ಕನ್ನಡದ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಹೀರೋ ಆಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಚಂದನ್ ಶೆಟ್ಟಿ ಅವರಿಗೆ ಹೀರೋಯಿನ್ ಆಗ್ತಿರೋದು ಯಾರು ಗೊತ್ತಾ?
2/ 8
ಚಂದನ್ ಶೆಟ್ಟಿ ಅವರ ಸೂತ್ರಧಾರ ಸಿನಿಮಾದಲ್ಲಿ ಸಲಗ ಖ್ಯಾತಿಯ ನಟಿ ಹೀರೋಯಿನ್ ಅಗಿ ಮಿಂಚಲಿದ್ದಾರೆ.
3/ 8
ಚಿತ್ರಕ್ಕೆ ನಾಯಕಿಯಾಗಿ ಕನ್ನಡದ ಸಲಗ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ.
4/ 8
ರ್ಯಾಪ್ ಸಾಂಗ್ಗಳ ಮೂಲಕ ಕನ್ನಡ ಯುವಜನತೆಯ ಮನಸು ಕದ್ದ ಚಂದನ್ ಅವರು ನಾಯಕನಟನಾಗಿ ಮಿಂಚಲಿರುವ ಮೊದಲ ಸಿನಿಮಾ ಇದಾಗಿದೆ.
5/ 8
ಈ ಸಿನಿಮಾವನ್ನು ನವರಸನ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಈಗಾಗಲೇ 90 ಶೇಕಡಾ ಶೂಟಿಂಗ್ ಕೂಡಾ ಕಂಪ್ಲೀಟ್ ಆಗಿದೆ. ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಕೂಡಾ ನಡೆದಿದೆ.
6/ 8
ಈ ಹಾಡಿನಲ್ಲಿ ಮೊದಲ ಬಾರಿಗೆ ಚಂದನ್ ಶೆಟ್ಟಿ ಜೋಡಿಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ.
7/ 8
ಈ ಸಾಂಗ್ ಅನ್ನು ಡಿ. 27ರಂದು ಬೆಳಗ್ಗೆ 10.35ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಪ್ಡೇಟ್ ಕೂಡಾ ಕೊಟ್ಟಿದೆ. ಈ ಸಾಂಗ್ ನ್ಯೂ ಇಯರ್ಗೆ ಹೇಳಿ ಮಾಡಿಸಿದಂತಿದೆ ಎನ್ನುವುದು ನಿರ್ಮಾಪಕರ ಅಭಿಪ್ರಾಯ.
8/ 8
ನಟಿ ಈಗಾಗಲೇ ಸಲಗ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದು ಅವರ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ.