ಚಿರಂಜೀವಿ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ಗಳಲ್ಲಿ ಒಬ್ಬರು. 4 ದಶಕಗಳ ಕಾಲದ ಸಿನಿ ಕೆರಿಯರ್ನಲ್ಲಿ ಅವರು ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೊಸ ಟ್ವಿಟ್ಟರ್ ರೂಲ್ಸ್ನಿಂದಾಗಿ ಚಿರಂಜೀವಿ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಂಡಿದ್ದು, ಇದು ಅವರ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ.