RRR Movie Janani Song: ಜನನಿ ಹಾಡು ಬಿಡುಗಡೆಗೆ ಮುನ್ನ ಕನ್ನಡಿಗರ ಕ್ಷಮೆಯಾಚಿಸಿದ ರಾಜಮೌಳಿ
ಖ್ಯಾತ ನಿರ್ದೇಶಕ ರಾಜಮೌಳಿ (Rajamouli) ಅವರ ಬಾಹುಬಲಿ ಬಳಿಕ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಮಾಡಿರುವ ಚಿತ್ರ ಆರ್ಆರ್ಆರ್ (RRR). ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರ 2022ರ ಜ. 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಅದ್ದೂರಿ ಹಾಡು, ಟೀಸರ್ ಮೂಲಕ ಪ್ರೇಕ್ಷಕರ ಸೆಳೆದಿರುವ ಚಿತ್ರದ ಮತ್ತೊಂದು ಬಹುನಿರೀಕ್ಷಿತ ಜನನಿ (Janani Song From RRR Movie) ಹಾಡನ್ನು ಇಂದು ಬಿಡುಗಡೆ ಮಾಡಿದರು.
RRR ಚಿತ್ರದ ಜನನಿ ಎಂಬ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇದು ಚಿತ್ರದ ಭಾವನಾತ್ಮಕ ಹಾಡಾಗಿದೆ. ಈ ಹಾಡನ್ನು ಜನರಿಗೆ ತಲುಪಿಸಲು ಇಲ್ಲಿಗೆ ಬಂದಿದ್ದೇನೆ. ಇದು ಯಾವುದೇ ರೀತಿ ಪ್ರಚಾರ ಅಲ್ಲ. ಮುಂದಿನ ತಿಂಗಳು ಸಂಪೂರ್ಣ ಚಿತ್ರತಂಡ ಜೊತೆಗೆ ಬೆಂಗಳೂರಿಗೆ ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.
2/ 5
ಇಡೀ ಚಿತ್ರದ ಹೃದಯ ಈ ಹಾಡಿನಲ್ಲಿದೆ. ಈ ಹಾಡು ಚಿತ್ರದ ಸಂಪೂರ್ಣ ಆತ್ಮ. ಈ ಹಾಡು ಕೇಳಿದಾಕ್ಷಣ ನಾನೇ ಮಂತ್ರ ಮುಗ್ದನಾದೆ. ಅಂತಹ ಅದ್ಭುತ ಸಂಗೀತವನ್ನು ಎಂಎಂ ಕಿರವಾಣಿ ನೀಡಿದ್ದಾರೆ.
3/ 5
ಆರ್ಆರ್ಆರ್ನ ಪ್ರಚಾರಕ್ಕೆ ಇನ್ನು ಸಮಯವಿದೆ. ಆದರೆ, ಚಿತ್ರದ ಆತ್ಮ ಗೀತೆಯನ್ನು ನಾನು ಹಂಚಿಕೊಳ್ಳುತ್ತೇನೆ. ಈ ಮೂಲಕ ಚಿತ್ರ ಎಷ್ಟರ ಮಟ್ಟಿಗೆ ಭಾವನಾತ್ಮಕವಾಗಿಯೂ ನಿಮ್ಮನ್ನು ಸೆಳೆಯುತ್ತದೆ ಎಂಬುದು ಸ್ಪಷ್ಟವಾಗಲಿದೆ ಎಂದರು
4/ 5
ಇದಕ್ಕೂ ಮುನ್ನ ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ಕನ್ನಡಿಗರ ಕ್ಷಮೆಯಾಚಿಸಿದರು. ಕಾರಣ ಮೂಲತಃ ಕರ್ನಾಟಕದ ಬಳ್ಳಾರಿಯವರಾದರೂ ನೆರೆಯ ಆಂಧ್ರದಲ್ಲಿ ಹುಟ್ಟಿ ಬೆಳೆದ ಪರಿಣಾಮ ತಮ್ಮ ಕನ್ನಡ ಅಷ್ಟು ಚೆನ್ನಾಗಿಲ್ಲ. ಮುಂದೆ ಚೆನ್ನಾಗಿ ಕಲಿತು ಮಾತನಾಡುವುದಾಗಿ ತಿಳಿಸಿದರು
5/ 5
ಬಾಲಿವುಡ್, ಟಾಲಿವುಡ್ ಖ್ಯಾತ ತಾರೆಯರ ದಂಡೇ ಚಿತ್ರದಲ್ಲಿರುವುದು ಚಿತ್ರದ ಮತ್ತೊಂದು ಹೈಲೈಟ್ ಆಗಿದೆ. ರಾಮ್ ಚರಣ್ ತೇಜ, ಜ್ಯೂ. ಎನ್ಟಿಆರ್, ನಟಿ ಆಲಿಯಾ, ಅಜಯ್ ದೇವಗನ್ ಸೇರಿದಂತೆ ಖ್ಯಾತ ಕಲಾವಿದರು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.