ಬಿಗ್ಬಾಸ್ ಕನ್ನಡ ಒಟಿಟಿಯಲ್ಲಿ ಭೇಟಿಯಾದ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಈಗ ಜೋಡಿಯಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.
2/ 10
ಒಟಿಟಿ ಸೀಸನ್ನಲ್ಲಿ ಸಾಮಾನ್ಯ ಸ್ಪರ್ಧಿಗಳಂತೆ ಇದ್ದ ಇವರು ಕ್ಲೋಸ್ ಆಗಿದ್ಯಾವಾಗಲೋ, ಫ್ರೆಂಡ್ಸ್ ಆಗಿದ್ಯಾವಾಗಲೋ, ಲವ್ ಆಗಿದ್ದು ಯಾವಾಗಲೋ ಗೊತ್ತೇ ಆಗಲಿಲ್ಲ.
3/ 10
ಬಿಗ್ ಬಾಸ್ ಮನೆಯಲ್ಲಿ ಮಾತ್ರ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಹೈಲೈಟ್ ಆಗಿದ್ದರು. ಸೀಸನ್ ರಿಯಾಲಿಟಿ ಶೋ ಮುಗಿದರೂ ಈ ಕಪಲ್ ಜೋಡಿ ಕಂಟಿನ್ಯೂ ಆಗಿದೆ. ಇದೇ ಸಂದರ್ಭದಲ್ಲಿ ರಾಕೇಶ್ ಅಡಿಗ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
4/ 10
ಬಿಗ್ ಬಾಸ್ ಒಟಿಟಿಯಿಂದ ಟಿವಿ ಬಿಗ್ಬಾಸ್ ಟಿವಿ ಸೀಸನ್ ತನಕ ರೂಪೇಶ್, ಸಾನ್ಯ ಜೊತೆ ರಾಕೇಶ್ ಅಡಿಗ ಒಟ್ಟಿಗೇ ಇದ್ದರು. ಆದರೆ ಲವ್ ಆಗಿದ್ದು ಆ ಜೋಡಿಗೆ.
5/ 10
ರೂಪೇಶ್ ಮತ್ತು ಸಾನ್ಯ ಪದೇ ಪದೇ ನಾವು ಫ್ರೆಂಡ್ಸ್ ಅಷ್ಟೇ. ನಮ್ಮ ನಡುವೆ ಗೆಳೆತನ ಬಿಟ್ಟು ಬೇರೆನಿಲ್ಲ ಎಂದು ಹೇಳಿದ್ದರು. ಆದರೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಜೋರಾಗಿ ಅತ್ತಿದ್ದರು.
6/ 10
ಈ ಡೌಟ್ ರಾಕೇಶ್ಗೂ ಬಂದಿತ್ತಂತೆ. ಅವರೇ ಈ ವಿಚಾರವಾಗಿ ನೀವಿಬ್ರೂ ಡೇಟಿಂಗ್ ಮಾಡ್ತಿದ್ದೀರಾ ಎಂದೂ ಕೇಳಿದ್ದರಂತೆ. ಆಗಲೂ ಇಬ್ಬರೂ ಹಾಗೇನಿಲ್ಲ ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ ರಾಕೇಶ್.
7/ 10
ಬಿಗ್ಬಾಸ್ ಒಟಿಟಿ ಸೀಸನ್ನ ಫಿನಾಲೆ ನಂತರ ರೆಸಾರ್ಟ್ನಲ್ಲಿ ಸ್ಪರ್ಧಿಗಳು 10 ದಿನ ಇದ್ದರು. ಅಲ್ಲಿ ಮೈಕ್ ಮತ್ತು ಕ್ಯಾಮೆರಾ ಇರಲಿಲ್ಲ. ಆಗ ಕೇಳಿದರೂ ಲವ್ ಏನೂ ಇಲ್ಲ ಎಂದೇ ಹೇಳಿದ್ದರಂತೆ ಸಾನ್ಯಾ ಹಾಗೂ ರೂಪೇಶ್.
8/ 10
ಒಟಿಟಿಯಲ್ಲಿರುವಾಗಲೇ ಇಬ್ಬರು ರೂಪೇಶ್ ಮತ್ತು ಸಾನ್ಯ ಒಟ್ಟಿಗೆ ಇದ್ದರು. ರೆಸಾರ್ಟ್ನಲ್ಲಿ ಇಬ್ಬರ ಬಾಂಡಿಂಗ್ ಮತ್ತಷ್ಟು ಸ್ಟ್ರಾಂಗ್ ಆಯ್ತು. ಸೀಸನ್ 9ರಲ್ಲಿ ಪರಸ್ಪರ ಫುಲ್ ಸರ್ಪೋಟ್ ಮಾಡ್ತಿದ್ದರು ಎಂದಿದ್ದಾರೆ.
9/ 10
ಈ ಜೋಡಿ ಈಗ ಸಖತ್ ಫೇಮಸ್ ಆಗಿದ್ದು ಅವರ ವಿವಾಹದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
10/ 10
ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ತಮ್ಮ ಕೆರಿಯರ್ನಲ್ಲಿ ಬ್ಯುಸಿಯಾಗಿರುವುದರಿಂದ ಸದ್ಯದಲ್ಲಿ ಅವರು ಮದುವೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.