ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

ಸಹಜ ಸೌಂದರ್ಯ ಹಾಗೂ ಅಭಿನಯದ ಮೂಲಕ ಕೋಟ್ಯಂತರ ಮಂದಿ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರ ಸಹೋದರಿ ಈಗ ಸಿನಿ ಲೋಕದಲ್ಲಿ ತಮ್ಮ ಪಯಣ ಆರಂಭಿಸಿದ್ದಾರೆ. ಹೌದು, ಸಾಯಿ ಪಲ್ಲವಿ (Sai Pallavi) ತಂಗಿ ಪೂಜಾ ಕಣ್ಣನ್​ (Pooja Kannan) ಅವರು ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಮೊದಲ ಸಿನಿಮಾ ‘ಚಿತ್ತಿರ ಚೆವ್ವಾನಂ’ (Chithirai Sevvaanam) ಚಿತ್ರದ ಮೋಷನ್​ ಪೋಸ್ಟ್​ ರಿಲೀಸ್​ ಆಗಿದೆ. (ಚಿತ್ರಗಳು ಕೃಪೆ: ಪೂಜಾ ಕಣ್ಣನ್​ ಇನ್​ಸ್ಟಾಗ್ರಾಂ ಖಾತೆ)

First published:

 • 17

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ಬಹುಭಾಷಾ ನಟಿ ಸಾಯಿ ಪಲ್ಲವಿ ಸಿನಿಮಾ ಹಾಗೂ ಪಾತ್ರಗಳ ಆಯ್ಕೆಯನ್ನು ತುಂಬಾ ಅಳೆದು ತೂಗಿ ಮಾಡಿಕೊಳ್ಳುತ್ತಾರೆ. ಅಲ್ಲದೆ ತಮ್ಮ ಸಹಜ ಅಭಿನಯ ಹಾಗೂ ಸೌಂದರ್ಯದ ಮೂಲಕ ಈಗಾಗಲೇ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

  MORE
  GALLERIES

 • 27

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ನೃತ್ಯ ಹಾಗೂ ವಿಶೇಷವಾದ ನೃತ್ಯ ಶೈಲಿಯಿಂದ ಸ್ಟಾರ್​ಗಳನ್ನೇ ಅಭಿಮಾನಿಗಳನ್ನಾಗಿ ಮಾಡಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರಿಗೆ ಸಹೋರಿ ಒಬ್ಬರು ಇದ್ದಾರೆ. ಅವರೇ ಪೂಜಾ ಕಣ್ಣನ್​. ನೋಡಲು ಸಾಯಿ ಪಲ್ಲವಿ ಅವರನ್ನೇ ಹೋಲುವ ಪೂಜಾ ಅವರ ಚಿತ್ರಗಳನ್ನು ಸಾಯಿ ಪಲ್ಲವಿ ಅವರ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ನೋಡಿರಬಹುದು.

  MORE
  GALLERIES

 • 37

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ಈಗಾಗಲೇ ಯಶಸ್ಸಿನ ಉತ್ತುಂಗದಲ್ಲಿರುವ ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಅವರು ಈಗ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಅಭಿನಯದ ಮೊದಲ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಜೊತೆಗೆ ಚಿತ್ರದ ಮೋಷನ್​ ಪೋಸ್ಟರ್​ ಸಹ ರಿಲೀಸ್​ ಆಗಿದೆ.

  MORE
  GALLERIES

 • 47

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ಈ ದಿನಕ್ಕಾಗಿ ಬಹಳ ಕಾತರದಿಂದ ತುಂಬಾ ಸಮಯದಿಂದ ಎದುರು ನೋಡುತ್ತಿದ್ದೆ. ಕೊಂಚ ಭಯವಿದೆ. ಈ ಸಿನಿಮಾದಲ್ಲಿ ಅಭಿನಯಿಸುವಾಗ ನಾನು ಎಂಜಾಯ್​ ಮಾಡಿದಷ್ಟೇ ನೀವೂ ಸಿನಿಮಾ ನೋಡುವಾಗ ಎಂಜಾಯ್​ ಮಾಡುತ್ತೀರಿ ಎಂದು ನಂಬಿದ್ದೇನೆ. ನನಗಾಗಿ ದಯವಿಟ್ಟು ಪ್ರಾರ್ಥಿಸಿ ಎಂದು ಪೂಜಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  MORE
  GALLERIES

 • 57

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ಸಾಹಸ ನಿರ್ದೇಶಕ ಸ್ಟಂಟ್​ ಸಿಲ್ವಾ ಅವರು ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದ ಮೋಷನ್​ ಪೋಸ್ಟರ್​ ಅನ್ನು ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್ ಮತ್ತು ಕಾಲಿವುಡ್​ ನಟ ಧನುಷ್​​​​ ಅವರು ಬಿಡುಗಡೆ ಮಾಡಿದ್ದಾರೆ.

  MORE
  GALLERIES

 • 67

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ಈ ಚಿತ್ರದಲ್ಲಿ ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ಅವರ ಜೊತೆ ಪೂಜಾ ಕಣ್ಣನ್​ ಅಭಿನಯಿಸಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಈ ಜೋಡಿ ನಟಿಸಿದ್ದಾರೆ. ಅಕ್ಕನಿಗೆ ಸಿಕ್ಕ ಯಶಸ್ಸು ಪೂಜಾ ಅವರಿಗೂ ಸಿಗುತ್ತಾ ಅನ್ನೋದೇ ಈಗಿರುವ ಪ್ರಶ್ನೆ.

  MORE
  GALLERIES

 • 77

  ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್​ ಆಯ್ತು ಮೊದಲ ಸಿನಿಮಾದ ಪೋಸ್ಟರ್​

  ಪೂಜಾ ಕಣ್ಣನ್​ ಅಭಿನಯದ ಸಿನಿಮಾ ಡಿಸೆಂಬರ್​ 3ರಂದು ಒಟಿಟಿ ಮೂಲಕ ಜೀ5 ಆ್ಯಪ್​ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಹಾಗೂ ನಟಿಗೆ ಸಿನಿ ರಂಗದ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ.

  MORE
  GALLERIES