Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

ತಮಿಳಿನಲ್ಲಿ ಸಿನಿಮಾ ಮತ್ತು ರಾಜಕೀಯ ಒಂದು ನಾಣ್ಯದ 2 ಮುಖಗಳಿದ್ದಂತೆ. ಎಂ.ಕರುಣಾನಿಧಿ ಮತ್ತು ಮಕ್ಕಳ್ ತಿಲಕಂ ಎಂಜಿಆರ್, ಪುರಚಿ ತಲೈವಿ ಜಯಲಲಿತಾ ಮತ್ತು ಕ್ಯಾಪ್ಟನ್ ವಿಜಯಕಾಂತ್ ಅವರು ಅಧಿಕಾರದ ಗದ್ದುಗೆಗಾಗಿ ಹೋರಾಡಿದ್ರು. ಇದೀಗ ದಳಪತಿ ವಿಜಯ್ ಅವರು ಅಧಿಕಾರಕ್ಕೆ ಸ್ಪರ್ಧಿಸಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

First published:

  • 18

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ತಮಿಳುನಾಡಿನಲ್ಲಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತು ಕೇಳಿ ಬಂದಿದೆ. ಸಿನಿಮಾಗಳ ಜೊತೆಗೆ ನಿರಂತರವಾಗಿ ರಾಜಕೀಯದ ಬಗ್ಗೆ ಮಾತಾಡುವ ವಿಜಯ್ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

    MORE
    GALLERIES

  • 28

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    2026ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರ ಅಭಿಮಾನಿ ಸಂಘಟನೆ ವಿಜಯ್ ಮಕ್ಕಳ್ ಇಯಕ್ಕಂ ಕಾರ್ಯಕರ್ತರು ತಮಿಳುನಾಡಿನಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ಆರಂಭಿಸಿದ್ದಾರೆ. ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ.

    MORE
    GALLERIES

  • 38

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಪ್ರತಿ ಸ್ಥಳದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಜನರ ಸಮಸ್ಯೆಗಳು, ಪ್ರಭಾವಿ ವ್ಯಕ್ತಿಗಳು, ಕಳೆದ 5 ವರ್ಷಗಳ ಚುನಾವಣೆಯಲ್ಲಿ ಗೆದ್ದವರ ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸಲಾಗಿದೆ.

    MORE
    GALLERIES

  • 48

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ಸಂಸ್ಥೆಗಳು ವಿಶೇಷ ನಮೂನೆಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತವೆ. ಅಭಿಮಾನಿಗಳ ಸಂಘಟನೆಯನ್ನು ಬಲಪಡಿಸಿ ಪಕ್ಷವನ್ನಾಗಿಸುವ ಸಾಧ್ಯತೆ ಇದೆ. ಇದಕ್ಕಾಗಿ ವಿಜಯ್ ಮಕ್ಕಳ್ ಐಯಕಂ ಪ್ರಧಾನ ಕಾರ್ಯದರ್ಶಿ ಬ್ಯುಸಿ ಆನಂದ್ ನೇತೃತ್ವದಲ್ಲಿ ಸಂಘಟನೆಯ ಜಿಲ್ಲಾ ಸಭೆಗಳು ಆರಂಭಗೊಂಡವು.

    MORE
    GALLERIES

  • 58

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ವಿಜಯ್ ಮಕ್ಕಳ್ ಐಯಕಂ ಅವರು ಈ ಹಿಂದೆಯೂ ಸ್ವಯಂಸೇವಾ ಕಾರ್ಯಗಳನ್ನು ಮಾಡುತ್ತಿದ್ದರು ಆದರೆ ಅಂಬೇಡ್ಕರ್ ಜಯಂತಿಯಂತಹ ಆಚರಣೆಗಳನ್ನು ಆಯೋಜಿಸಿರಲಿಲ್ಲ. ಆದರೆ, ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ರು .ರಂಜಾನ್ ಮಾಸದಲ್ಲಿ ಇಫ್ತಾರ್ ಔತಣವನ್ನೂ ಏರ್ಪಡಿಸಲಾಗಿತ್ತು.

    MORE
    GALLERIES

  • 68

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ಇದನ್ನು ಮುಖ್ಯವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಗುಂಪುಗಳನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದಾರೆ ಎನ್ನಲಾಗ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಬೇರು ಬಿಡಲಿಯಲು ಯತ್ನಿಸಿದ್ದು, ಇತ್ತ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡಲು ಅವಕಾಶವನ್ನು ಹುಡುಕುತ್ತಿದ್ದಾರೆ.

    MORE
    GALLERIES

  • 78

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ಚಿತ್ರದ ಮೂಲಕ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ ವಿಜಯ್ ಬಿಜೆಪಿಯಿಂದ ತೀವ್ರ ವಿರೋಧವನ್ನು ಎದುರಿಸಿದ್ದಾರೆ. ಕಮಲ್ ಹಾಸನ್ ಅವರಂತೆ ವಿಜಯ್ ಕೂಡ ಬಿಜೆಪಿಯನ್ನು ವಿರೋಧಿಸಿ ಅಖಾಡಕ್ಕಿಳಿಯುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಸಮೀಕ್ಷೆ ಮತ್ತು ನಂತರದ ರಾಜಕೀಯ ಪರಿಸ್ಥಿತಿ ಆಧರಿಸಿ ವಿಜಯ್ ರಾಜಕೀಯ ಪ್ರವೇಶದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

    MORE
    GALLERIES

  • 88

    Actor Vijay: ರಾಜಕೀಯದ ಅಖಾಡಕ್ಕಿಳಿಯಲು ದಳಪತಿ ರೆಡಿ! ವಿಜಯ್ ಮಾಸ್ಟರ್ ಪ್ಲಾನ್​ ಏನು?

    ವಿಜಯ್ ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಚಿತ್ರಗಳ ಮೂಲಕ ಗಳಿಸಿದ ಜನಪ್ರಿಯತೆ ಮತ್ತು ಅಭಿಮಾನಿಗಳ ಬಳಗವನ್ನು ಮತಗಳಾಗಿ ಪರಿವರ್ತಿಸಿದರೆ ವಿಜಯ್, ತಮಿಳುನಾಡಿನ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸುವ ಶಕ್ತಿಯಾಗುತ್ತಾರೆ ಎಂಬ ಮಾತು ಕೇಳಿ ಬರ್ತಿದೆ.

    MORE
    GALLERIES