Samantha Ruth Prabhu: ಇತ್ತೀಚಿಗೆ ಸಮಂತಾ ರುತ್ ಪ್ರಭು ಅನೇಕ ವಿಷಯಗಳಲ್ಲಿ ಸುದ್ದಿಯಾಗಿದ್ದಾರೆ. ಮಯೋಸಿಟಿಸ್ನಿಂದಾಗಿ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ, ನಟನೆಗೆ ಬ್ರೇಕ್ ಕೊಟ್ಟಿದ್ದಾರೆ. ಅನಾರೋಗ್ಯದ ನಡುವೆ ಕ್ರಿಸ್ಮಸ್ ಸೆಲೆಬ್ರೇಷನ್ ಮಾಡಿದ್ದಾರೆ.
ಯಶೋದಾ ನಟಿ ಸಮಂತಾಗೆ ಕ್ರಿಸ್ಮಸ್ ಉಡುಗೊರೆ ಸಿಕ್ಕಿದ್ದು, ಇದೀಗ ಸ್ಪೆಷಲ್ ವ್ಯಕ್ತಿಯಿಂದ ಸಮಂತಾಗೆ ಸ್ಪೆಷಲ್ ಉಡುಗೊರೆ ಸಿಕ್ಕಿದೆ.
2/ 7
ಸಮಂತಾ ಪಡೆದಿರುವ ಈ ಉಡುಗೊರೆ ದುಬಾರಿಯಲ್ಲ, ಮಾಜಿ ಪತಿ ನಾಗ ಚೈತನ್ಯ ಸಮಂತಾಗೆ ಏನಾದರೂ ಕಳುಹಿಸಿದ್ದಾರೆ ಎಂದು ನೀವು ಯೋಚಿಸುತ್ತಿದ್ದರೆ, ಅವ್ರು ಅಲ್ಲ, ಹಾಗಾದ್ರೆ ಆ ಸ್ಪೆಷಲ್ ವ್ಯಕ್ತಿ ಯಾರು ಗೊತ್ತಾ?
3/ 7
ಮಾಸ್ಕೋಯಿನ್ ಕಾವೇರಿ ನಿರ್ದೇಶಕ ರಾಹುಲ್ ರವೀಂದ್ರನ್ ಸಮಂತಾಗೆ ಗಿಫ್ಟ್ ನೀಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸಮಂತಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
4/ 7
ಫೋಟೋ ಶೇರ್ ಮಾಡಿದ ಸಮಂತಾ @rahlr_23 ಥ್ಯಾಂಕ್ ಯು ಎಂದು ಬರೆದಿದ್ದಾರೆ. ರಾಹುಲ್ ರವೀಂದ್ರನ್ ಸಹ ಗಿಫ್ಟ್ ಜೊತೆಗೆ ಸಂದೇಶ ರವಾನಿಸಿದ್ದಾರೆ.
5/ 7
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಬಹು ಬೇಡಿಕೆ ನಟಿ ಸಮಂತಾ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅಭಿನಯದಿಂದ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದಾರೆ.
6/ 7
ಅನಾರೋಗ್ಯದ ಕಾರಣಕ್ಕೆ ನಟಿ ಸಮಂತಾ ಅಭಿನಯ ಯಶೋದ ಚಿತ್ರದ ಪ್ರಚಾರಕ್ಕೂ ಅವರು ಬರಲಿಲ್ಲ. ಬಾಲಿವುಡ್ ನಟ ವರುಣ್ ಧವನ್ ಜೊತೆ ಸಮಂತಾ ಅವರ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿತ್ತು.
7/ 7
ವರುಣ್ ಧವನ್ ಜೊತೆಗಿನ ಸಿನಿಮಾದಿಂದ ಸಮಂತಾ ಹೊರನಡೆದಿದ್ದಾರೆ ಎನ್ನಲಾಗಿದೆ. ಸಂಪೂರ್ಣವಾಗಿ ಗುಣವಾಗುವವರೆಗೂ ಸಿನಿಮಾದಿಂದ ದೂರ ಉಳಿಯಲು ನಟಿ ನಿರ್ಧರಿಸಿದ್ದಾರೆ.