Salman Khan: ಸಲ್ಲುಗೆ ಆಕ್ಷನ್ ಕಟ್ ಹೇಳ್ತಾರಾ ಈ ಸೌತ್ ಡೈರೆಕ್ಟರ್? ಗೆಳೆಯನ ಜೊತೆ ಸಲ್ಮಾನ್ ಖಾನ್ ಹೊಸ ಪ್ರಾಜೆಕ್ಟ್!
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಬಗ್ಗೆ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಸಲ್ಮಾನ್ ಖಾನ್ ಕೈ ಜೋಡಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಟಾಲಿವುಡ್ ಚಿತ್ರ ನಿರ್ದೇಶಕ ಪುರಿ ಜಗನ್ನಾಥ್ ಈಗ 'ಲೈಗರ್' ಚಿತ್ರದ ಸೋಲಿನಿಂದ ಚೇತರಿಸಿಕೊಳ್ತಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರ ಮಾಡಲು ಪುರಿ ಪ್ಲಾನ್ ಮಾಡಿದ್ದಾರಂತೆ.
2/ 8
ಸಲ್ಮಾಖ್ ಖಾನ್ ಹಾಗೂ ಪುರಿ ಜಗನ್ನಾಥ್ ಅವರು ಒಟ್ಟಿಗೆ ಯಾವುದೇ ಸಿನಿಮಾ ಮಾಡಿಲ್ಲ ಆದ್ರೆ ಇಬ್ಬರ ನಡುವೆ 13 ವರ್ಷಗಳ ಫ್ರೆಂಡ್ಶಿಪ್ ಇದೆಯಂತೆ.
3/ 8
ಸಲ್ಮಾನ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ 'ಟೈಗರ್ 3' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೇಲೆ ಸಲ್ಮಾನ್ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮತ್ತೊಂದೆಡೆ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಮತ್ತೊಮ್ಮೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಡಿದೆ.
4/ 8
ಈ ನಡುವೆ ಸಲ್ಮಾನ್ ಖಾನ್, ಸೌತ್ ಫಿಲಂ ಇಂಡಸ್ಟ್ರಿಯ ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಪ್ಲಾನ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳ ಗಮನಕ್ಕೆ ಬಂದಿದೆ.
5/ 8
ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಲ್ಲುಗೆ ಕಥೆ ಹೇಳಿದ್ದು, ಸಲ್ಮಾನ್ ಖಾನ್ ಕೂಡ ಚಿತ್ರ ಮಾಡಲು ಮುಂದಾಗಿದ್ದಾರೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
6/ 8
ಪುರಿ ಜಗನ್ನಾಥ್ ಅವರ ಇತ್ತೀಚಿನ ಟಾಲಿವುಡ್ ಸಿನಿಮಾ ಲೈಗರ್ ನೆಲಕಚ್ಚಿದ್ದು ಗೊತ್ತೇ ಇದೆ. ಹೀಗಾಗಿ ಮುಂದೆ ಬಿಗ್ ಪ್ಲಾನ್ ನೊಂದಿಗೆ ಬರಲು ನಿರ್ದೇಶಕ ಪುರಿ ಸಲ್ಲು ಜೊತೆ ಸಿನಿಮಾ ಪ್ಲಾನ್ ಮಾಡಿದ್ದಾರೆ.
7/ 8
ಚಿತ್ರದಲ್ಲಿ ನಟಿಸಲು ನಟ ಸಲ್ಮಾನ್ ಖಾನ್ ಕೂಡ ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದ್ರೆ ಈ ಮಾಹಿತಿ ಮಾತ್ರ ಇನ್ನು ಅಧಿಕೃತಗೊಂಡಿಲ್ಲ.
8/ 8
ಮಹೇಶ್ ಬಾಬು ಅವರ ಪೋಕಿರಿ ಚಿತ್ರದ ರಿಮೇಕ್ ಆಗಿದಲ್ಲಿ ವಾಂಟೆಡ್ ಚಿತ್ರದಲ್ಲಿ ಸಲ್ಲು ನಟಿಸಿದಾಗಿನಿಂದಲೂ ಪುರಿ ಜಗನ್ನಾಥ್ ಮತ್ತು ಸಲ್ಮಾನ್ ಖಾನ್ ನಡುವೆ ಒಳ್ಳೆ ಸ್ನೇಹವಿತ್ತು ಎನ್ನಲಾಗಿದೆ.