ಮೆಗಾ ಪ್ರಾಜೆಕ್ಟ್: ಒಂದೇ ಚಿತ್ರದಲ್ಲಿ ಚಿರಂಜೀವಿ-ಸಲ್ಮಾನ್ ಖಾನ್?
Chiranjeevi-Salman Khan:ಬಂಪರ್ ಹಿಟ್ ರಿಮೇಕ್ ಸಿನಿಮಾದಲ್ಲಿ. ಹೌದು, ಮಾಲಿವುಡ್ ಗಲ್ಲಾಪೆಟ್ಟಿಗೆಯನ್ನು ಅಲ್ಲಾಡಿಸಿದ್ದ ಲೂಸಿಫರ್ ಸಿನಿಮಾ ತೆಲುಗಿಗೆ ರಿಮೇಕ್ ಆಗಲಿದೆ. ಮಲಯಾಳಂನಲ್ಲಿ ದಿ ಕಂಪ್ಲೀಟ್ ಆ್ಯಕ್ಟರ್ ಮೋಹನ್ ಲಾಲ್ ನಿರ್ವಹಿಸಿದ ಪಾತ್ರ ತೆಲುಗಿನಲ್ಲಿ ಚಿರಂಜೀವಿ ಮಾಡಲಿದ್ದಾರೆ.
ಒಬ್ಬರು ಸೌತ್ ಸಿನಿರಂಗದ ಮೆಗಾ ಸ್ಟಾರ್. ಮತ್ತೊಬ್ರು ಬಾಲಿವುಡ್ನ ಬಾಕ್ಸಾಫೀಸ್ ಸುಲ್ತಾನ್. ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ರೆ ಏನಾಗಬಹುದು? ಉತ್ತರ ಬಾಕ್ಸಾಫೀಸ್ ದಾಖಲೆಗಳು ಧೂಳೀಪಟ.
2/ 11
ಯೆಸ್...ನಾವು ಹೇಳ್ತಿರೋದು ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಬಗ್ಗೆ. ಇವರಿಬ್ಬರು ಜೊತೆಯಾಗಿ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ನಿಂದ ಹೊರಬಿದ್ದಿದೆ.
3/ 11
ಅದು ಕೂಡ ಬಂಪರ್ ಹಿಟ್ ರಿಮೇಕ್ ಸಿನಿಮಾದಲ್ಲಿ. ಹೌದು, ಮಾಲಿವುಡ್ ಗಲ್ಲಾಪೆಟ್ಟಿಗೆಯನ್ನು ಅಲ್ಲಾಡಿಸಿದ್ದ ಲೂಸಿಫರ್ ಸಿನಿಮಾ ತೆಲುಗಿಗೆ ರಿಮೇಕ್ ಆಗಲಿದೆ. ಮಲಯಾಳಂನಲ್ಲಿ ದಿ ಕಂಪ್ಲೀಟ್ ಆ್ಯಕ್ಟರ್ ಮೋಹನ್ ಲಾಲ್ ನಿರ್ವಹಿಸಿದ ಪಾತ್ರ ತೆಲುಗಿನಲ್ಲಿ ಚಿರಂಜೀವಿ ಮಾಡಲಿದ್ದಾರೆ.
4/ 11
ಹಾಗೆಯೇ ಚಿತ್ರದ ಮತ್ತೊಂದು ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಮೂಲ ಚಿತ್ರದಲ್ಲಿ ನಟ ಪೃಥ್ವಿರಾಜ್ ನಿರ್ವಹಿಸಿದ ರೆಬೆಲ್ ರೋಲ್ನಲ್ಲಿ ಬಾಲಿವುಡ್ ಭಾಯಿಜಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ಟಾಲಿವುಡ್ ಟಾಕು.
5/ 11
ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೋಹನ್ ಲಾಲ್ ತಣ್ಣನೆಯ ಕೌರ್ಯ ತುಂಬಿದ ಪಾತ್ರದಲ್ಲಿ ನಟಿಸಿದ್ದಾರೆ. ರಾಜಕಾರಣಿಯಾಗಿ ರಾಜಕೀಯವನ್ನು ಕಂಟ್ರೋಲ್ ಮಾಡುವ ತೆರೆಮರೆಯ ಅಂಡರ್ವರ್ಲ್ಡ್ ಡಾನ್ ಆಗಿ ಮಿಂಚಿದ್ದರು.
6/ 11
ಹಾಗೆಯೇ ಲೂಸಿಫರ್ನ ಜೊತೆಯಾಗಿ ನಿಲ್ಲುವ ರೆಬೆಲ್ ಬಾಡಿಗಾರ್ಡ್ ಪಾತ್ರದಲ್ಲಿ ಪೃಥ್ವಿರಾಜ್ ನಟಿಸಿದ್ದರು. ಅಷ್ಟೇ ಅಲ್ಲದೆ ಯುವ ರಾಜಕಾರಣಿಯಾಗಿ ನಟ ಟೋವಿನೋ ಥಾಮಸ್ ಕೂಡ ಬಣ್ಣ ಹಚ್ಚಿದ್ದರು.
7/ 11
ಇದೀಗ ಮೂವರು ನಟರುಗಳ ಸಮಾಗಮದ ಲೂಸಿಫರ್ ತೆಲುಗಿನಲ್ಲಿ ರೆಡಿಯಾಗಲು ಅಣಿಯಾಗುತ್ತಿದೆ. ಚಿತ್ರಕ್ಕೆ ರಾಮ್ ಚರಣ್ ತೇಜಾ ಬಂಡವಾಳ ಹೂಡಲಿದ್ದಾರೆ. ಈಗಾಗಲೇ ಚಿರು ಪುತ್ರ ಸಲ್ಲು ಮಿಯಾ ಜೊತೆ ಮಾತುಕತೆ ನಡೆಸಿದ್ದಾರಂತೆ.
8/ 11
ಅತ್ತ ಕಡೆ ಬಾಲಿವುಡ್ ಭಾಯಿಜಾನ್ ಕೂಡ ಮೆಗಾ ಸ್ಟಾರ್ ಅವರ ಆತ್ಮೀಯರಲ್ಲಿ ಒಬ್ಬರು. ಹೀಗಾಗಿ ಚಿತ್ರಕ್ಕೆ ಓಕೆ ಅಂದಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಈ ಹಿಂದೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸಹ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದು ಪೃಥ್ವಿರಾಜ್ ನಿರ್ವಹಿಸಿದ ರೋಲ್ನಲ್ಲಿ ಎಂದು ಸುದ್ದಿಯಾಗಿತ್ತು.
9/ 11
ಇದೀಗ ಮಲಯಾಳಂ ನಟ ಪೃಥ್ವಿ ಅಭಿನಯಿಸಿದ ಪಾತ್ರದಲ್ಲಿ ಸಲ್ಮಾನ್ ಖಾನ್ ಎಂಟ್ರಿಯಾಗುತ್ತಿದ್ದು, ಟೊವಿನೋ ಥಾಮಸ್ ನಿರ್ವಹಿಸಿದ ರೋಲ್ನಲ್ಲಿ ಅಲ್ಲು ಅರ್ಜುನ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
10/ 11
ಅಂದಹಾಗೆ ಈ ಚಿತ್ರಕ್ಕೆ ಸಾಹೋ ನಿರ್ದೇಶಕ ಸುಜಿತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೆಗಾ ಸ್ಟಾರ್ - ಬಾಕ್ಸಾಫೀಸ್ ಸುಲ್ತಾನ್ ಸಮಾಗಮವಾಗಲಿದ್ದು, ಅದರೊಂದಿಗೆ ಬಾಕ್ಸಾಫೀಸ್ನ ಹಳೆಯ ದಾಖಲೆಗಳು ಸೈಡ್ಗೆ ಸರಿಯಲಿದೆ ಎನ್ನುತ್ತಿದ್ದಾರೆ ಟಾಲಿವುಡ್ ಸಿನಿಪ್ರಿಯರು.