ಎಂಬಿಬಿಎಸ್ ಪದವಿ ಪಡೆದಿರುವ ದಕ್ಷಿಣ ಭಾರತದ ಟಾಪ್ ನಟಿ ಸಾಯಿ ಪಲ್ಲವಿ, ನಟನೆಗೆ ಬ್ರೇಕ್ ಹಾಕಿ ಆಸ್ಪತ್ರೆ ಕಟ್ಟುತ್ತಿದ್ದಾರಾ?
2/ 9
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಜಾರ್ಜಿಯಾದಿಂದ ಎಂಬಿಬಿಎಸ್ ಪದವಿ ಪಡೆದಿರುವ ಸಾಯಿ ಪಲ್ಲವಿ ಕೊಯಮತ್ತೂರಿನಲ್ಲಿ ತನ್ನದೇ ಆದ ಆಸ್ಪತ್ರೆಯನ್ನು ನಿರ್ಮಿಸುವತ್ತ ಗಮನಹರಿಸಲಿದ್ದಾರಂತೆ.
3/ 9
ಆಸ್ಪತ್ರೆಯನ್ನು ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ನಿರ್ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
4/ 9
ಸಾಯಿ ಅವರು 2015 ರಲ್ಲಿ ಮಲಯಾಳಂ ಸಿನಿಮಾ ಪ್ರೇಮಂ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ, ಅವರು ಧನುಷ್ ಸೇರಿದಂತೆ ಟಾಪ್ ನಟರ ಜೊತೆ ಹಲವಾರು ಹಿಟ್ ಚಲನಚಿತ್ರಗಳಲ್ಲಿ ನಟಿಸಿದರು.
5/ 9
ವಿರಾಟಪರ್ವಂ ಮತ್ತು ಗಾರ್ಗಿಯ ನಂತರ ಸಾಯಿ ಹಲವಾರು ಆಫರ್ಗಳನ್ನು ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ.
6/ 9
ನಟಿ ಶಾಶ್ವತವಾಗಿ ಮನರಂಜನಾ ಪ್ರಪಂಚವನ್ನು ತೊರೆದು ಜನರ ಸೇವೆಯತ್ತ ಗಮನ ಹರಿಸುತ್ತಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
7/ 9
ಆದರೆ ಇನ್ನೂ ಕೆಲವರು ನಟಿ ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ಅಷ್ಟೇ. ಆಸ್ಪತ್ರೆ ಕೆಲಸ ಮುಗಿಸಿ ಮತ್ತೆ ಆ್ಯಕ್ಟ್ ಮಾಡುತ್ತಾರೆ ಎನ್ನುತ್ತಿದ್ದಾರೆ.
8/ 9
ಜೂನ್ನಲ್ಲಿ, ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ವಲಸೆ ಮತ್ತು ಅಕ್ರಮ ಗೋ ಸಾಗಣೆ ಬಗ್ಗೆ ಕಾಮೆಂಟ್ಗಳನ್ನು ಮಾಡಿ ಸುದ್ದಿಯಾಗಿದ್ದರು.
9/ 9
ಬಜರಂಗದಳದ ಮುಖಂಡರು ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.