ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

First published:

 • 110

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೀಗ ಸಲಗ ಚಿತ್ರವು ಬಾಕ್ಸಾಫೀಸ್​ನಲ್ಲಿ ಘರ್ಜನೆ ಪ್ರಾರಂಭಿಸೇಕಿತ್ತು. ಆದರೇನು ಮಾಡೋದು, ಕೊರೋನಾ ಎಂಬ ಕಿಂಕರ ಎಲ್ಲೆಡೆ ಮರಣ ಮೃದಂಗವಾಡುತ್ತಿದೆ. ಇತ್ತ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್ ಘೋಷಿಸಲಾಗಿದೆ. ಇದರಿಂದ ಚಿತ್ರರಂಗವಲ್ಲದೆ, ಚಿತ್ರಮಂದಿರಗಳೂ ಕೂಡ ಬಂದ್ ಆಗಿವೆ.

  MORE
  GALLERIES

 • 210

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ದುನಿಯಾ ವಿಜಯ್ ನಿರ್ದೇಶಕ ಕಮ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಜಬರ್​ದಸ್ತ್ ಟೀಸರ್ ಜನವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್ ಮಾಡಲಾಗಿದ್ದ ಟೀಸರ್ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿತ್ತು.

  MORE
  GALLERIES

 • 310

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಇದಕ್ಕೂ ಮುನ್ನ ಸೂರಿ ಅಣ್ಣಾ..ಸಾಂಗ್ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸಿದ್ದ ಸಲಗ ಇದೀಗ ಅಂಡರ್​ವರ್ಲ್ಡ್​ ಮತ್ತೊಂದು ಮಜಲನ್ನು ತೋರಿಸಲು ಅಣಿಯಾಗಿರುವುದಾಗಿ ತಿಳಿಸಿತ್ತು. ಒಂದೆಡೆ ಜಬರ್ದಸ್ತ್ ಹಾಡುಗಳು, ಮತ್ತೊಂದೆಡೆ ಭೂಗತ ಜಗತ್ತಿನ ರಾ ಕಥೆ. ಮಗದೊಂದೆಡೆ ದುನಿಯಾ ವಿಜಿ ಅವರ ನಿರ್ದೇಶನ ಮತ್ತು ಡಾಲಿ ಧನಂಜಯ್ ಅವರ ಖಾಕಿ ಖದರ್ .

  MORE
  GALLERIES

 • 410

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಒಂದು ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಲು ಇದಕ್ಕಿಂತ ಹೆಚ್ಚು ಕಸರತ್ತು ಮಾಡಬೇಕಿಲ್ಲ. ಹೀಗಾಗಿಯೇ ಬ್ಲ್ಯಾಕ್ ಕೋಬ್ರಾ ಫ್ಯಾನ್ಸ್ ಮತ್ತು ಡಾಲಿ ಅಭಿಮಾನಿಗಳು​ ಸಲಗನಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದರು.

  MORE
  GALLERIES

 • 510

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಈ ಕಾತುರತೆಯ ಕಾಯುವಿಕೆಗೆ ಕಿಚ್ಚು ಹಚ್ಚುವಂತೆ ವಿಜಿ ಟೀಂ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಮಾರ್ಚ್ 27 ರಂದು ರಾಜ್ಯಾದ್ಯಂತ ಸಲಗನ ದರ್ಬಾರ್ ಶುರುವಾಗಲಿದೆ ಎಂದು ತಿಳಿಸಿದ್ದರು.

  MORE
  GALLERIES

 • 610

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಆದರೆ ಬಿಡುಗಡೆಗೆ ದಿನಗಳಿರುವಾಗಲೇ ಕೊರೋನಾ ಎಂಬ ಮಹಾಮಾರಿ ಆವರಿಸಿದೆ. ಸಲಗನ ಎಂಟ್ರಿ ಕೂಡ ಮುಂದಕ್ಕೆ ಹೋಗಿದೆ. ಇದೀಗ ದುನಿಯಾ ಟೀಮ್​ನಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಲಾಕ್​ಡೌನ್ ಮುಗಿದ ಮೇಲೆ ಬರುವ ಮೊದಲ ಸಿನಿಮಾ ಸಲಗ.

  MORE
  GALLERIES

 • 710

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಹೌದು, ಎಲ್ಲಾ ರೀತಿಯಲ್ಲೂ ಘರ್ಜಿಸಲು ರೆಡಿಯಾಗಿ ನಿಂತಿರುವ ಸಲಗ ಚಿತ್ರವನ್ನು ಲಾಕ್​ಡೌನ್ ತೆರವು ಮಾಡಿದ ಮೊದಲ ವಾರದಲ್ಲೇ ಬಿಡುಗಡೆ ಮಾಡಲು ನಿರ್ಮಾಪಕರು ಕೆ.ಪಿ ಶ್ರೀಕಾಂತ್ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.

  MORE
  GALLERIES

 • 810

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಆ ಮೂಲಕ ಕರ್ಫ್ಯೂನಿಂದ ಮನೆಯಲ್ಲೇ ಕಳೆದಿರುವ ಜಂಗ್ಲಿ ಅಭಿಮಾನಿಗಳಿಗೆ ಮತ್ತು ಡಾಲಿ ಬಾಯ್ಸ್​ಗೆ ಮನರಂಜನೆಯ ರಸದೌತಣ ನೀಡಲು ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ತಿಳಿದು ಬಂದಿದೆ.

  MORE
  GALLERIES

 • 910

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಸಲಗ ಪಕ್ಕಾ ಮಾಸ್ ಚಿತ್ರವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್​ನಲ್ಲಿ ವರ್ಲ್ಡ್​ ಯಾವುದೇ ಕಲರಲ್ಲಿದ್ದರೂ...ಈ ಅಂಡರ್​ವರ್ಲ್ಡ್​ ಮಾತ್ರ ಕೆಂಪು ಕಲರಲ್ಲಿರುತ್ತೆ...ಎಂಬ ರಕ್ತಪಾತದ ಮುನ್ಸೂಚೆನೆಯ ಡೈಲಾಗ್​ನೊಂದಿಗೆ ಚಿತ್ರದ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ.

  MORE
  GALLERIES

 • 1010

  ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಂಟ್ರಿ ಕೊಡಲಿದ್ದಾರೆ ಡಾಲಿ ಮತ್ತು ಜಂಗ್ಲಿ

  ಇಲ್ಲಿ ದುನಿಯಾ ವಿಜಿ ಆನೆ ನಡೆದಿದ್ದೇ ದಾರಿ ಎಂಬಂತಹ ಖತರ್ನಾಕ್ ರೌಡಿ ಪಾತ್ರದಲ್ಲಿ ಅಭಿನಯಿಸಿದರೆ, ಬ್ಲ್ಯಾಕ್ ಕೋಬ್ರಾಗೆ ಟಕ್ಕರ್ ಕೊಡುವ ಅವತಾರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES