ಕಳೆದ ಒಂದು ವರ್ಷದಿಂದ ನೀವು ಜೀವನದೊಂದಿಗೆ ಎಷ್ಟು ಹೋರಾಡುತ್ತಿದ್ದೀರಿ ಎಂದು ಜಗತ್ತಿಗೆ ತಿಳಿದಿಲ್ಲದಿರಬಹುದು, ಆದರೆ ನೀವು ಯಾವಾಗಲೂ ನಗುತ್ತಾ ನಿಮ್ಮ ಅಭಿಮಾನಿಗಳು ಮತ್ತು ಸಿನಿಮಾಗಳಿಗಾಗಿ ಒಂದು ಹೆಜ್ಜೆ ಮುಂದಿಡುತ್ತೀರಿ. ಅಭಿಮಾನಿಗಳಿಗಾಗಿ ಸದಾ ಮುಗುಳ್ನಗುತ್ತಲೇ ಮುನ್ನಡೆಯುತ್ತಿದ್ದೀರಿ. ಎಲ್ಲವೂ ಚೆನ್ನಾಗಿರುತ್ತದೆ. ಪ್ರೀತಿಯಿಂದ ವಿಜಯ್ ಎಂದು ವಿಜಯ್ ದೇವರಕೊಂಡ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಇನ್ನೊಂದೆಡೆ ವಿಜಯ್ ದೇವರಕೊಂಡ ಜೊತೆಗಿನ ಖುಷಿ ಚಿತ್ರದ ಶೂಟಿಂಗ್ ನಲ್ಲಿ ಸಮಂತಾ ಭಾಗವಹಿಸುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಹಿಂದೆ ವಿಜಯ್ ದೇವರಕೊಂಡ ಮತ್ತು ಸಮಂತಾ ಮಹಾನಟಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ಅದೇ ಜೋಡಿ ಮತ್ತೆ ಖುಷಿ ಚಿತ್ರದ ಮೂಲಕ ಬರುತ್ತಿದ್ದು, ಇದೊಂದು ಫೀಲ್ ಗುಡ್ ಲವ್ ಸ್ಟೋರಿ ಕೂಡ ಆಗಿರುವುದರಿಂದ ತೆಲುಗು ಪ್ರೇಕ್ಷಕರಲ್ಲಿ ಒಂದು ರೀತಿಯ ಕ್ಯೂರಿಯಾಸಿಟಿ ಮೂಡಿದೆ.