕುಂತಲಂನಂತಹ ಅದ್ಧೂರಿ ಪೌರಾಣಿಕ ಚಿತ್ರಕ್ಕೆ ಆಯ್ಕೆ ಮಾಡಿದ್ದು ದೊಡ್ಡ ತಪ್ಪು ಎಂದು ಅನೇಕರು ಹೇಳಿದ್ದಾರೆ. ತೆಲುಗಿನಲ್ಲಿ ಎನ್.ಟಿ.ಆರ್, ಬಾಲಯ್ಯ ಮುಂತಾದ ಹೀರೋಗಳು ಮಾಡಿದ ಪಾತ್ರವನ್ನು ಮಲಯಾಳಂ ಹೀರೋ ಮಾಡಿರುವುದು ಮತ್ತೊಂದು ಮೈನಸ್ ಪಾಯಿಂಟ್ ಎಂದಿದ್ದಾರೆ.

    MORE
    GALLERIES

  • 48

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಮಲಯಾಳಂ ನಟನ ಬದಲು ತೆಲುಗು ಹೀರೋ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಸಣ್ಣ ಕಥೆಯು ನೀರಸವಾಗಿದೆ ಮತ್ತು ಬಿಡುಗಡೆಯನ್ನು ಹಲವಾರು ಬಾರಿ ಮುಂದೂಡಿದ್ದು ಕೂಡ ಸಿನಿಮಾ ಸೋಲಿಗೆ ಕಾರಣವಂತೆ (ಫೈಲ್/ಫೋಟೋ)

    MORE
    GALLERIES

  • 58

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಭಾರೀ ನಿರೀಕ್ಷೆಗಳ ನಡುವೆ ಸಿನಿಮಾ ಬಂದರೂ ಪ್ರೇಕ್ಷಕರು ಮೆಚ್ಚಲಿಲ್ಲ. ಗುಣಶೇಖರ್ ಜೊತೆಗೆ ಸ್ಟಾರ್ ನಿರ್ಮಾಪಕ ದಿಲ್ ರಾಜು ಈ ಸಿನಿಮಾದ ನಿರ್ಮಾಣಕ್ಕೆ ಪಾಲುದಾರರಾಗಿದ್ದಾರೆ. ಆದರೆ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸೋತಿದೆ. ಗುಣಶೇಖರ್ ಮತ್ತು ದಿಲ್ ರಾಜುಗೆ ಭಾರೀ ನಷ್ಟವಾಗಿದೆಯಂತೆ.

    MORE
    GALLERIES

  • 68

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಶಾಕುಂತಲಂ ಸಿನಿಮಾವನ್ನು 65 ಕೋಟಿ ಬಜೆಟ್​ನಲ್ಲಿ ಮಾಡಲಾಗಿದೆ. ತೆಲುಗಿನಲ್ಲಿ  18  ಕೋಟಿ  ರೂಪಾಯಿ ಪ್ರೀ ರಿಲೀಸ್ ಬಿಸಿನೆಸ್ ಮಾಡಿದೆ. ಇಲ್ಲಿಯವರೆಗೆ ಈ ಚಿತ್ರ  ಕೇವಲ 4 ಕೋಟಿ ಶೇರ್ ಗಳಿಕೆಯೊಂದಿಗೆ ಎಪಿಕ್ ಡಿಸಾಸ್ಟರ್ ಆಗಿದೆ.

    MORE
    GALLERIES

  • 78

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಅದರಲ್ಲಿ ಅರ್ಧದಷ್ಟು ಸ್ಟ್ರೀಮಿಂಗ್ ಹಕ್ಕುಗಳ ಮೂಲಕ ಮರುಪಡೆಯಲಾಗಿದೆ. ಒಟ್ಟಿನಲ್ಲಿ ಡಿಜಿಟಲ್ ಮತ್ತು ಸ್ಯಾಟಲೈಟ್ ಈ ಸಿನಿಮಾಗೆ ಅಷ್ಟಾಗಿ ವರ್ಕೌಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ಚಿತ್ರ ಥಿಯೇಟರ್​ನಲ್ಲಿ ಭಾರೀ ನಷ್ಟ ಅನುಭವಿಸಿದೆ.

    MORE
    GALLERIES

  • 88

    Samantha Movie: ಶಾಕುಂತಲಂ ಸಿನಿಮಾ ಮಾಡಿ ಮುಳುಗಿದ ನಿರ್ಮಾಪಕ! ಎಷ್ಟು ಕೋಟಿ ನಷ್ಟವಾಗಿದೆ ಗೊತ್ತಾ?

    ಈ ಚಿತ್ರಕ್ಕೆ ದಿಲ್ ರಾಜು ಮತ್ತು ಗುಣಶೇಖರ್ ಎಷ್ಟು ಬಂಡವಾಳ ಹಾಕಿದ್ದಾರೋ ಅದರಲ್ಲಿ 20 ಕೋಟಿ ನಷ್ಟವಾಗಿದೆ ಎಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ನೋಡಿ ನಿರ್ದೇಶಕ ಹಾಗೂ ನಿರ್ಮಾಪಕರಿಬ್ಬರಿಗೂ ಮುಳುವಂತಾಗಿದೆ. ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಶಾಕುಂತಲಂ ಸೋಲು ಬಹುದೊಡ್ಡ ದುರಂತ ಎಂದೇ ಹೇಳಲಾಗುತ್ತಿದೆ. 

    MORE
    GALLERIES