ಕೆಲವು ಹೀರೋಗಳು ತೆರೆ ಮೇಲೆ ಮಾತ್ರವಲ್ಲ, ತೆರೆಯ ಹಿಂದೆಯೂ ತಾವೂ ರಿಯಲ್ ಹೀರೋಗಳೆಂದು ಸಾಬೀತುಪಡಿಸಿದ ನಿದರ್ಶನಗಳು ಸಾಕಷ್ಟಿವೆ. ಸಂಕಷ್ಟದಲ್ಲಿರುವ ಅಭಿಮಾನಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಹೀರೋಗಳು ಎಲ್ಲಾ ಭಾಷೆಗಳಲ್ಲಿದ್ದಾರೆ. ಇತ್ತೀಚೆಗಷ್ಟೇ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ಕ್ಯಾನ್ಸರ್ನಿಂದ ಬಳಲುತ್ತಿರುವ ತಮ್ಮ ಅಭಿಮಾನಿಯನ್ನ ಭೇಟಿ ಮಾಡಿ ಶುಭಾಶಯ ಹೇಳಿ ಧೈರ್ಯ ತುಂಬಿದ್ದಾರೆ. (Twitter/Photo)
ಮಣಿ ಕೌಶಲ್ ಎಂಬ 9 ವರ್ಷದ ಬಾಲಕ ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತ ರಾಮ್ ಚರಣ್ ಅವರ ದೊಡ್ಡ ಅಭಿಮಾನಿ. ಮೇಕ್ ಎ ವಿಶ್ ಫೌಂಡೇಶನ್ ಮೂಲಕ, ರಾಮ್ ಚರಣ್ ಅವರಿಗೆ ಈ ಮಗುವಿನ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲ ಅಭಿಮಾನಿಗೆ ಸ್ವತಃ ರಾಮ್ ಚರಣ್ ಆಸ್ಪತ್ರೆಗೆ ಆಗಮಿಸಿ ಮಾತನಾಡಿಸಿದ್ದಾರೆ. (Twitter/Photo)