ತೆಲುಗು ಸೂಪರ್ಸ್ಟಾರ್ ರಾಮ್ ಚರಣ್ ತೇಜಾ ಅವರು ಪತ್ನಿ ಉಪಾಸನಾ ಕೊನಿಡೇಲಾ ಜೊತೆ ಲಾಸ್ ಏಂಜಲೀಸ್ಗೆ ಹೋಗಿದ್ದಾರೆ. ಗೋಲ್ಡನ್ ಗ್ಲೋಬ್ಸ್ ಅವಾರ್ಡ್ನಲ್ಲಿ ಎಸ್.ಎಸ್. ರಾಜಮೌಳಿ ಅವರ ತ್ರಿಬಲ್ ಆರ್ ಸಿನಿಮಾವನ್ನು ಪ್ರತಿನಿಧಿಸಲು ಪತ್ನಿ ಸಮೇತರಾಗಿ ತೆರಳಿದ್ದಾರೆ ನಟ.
2/ 7
ಪತ್ನಿ ಉಪಾಸನಾ ಜೊತೆ ನಟ ಲಾಸ್ ಎಂಜಲೀಸ್ಗೆ ತೆರಳಿದ್ದು ಅವರ ಜೊತೆ ಜೂನಿಯರ್ ಎನ್ಟಿಆರ್ ಹಾಗೂ ನಿರ್ದೇಶಕ ರಾಜಮೌಳಿ ಅವರೂ ಈ ಫಂಕ್ಷನ್ನಲ್ಲಿ ಭಾಗಿಯಾಗಲಿದ್ದಾರೆ.
3/ 7
ಸೆಕ್ಯುರಿಟಿ ಸಿಬ್ಬಂದಿ ಜೊತೆ ಸೆಲೆಬ್ರಿಟಿ ದಂಪತಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ಅವರ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
4/ 7
ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಜನವರಿ 10ರಂದು ನಡೆಯಲಿದೆ. ರಾಮ್ ಚರಣ್ ಹಾಗೂ ಉಪಾಸನಾ ಅವರ ಏರ್ಪೋರ್ಟ್ ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.
5/ 7
ರಾಮ್ ಚರಣ್ ಬ್ಲಾಕ್ ಔಟ್ಫಿಟ್ನಲ್ಲಿ ಕಂಡು ಬಂದಿದ್ದು ಒಲಿವ್ ಬಣ್ಣದ ಜಾಕೆಟ್ ಧರಿಸಿಕೊಂಡಿದ್ದರು. ಉಪಾಸನಾ ಬ್ಲಾಕ್ ಪ್ಯಾಂಟ್ ಧರಿಸಿ ಬ್ಲೂ ಟಾಪ್ ಧರಿಸಿದ್ದರು.
6/ 7
ಜಗತ್ತಿನ ಪ್ರಸಿದ್ಧ ಸಿನಿಮಾ ವಿಮರ್ಶಕರು ಲಿಸ್ಟ್ ಮಾಡಿದ ವಿಶ್ವದ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ತ್ರಿಬಲ್ ಆರ್ ಸ್ಥಾನ ಪಡೆದಿದೆ. ಚಿತ್ರತಂಡ ನಿರ್ದೇಶಕರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ.
7/ 7
ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸಿದ್ದು ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಗಳಿಸಿದೆ. ಇದು ಈ ವರ್ಷದ ಭಾರತದ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ.