ಈಗಾಗಲೇ ಫ್ಯಾಮಿಲಿ ಮ್ಯಾನ್-2 ವೆಬ್ ಸೀರೀಸ್ ಮೂಲಕ ಹಿಂದಿ ಪ್ರೇಕ್ಷಕರಿಗೆ ಪರಿಚಿತರಾಗಿರುವ ಸಮಂತಾಗೆ ಸದ್ಯ ಬಾಲಿವುಡ್ ನಲ್ಲಿ ಆಫರ್ ಗಳು ಸಾಲುಗಟ್ಟಿ ನಿಂತಿವೆ. ವರುಣ್ ಧವನ್ ನಾಯಕನಾಗಿ ನಟಿಸುತ್ತಿರುವ ಒಂದು ವೆಬ್ ಸೀರಿಸ್ ನಲ್ಲಿ ಸಮಂತಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆಯಂತೆ. ಮತ್ತೊಂದೆಡೆ, ಸಮಂತಾ , ರಣವೀರ್ ಸಿಂಗ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.