ಜನವರಿ 18 ರಂದು ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ODI ಪಂದ್ಯದ ಮೊದಲು ನಟ ಜೂನಿಯರ್ ಎನ್ಟಿಆರ್ ಅವರು ಭಾರತೀಯ ಕ್ರಿಕೆಟ್ ತಂಡದ ಕೆಲವು ಆಟಗಾರರನ್ನು ಭೇಟಿ ಮಾಡಿದ್ದಾರೆ.
2/ 7
ಜೂನಿಯರ್ NTR ಕಳೆದ ರಾತ್ರಿ ಟೀಮ್ ಇಂಡಿಯಾದ ಹಲವಾರು ಆಟಗಾರರೊಂದಿಗೆ ಹ್ಯಾಂಗ್ ಔಟ್ ಮಾಡಿದ್ದು ಫೋಟೋಸ್ ವೈರಲ್ ಆಗಿವೆ.
3/ 7
ಟೀಂ ಇಂಡಿಯಾದ ಆಟಗಾರ ಯುಜ್ವೇಂದ್ರ ಚಹಾಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಠಾಕೂರ್ ಸೇರಿದಂತೆ ಜನಪ್ರಿಯ ಕ್ರಿಕೆಟ್ ತಾರೆಯರು ಜೂನಿಯರ್ ಎನ್ಟಿಆರ್ ಅವರನ್ನು ಭೇಟಿಯಾಗಿದ್ದಾರೆ.
4/ 7
ಹಲವಾರು ಟ್ವಿಟ್ಟರ್ ಬಳಕೆದಾರರು ಭಾರತೀಯ ಆಟಗಾರರೊಂದಿಗೆ RRR ನಟನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
5/ 7
ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಖಾತೆ ವರ್ಲ್ಡ್ ಎನ್ಟಿಆರ್ ಅಭಿಮಾನಿಗಳು ಭಾರತೀಯ ಕ್ರಿಕೆಟ್ ತಂಡದ ಕೆಲವು ಆಟಗಾರರೊಂದಿಗೆ ಎಂಬ ಕ್ಯಾಪ್ಶನ್ ಕೊಟ್ಟು ಫೋಟೋವನ್ನು ಹಂಚಿಕೊಂಡಿದ್ದಾರೆ. ಕ್ರೀಡಾಪಟುಗಳೊಂದಿಗೆ ನಟನನ್ನು ಟ್ಯಾಗ್ ಮಾಡಿದ್ದಾರೆ.
6/ 7
ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡಿಗೆ ದೇಶ ಹಾಗೂ ವಿಶ್ವದಲ್ಲಿ ಭಾರೀ ಕ್ರೇಜ್ ಸಿಕ್ಕಿದೆ. ಈ ಹಾಡು ಪ್ರಪಂಚದಾದ್ಯಂತ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.
7/ 7
ಈ ಹಾಡಿನಲ್ಲಿ ಎನ್ ಟಿಆರ್ ಹಾಗೂ ರಾಮ್ ಚರಣ್ ಅವರ ಡ್ಯಾನ್ಸ್ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಆಟಗಾರರು ಜೂನಿಯರ್ ಎನ್ ಟಿಆರ್ ಗೆ ಅಭಿನಂದನೆ ಸಲ್ಲಿಸಲು ತೆರಳಿದ್ದಾರೆ ಎಂದು ವರದಿಯಾಗಿದೆ.