ಚಿತ್ರಕಥೆಗಾರ ಸಲೀಂ ಖಾನ್ ಕೂಡ ಎರಡು ಬಾರಿ ಮದುವೆಯಾಗಿದ್ದಾರೆ. ಆದರೆ, ಅವರು ತಮ್ಮ ಮೊದಲ ಪತ್ನಿ ಸಲ್ಮಾ ಖಾನ್‌ಗೆ ವಿಚ್ಛೇದನ ನೀಡಿಲ್ಲ. ಸಲ್ಮಾ ಖಾನ್ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಅವರ ಮೂವರು ಪುತ್ರರು -ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಮಗಳು ಅಲ್ವಿರಾ ಖಾನ್ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದಾರೆ. (ಫೈಲ್ ಫೋಟೋ)
ಹ್ಯಾಂಡ್ಸಮ್ ಹಂಕ್ ಅರ್ಜುನ್ ರಾಂಪಾಲ್ ಕೂಡ 4ನೇ ಮಗುವಿಗೆ ತಂದೆಯಾಗ್ತಿದ್ದಾರೆ. ಮಾಜಿ ಪತ್ನಿ ಮಾಡೆಲ್ ಮಹೆರ್ ಜೆಸಿಯಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 47ನೇ ವಯಸ್ಸಿನಲ್ಲಿ, ನಟ ತನ್ನ ಮಗನನ್ನು ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಅವರೊಂದಿಗೆ ಸ್ವಾಗತಿಸಿದರು. ಈಗ ಶೀಘ್ರದಲ್ಲೇ ಗೇಬ್ರಿಯೆಲಾ ಡಿಮೆಟ್ರಿಡೆಡ್ಸ್ ಮತ್ತು ಅರ್ಜುನ್ ರಾಂಪಾಲ್ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲಿದ್ದಾರೆ. (ಫೋಟೋ ಕೃಪೆ- instagram @gabriellademetriades)