ಕೆಜಿಎಫ್ ನಂತಹ ಅದ್ಧೂರಿ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಬುಡಮೇಲು ಮಾಡಿದ್ದ ಪ್ರಶಾಂತ್ ನೀಲ್ ಈಗ ಪ್ರಭಾಸ್ ಜೊತೆ ಸಾಲಾರ್ ಸಿನಿಮಾದ ಮೂಲಕ ಆ ಸೀನ್ ರಿಪೀಟ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾಸ್ ಕೂಡ ಹೊಸ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಸಲಾರ್ ಸಿನಿಮಾವನ್ನು ಸೆಪ್ಟೆಂಬರ್ 28 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಈ ಸಿನಿಮಾದ ಜೊತೆಗೆ ಓಂ ರಾವುತ್ ನಿರ್ದೇಶನದಲ್ಲಿ ಪ್ರಭಾಸ್ ಆದಿಪುರುಷ ಸಿನಿಮಾ ಮಾಡುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಾಜೆಕ್ಟ್ ಕೆ ಜೊತೆಗೆ ಮಾರುತಿ ನಿರ್ದೇಶನದಲ್ಲಿ ಸಿನಿಮಾ ಮಾಡುವಾಗಲೇ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾಗೆ ಕಮಿಟಿ ಕೂಡ ಆಗಿದ್ದಾರೆ. ಪ್ರಭಾಸ್ ಅವರ ಸಾಲು ಸಾಲು ಸಿನಿಮಾಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.