Sai Pallavi ನಟಿ ಸಾಯಿಪಲ್ಲವಿ ವಿರುದ್ಧ ಎಲ್ಲಾ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೊಡಿ: ಕರೆ ನೀಡಿದ ಬಿಜೆಪಿ ಶಾಸಕ
Sai Pallavi Controversy: ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸಾಯಿ ಪಲ್ಲವಿ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ವಿರುದ್ಧ ಹಲವೆಡೆ ವಿರೋಧ ವ್ಯಕ್ತವಾಗಿದ್ದು ಇದೀಗ ಬಿಜೆಪಿ ಶಾಸಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಯಿ ಪಲ್ಲವಿ ವಿಚಾರ ಇದೀಗ ಜನರಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ವಿರಾಟಪರ್ವಂ ಪ್ರಚಾರದ ಭಾಗವಾಗಿ ಆಕೆಯ ಮಾತುಗಳು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಾಜಾಸಿಂಗ್ ಇತ್ತೀಚೆಗೆ ಸಾಯಿ ಪಲ್ಲವಿ ವಿರುದ್ಧ ಕಿಡಿಕಾರಿದ್ದರು.
2/ 9
ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ತೋರಿಸಿದಂತೆ ಹಿಂದೂ ಪಂಡಿತರ ಮೇಲಿನ ಹಲ್ಲೆಯೂ, ಗೋ ಸಾಗಣೆ ಮಾಡುತ್ತಿರುವವರ ಮೇಲಿನ ಹಲ್ಲೆಗೂ ಹೋಲಿಸಿ ಸಾಯಿ ಪಲ್ಲವಿ ವಿವಾದಕ್ಕೀಡಾಗಿದ್ದರು.
3/ 9
ಈ ವಿಚಾರವಾಗಿ ಹಿರಿಯ ನಾಯಕಿ ವಿಜಯಶಾಂತಿ ಈಗಾಗಲೇ ಪ್ರತಿಕ್ರಿಯಿಸಿದ್ದರೆ, ಇದೀಗ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
4/ 9
ನಟಿ ಸಾಯಿ ಪಲ್ಲವಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
5/ 9
ಕಮ್ಯುನಿಸ್ಟ್ ಪುಸ್ತಕಗಳನ್ನು ಓದುವುದರಿಂದ ಸಾಯಿ ಪಲ್ಲವಿ ಅವರ ಮನಸ್ಸಿಗೆ ಹಾನಿಯಾಗಿದೆ ಎಂದು ರಾಜಾ ಸಿಂಗ್ ಹೇಳಿದ್ದಾರೆ. ಸತ್ಯಗಳನ್ನು ಹೇಳಲು ಆಕೆಗೆ ಧೈರ್ಯವಿಲ್ಲ ಎಂದ ರಾಜಾ ಸಿಂಗ್, ಈ ಬಗ್ಗೆ ಯಾರೇ ಮಾತನಾಡಿದರೂ ಸಹಿಸುವುದಿಲ್ಲ ಎಂದು ಸಾಯಿ ಪಲ್ಲವಿಗೆ ಶಾಸಕ ರಾಜಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
6/ 9
ತೆಲಂಗಾಣ ಸೇರಿದಂತೆ ಆಂಧ್ರಪ್ರದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾಯಿ ಪಲ್ಲವಿ ವಿರುದ್ಧ ದೂರು ನೀಡುವಂತೆ ಅವರು ಕರೆಕೊಟ್ಟಿದ್ದಾರೆ.
7/ 9
ಮತ್ತೊಂದೆಡೆ, ಸಾಯಿ ಪಲ್ಲವಿ ಮಾತುಗಳಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಗೋವುಗಳನ್ನು ರಕ್ಷಿಸಿದ ರಕ್ಷಕರನ್ನು ಪಂಡಿತರನ್ನು ಕೊಂದ ಭಯೋತ್ಪಾದಕರಿಗೆ ಹೋಲಿಸುವುದು ಸರಿಯಲ್ಲ ಎಂಬ ವಾದ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.
8/ 9
ಈ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಮಾಡಿದ ಕಾಮೆಂಟ್ಗಳಿಗೆ ನಾನು ಖಂಡಿತವಾಗಿಯೂ ಉತ್ತರಿಸುತ್ತೇನೆ. ಆದರೆ ಇದು ಸಮಯವಲ್ಲ ಎಂದಿದ್ದಾರ ಸಾಯಿ ಪಲ್ಲವಿ.
9/ 9
ವಿರಾಟಪರ್ವಂ ರಿಲೀಸ್ ಆದ ನಂತರ ಈ ವಿವಾದದ ಬಗ್ಗೆ ಮಾತನಾಡುತ್ತೇವೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ವಿರಾಟಪರ್ವಂ ಚಿತ್ರ ನಿನ್ನೆ (ಜೂನ್ 17) ಬಿಡುಗಡೆಯಾಗಿದೆ. ಈ ವಿಚಾರಕ್ಕೆ ಸಾಯಿ ಪಲ್ಲವಿ ಯಾವಾಗ ಪ್ರತಿಕ್ರಿಯಿಸುತ್ತಾರೆ? ಅವರು ಏನು ಹೇಳಲಿದ್ದಾರೆ ಎಂಬುದನ್ನು ನೋಡಬೇಕು.