Samantha: ಆಯುರ್ವೇದದ ಮೊರೆ ಹೋದ ಸಮಂತಾ; ಚಿಕಿತ್ಸೆ ಪಡೆಯುತ್ತಿರೋದು ಎಲ್ಲಿ?
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ರು, ಬಳಿಕ ಇತ್ತೀಚೆಗಷ್ಟೇ ಹೈದರಾಬಾದ್ಗೆ ಮರಳಿದ್ದರು. ಇದೀಗ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಸಮಂತಾಗೆ ಮಯೋಸಿಟಿಸ್ ಕಾಯಿಲೆ ಇರೋದು ಗೊತ್ತಾಗಿದೆ. ಇದೀಗ ಮಯೋಸಿಟಿಸ್ ಕಾಯಿಲೆಗೆ ಆಯುರ್ವೇದ ಚಿಕಿತ್ಸೆ ಪಡೆಯಲು ಸಮಂತಾ ನಿರ್ಧರಿಸಿದ್ದಾರಂತೆ
2/ 7
ಇಂಡಿಯಾ ಗ್ಲಿಟ್ಜ್ ವರದಿ ಪ್ರಕಾರ ಸಮಂತಾ ಮಯೋಸಿಟಿಸ್ ರೋಗದ ಚಿಕಿತ್ಸೆಗೆ ಆಯುರ್ವೇದ ಆಯ್ಕೆ ಮಾಡಿಕೊಂಡಿದ್ದಾರೆ. ಹೈದರಾಬಾದ್ನಲ್ಲಿರುವ ಪ್ರಮುಖ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಬಗ್ಗೆ ವಿಚಾರಿಸಿದ್ದಾರಂತೆ.
3/ 7
ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಂತಾ ಇತ್ತೀಚೆಗಷ್ಟೇ ಹೈದರಾಬಾದ್ಗೆ ಮರಳಿದ್ದರು. ಈ ನಡುವೆ ಸ್ಥಿತಿ ಬಿಗಡಾಯಿಸಿದ ಪರಿಣಾಮ ಆಸ್ಪತ್ರೆಗೆ ದಾಖಲು ಮಾಡಲಾಗಿದ್ರು.
4/ 7
ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ವರದಿಗಳು ಹರಿದಾಡಿದ್ವು. ಆದರೆ ಸಮಂತಾ ಆಪ್ತರು ಈ ಸುದ್ದಿ ಸುಳ್ಳು ಎಂದಿದ್ರು.
5/ 7
ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ರೋಗವು ಸ್ನಾಯುಗಳಲ್ಲಿ ಉರಿಯೂತದ ತೊಂದರೆ ಉಂಟು ಮಾಡುತ್ತೆ.
6/ 7
ಈ ಕಾಯಿಲೆಯ ಮುಖ್ಯ ಲಕ್ಷಣಗಳ ಅಂದ್ರೆ ಸ್ನಾಯುಗಳ ಸೆಳೆತ, ನೋವು ಹಾಗೂ ಸ್ವಲ್ಪ ದೂರ ನಡೆದ ನಂತರ ತುಂಬಾ ದಣಿವು ಉಂಟು ಮಾಡುತ್ತದೆ.
7/ 7
ಇದೀಗ ಸಮಂತಾ ಆಯುರ್ವೇದ ಮೊರೆ ಹೋಗಿದ್ದು, ಶೀಘ್ರವೇ ಸಮಂತಾ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.