RRR: ಮತ್ತೊಂದು ದಾಖಲೆ ಬರೆದ ರಾಜಮೌಳಿ ಸಿನಿಮಾ, ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನ!
RRR Film: ಆರ್ಆರ್ಆರ್ ಸಿನಿಮಾ ಎಷ್ಟು ಸಂಚಲನ ಮೂಡಿಸಿದೆ ಎಂಬುದು ಎಲ್ಲರಿಗೂ ಗೊತ್ತು. RRR ಎಲ್ಲಾ ಭಾಷೆಗಳಲ್ಲಿಯೂ ಸಹ ದೊಡ್ಡ ಯಶಸ್ಸನ್ನು ಕಂಡಿದೆ. ಆದಾಗ್ಯೂ, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ನ ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿ RRR ಸಿನಿಮಾ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರತಿ ವರ್ಷ ಹತ್ತು ಅತ್ಯುತ್ತಮ ಚಲನಚಿತ್ರಗಳನ್ನು ಉನ್ನತೀಕರಿಸುತ್ತದೆ ಮತ್ತು ಅವುಗಳಲ್ಲಿ ಒಂದಕ್ಕೆ ಅತ್ಯುತ್ತಮ ಚಲನಚಿತ್ರ ಎಂದು ಪ್ರಶಸ್ತಿಯನ್ನು ಘೋಷಿಸುತ್ತದೆ. ಹಾಗಾಗಿ ಈ ವರ್ಷ ನಮ್ಮ RRR ಚಿತ್ರ ಭಾರತದಿಂದ ಸ್ಥಾನ ಪಡೆಯುತ್ತಿದೆ ಎಂಬುದು ಗಮನಾರ್ಹ.
ರಾಜಮೌಳಿ ನಿರ್ದೇಶನದ ರೌದ್ರಂ ರಣಂ ರುಧಿರಂ ಸಿನಿಮಾ ವಿಶ್ವಾದ್ಯಂತ ಥಿಯೇಟರ್ಗಳಲ್ಲಿ ಭಾರಿ ಹಿಟ್ ಆಗಿ, ಸಂಚಲನವನ್ನು ಸೃಷ್ಟಿಸಿತು ಮಾತ್ರವಲ್ಲದೆ ಹಾಲಿವುಡ್ ಚಲನಚಿತ್ರ ಗಣ್ಯರಿಂದ ಮೆಚ್ಚುಗೆಯನ್ನು ಗಳಿಸಿತ್ತು.
2/ 9
ಜೂನಿಯರ್ ಎನ್ ಟಿಆರ್, ರಾಮ್ ಚರಣ್, ರಾಜಮೌಳಿ ಕಾಂಬಿನೇಷನ್ ನಲ್ಲಿ ತೆರೆಕಂಡಿದ್ದ 'ಆರ್ಆರ್ಆರ್' ಸಖತ್ ಸಕ್ಸಸ್ ಆಗಿರುವುದು ಗೊತ್ತೇ ಇದೆ. ಮಾರ್ಚ್ 25 ರಂದು ಬಿಡುಗಡೆಯಾದ ಈ ಚಿತ್ರವು ರೂ. 1,150 ಕೋಟಿ ಗಳಿಸಿದ್ದು. ಇದು ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ.
3/ 9
ಈ ಚಿತ್ರ ಇದೀಗ ಮತ್ತೊಂದು ಸಂಚಲನ ಮೂಡಿಸಿದೆ.ಅತ್ಯುತ್ತಮ ಚಿತ್ರ ವಿಭಾಗದಲ್ಲಿ RRR ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ. ಈ ವಿಷಯವನ್ನು 'ಆರ್ಆರ್ಆರ್' ತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದೆ.
4/ 9
ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವುದು ಸಂತಸ ತಂದಿದೆ ಎಂದು ಸಿನಿಮಾ ತಂಡ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಭಾರತೀಯ ಚಿತ್ರ ಈ ಪ್ರಶಸ್ತಿಗಳಿಗೆ ಸ್ಪರ್ಧಿಸಿಲ್ಲ ಎಂಬುದು ಗಮನಾರ್ಹ. 'ಆರ್ಆರ್ಆರ್' ಜೊತೆಗೆ 9 ಹಾಲಿವುಡ್ ಚಿತ್ರಗಳು ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸುತ್ತಿವೆ.
5/ 9
ರಾಜಮೌಳಿ ನಿರ್ದೇಶನದ RRR ಅನ್ನು ಅತ್ಯುತ್ತಮ ಚಲನಚಿತ್ರಗಳು 2022 ರಲ್ಲಿ ಸೇರಿಸಲಾಗಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಹಾಗೂ ಆಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
6/ 9
ಶ್ರಿಯಾ ಸರಣ್, ಅಜಯ್ ದೇವಗನ್, ಸಮುದ್ರ ಖನಿ, ರಾಹುಲ್ ರಾಮಕೃಷ್ಣ ಮತ್ತು ಇತರರು ನಟಿಸಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದರು.
7/ 9
ಈ ಸಿನಿಮಾ ನೋಡಿ ಜನ ಬಾಹುಬಲಿ ಚಿತ್ರ ಸರಣಿಯ ನಂತರ ಮತ್ತೊಮ್ಮೆ ಇಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ತಂದಿದ್ದಕ್ಕಾಗಿ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರನ್ನು ಕೆಲವು ಅಭಿಮಾನಿಗಳು ಶ್ಲಾಘಿಸಿದ್ದರು. ಇದು ನಿಮ್ಮ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲೂ ಇದೂ ಒಂದು ಅಂತ ಹಾಡಿ ಹೊಗಳಿದ್ದರು.
8/ 9
ಈ ರಾಜಮೌಳಿ ಎಂಬ ಸಿನಿಮಾ ಮಾಂತ್ರಿಕನ ಬಗ್ಗೆ ನಿಮಗೆ ಗೊತ್ತೇ ಇದೆ. ಒಂದು ನೊಣವನ್ನಾದರೂ ಇಟ್ಟುಕೊಂಡು ಅದ್ಭುತ ಸಿನಿಮಾ ಮಾಡಬಹುದು ಅಂತ ಈಗಾಗಲೇ ಅವರು ನಿರೂಪಿಸಿದ್ದಾರೆ. ಬಾಹುಬಲಿ ಹಾಗೂ ಬಾಹುಬಲಿ 2ನಂತಹ ವೈಭವಯುತ ಸಿನಿಮಾದಲ್ಲಿ ಅದ್ಭುತ ಕಥೆ ಹೇಳಿದ್ದ ರಾಜಮೌಳಿ, ಈ ಬಾರಿ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆ ಹೇಳಿದ್ದಾರೆ.
9/ 9
ಸಿನಿಮಾ ಘೋಷಣೆ ಆದಾಗಿನಿಂದ ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇತ್ತು. ಈಗ ಸಿನಿಮಾ ನೋಡಿದ ಪ್ರತಿಯೊಬ್ಬರು ಇದು ನಮ್ಮ ಭಾರತೀಯರ ಹೆಮ್ಮೆ. ಸಿನಿಮಾ ಮಾಂತ್ರಿಕ ರಾಜಮೌಳಿಗೆ ಬಹುಪರಾಕ್ ಎಂದಿದ್ದಾರೆ.