RRR Deepavali Gift : ದೀಪಾವಳಿ ಹಬ್ಬಕ್ಕೆ ಆರ್ಆರ್ಆರ್ ಚಿತ್ರತಂಡದ ಕಡೆಯಿಂದ ಸಿಗಲಿದೆ ಉಡುಗೊರೆ..!
RRR: ಬಾಹುಬಲಿ ನಂತರ ರಾಜಮೌಳಿ ನಿರ್ದೇಶನದ ಸಿನಿಮಾ ಆರ್ಆರ್ಆರ್. ಕೊರೋನಾದಿಂದಾಗಿ ನಿಂತಿದ್ದ ಚಿತ್ರೀರಕಣ ಈಗ ಮತ್ತೆ ಆರಂಭವಾಗಿದೆ. ಇತ್ತೀಚೆಗಷ್ಟೆ ಜೂನಿಯರ್ ಎನ್ಟಿಆರ್ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಿದ್ದ ಚಿತ್ರತಂಡ ಈಗ, ದೀಪಾವಳಿಗೆ ಉಡುಗೊರೆಯಾಗಿ ಮತ್ತೊಂದು ವಿಡಿಯೋ ರಿಲೀಸ್ ಮಾಡುವ ಪ್ಲಾನ್ನಲ್ಲಿದೆಯಂತೆ. (ಚಿತ್ರಗಳು ಕೃಪೆ: ಟ್ವಿಟರ್)
ಜೂನಿಯರ್ ಎನ್ಟಿಆರ್ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಮಾಡಿದ್ದ ನಿರ್ದೇಶಕನ ವಿರುದ್ಧ ಕೆಲ ನೆಟ್ಟಿಗರು ಸಿಟ್ಟಾಗಿದ್ದರು. ಕಾರಣ ಮುಸ್ಲಿಂ ವೇಷದಲ್ಲಿ ಎನ್ಟಿಆರ್ ಅವರನ್ನು ತೋರಿಸಿದ್ದೇ ಇದಕ್ಕೆ ಕಾರಣವಾಗಿತ್ತು.
2/ 5
ಈಗ ಈ ವಿಷಯ ಕೊಂಚ ತಣ್ಣಗಾಗಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲು ಸಜ್ಜಾಗಿದೆಯಂತೆ.
3/ 5
ದೀಪಾವಳಿಗೆ ಈ ಸಲ ರಾಮ್ಚರಣ್ ಹಾಗೂ ಎನ್ಟಿಆರ್ ಇಬ್ಬರೂ ಇರುವ ವಿಶೇಷ ವಿಡಿಯೋವನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
4/ 5
ಈ ಸಿನಿಮಾ ಮುಂದಿನ ವರ್ಷ ಜನವರಿ 08ಕ್ಕೆ ರಿಲೀಸ್ ಆಗಲಿದೆ ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ಇನ್ನೂ ಪೂರ್ಣಗೊಳ್ಳದ ಕಾರಣಕ್ಕೆ ಮುಂದಿನ ಸಂಕ್ರಾತಿಗೆ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
5/ 5
ಈ ಸಿನಿಮಾದಲ್ಲಿ ಬಾಲಿವುಡ್ ನಟರಾದ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಸಹ ನಟಿಸುತ್ತಿದ್ದಾರೆ.