ಮೂಲಗಳ ಪ್ರಕಾರ, ಸಾರಾ ತೆಂಡೂಲ್ಕರ್ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆಂದು ವರದಿಯಾಗಿದೆ. ಇದಕ್ಕಾಗಿ ಸಾರಾ ಈಗಾಗಲೇ ನಟನೆ ತರಗತಿಗಳಿಗೆ ಹಾಜರಾಗುತ್ತಿದ್ದಾರಂತೆ. ಹಾಗಿದ್ರೆ ಸಾರಾ ಬಾಲಿವುಡ್ಗೆ ಎಂಟ್ರಿ ನೀಡ್ತಾರಾ ಎಂಬ ಪ್ರಶ್ನೆ ಎಲ್ಲಡೆ ಕೇಳಲಾರಂಭಿಸಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಲಂಡನ್ನಲ್ಲಿ ಮೆಡಿಸಿನ್ ಮುಗಿಸಿರುವ ಸಾರಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರೀಯರಾಗಿದ್ದಾರೆ. ಅಲ್ಲದೇ ತಮ್ಮ ಇನ್ಸ್ಟಾಗ್ರಾಮ್ ಫೋಟೋಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.
2/ 6
ಇನ್ನು, ಒಂದೆಡೆ ಶುಭ್ಮಾನ್ ಗಿಲ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ಸಾರಾ ತೆಂಡೂಲ್ಕರ್ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲಿವೆ.
3/ 6
ಹೌದು, ಸದ್ಯದಲ್ಲೇ ಸಾರಾ ತೆಂಡೂಲ್ಕರ್ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಡಬಹುದು ಎಂಬ ಮಾತು ಬೀ ಟೌನ್ ನಲ್ಲಿ ಕೇಳಿಬರುತ್ತಿದೆ.
4/ 6
ಮೂಲಗಳ ಪ್ರಕಾರ, ಸಾರಾ ತೆಂಡೂಲ್ಕರ್ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆಂದು ವರದಿಯಾಗಿದೆ. ಇದಕ್ಕಾಗಿ ಸಾರಾ ಈಗಾಗಲೇ ನಟನೆ ತರಗತಿಗಳಿಗೆ ಹಾಜರಾಗುತ್ತಿದ್ದಾರಂತೆ.
5/ 6
ಸಾರಾ ಈಗಾಗಲೇ ಹಲವು ಬ್ರಾಂಡ್ಗಳಿಗೆ ಪ್ರವರ್ತಕರಾಗಿದ್ದಾರೆ ಎಂದು ತೋರುತ್ತದೆ. ಡಿಸೆಂಬರ್ 21 ರಂದು, ಬನಿತಾ ಸಂಧು ಅವರು ತಾನಿಯಾ ಶ್ರಾಫ್ ಅವರೊಂದಿಗೆ ಜಾಹೀರಾತಿನಲ್ಲಿ ನಟಿಸಿದ್ದರು.
6/ 6
ಅಲ್ಲದೆ ಸಾರಾ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು Instagram ನಲ್ಲಿ 1.8 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಾರಾ ಬಾಲಿವುಡ್ ಗೆ ಎಂಟ್ರಿ ಕೊಡುವ ಮುನ್ನವೇ ಇಷ್ಟೊಂದು ಕ್ರೇಜ್ ಪಡೆಯುತ್ತಿರುವುದು ಅವರು ಬಾಲಿವುಡ್ ಗೆ ಎಂಟ್ರಿ ನೀಡುತ್ತಿರುವುದರ ಮುನ್ಸೂಚನೆ ಎನ್ನಲಾಗುತ್ತಿದೆ.