ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಸಿನಿಮಾ ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗಲಿದೆ. ಈದ್ ಸಂದರ್ಭ ಸಲ್ಮಾನ್ ಖಾನ್ ಅವರ ಅದ್ಧೂರಿ ಸಿನಿಮಾ ತೆರೆಗಪ್ಪಳಿಸಲಿದೆ. ಈದ್ ದಿನ ಸಿನಿಮಾ ರಿಲೀಸ್ ಮಾಡುವ ಸಲ್ಮಾನ್ ಖಾನ್ ಪದ್ಧತಿ 2009ರಲ್ಲಿ ಶುರುವಾಯಿತು.