Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

ಬಾಲಿವುಡ್, ಟಾಲಿವುಡ್ ಟಾಪ್ ನಟಿಯರನ್ನು ಕನ್ನಡಕ್ಕೆ ಕರೆತಂದ ಕೀರ್ತಿ ನಟ ರವಿಚಂದ್ರನ್​ಗೆ ಸಲ್ಲುತ್ತದೆ. ಬಾಲಿವುಡ್ ಬ್ಯೂಟಿ ನಟಿ ಮಧುಬಾಲಾ ಕನ್ನಡದ ಅಣ್ಣಯ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ರು. ಇದೀಗ ನಟಿ ಮಧುಬಾಲ ಎಲ್ಲಿದ್ದಾರೆ? ಹೇಗಿದ್ದಾರೆ?

 • News18
 • |
 •   | Karnataka, India
First published:

 • 18

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  1992ರಲ್ಲಿ ಮಧುಬಾಲಾ ಅವರು ಮಣಿರತ್ನಂ ಚಿತ್ರ ರೋಜಾ ಸಿನಿಮಾ ಮೂಲಕ ಭಾರೀ ಜನಪ್ರಿಯತೆ ಪಡೆದ್ರು. ರೋಜಾ ಸಿನಿಮಾದಲ್ಲಿ ನಟಿ ಮಧುಬಾಲಾ ಸಿಂಪಲ್ ಲುಕ್ ಹಾಗೂ ಮುಗ್ಧತೆಗೆ ಪಡ್ಡೆ ಹುಡುಗರು ಫಿದಾ ಆಗಿದ್ರು. 90ರ ದಶಕದಲ್ಲಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ರು ನಟಿ ಮಧುಬಾಲ.

  MORE
  GALLERIES

 • 28

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  26 ಮಾರ್ಚ್ 1969 ರಂದು ಚೆನ್ನೈನಲ್ಲಿ ರಘುನಾಥ್ ಮತ್ತು ಭರತನಾಟ್ಯ ಟೀಚರ್ ರೇಣುಕಾ ದಂಪತಿಗೆ ಜನಿಸಿದ ಮಧು ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದರು. ಇಂದು ನಟಿ ತಮ್ಮ 54 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

  MORE
  GALLERIES

 • 38

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  ಮಧು ಹಲವು ವರ್ಷಗಳಿಂದ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾರೆ. ಕೆಲವು ಪ್ರಮುಖ ಚಲನಚಿತ್ರಗಳೆಂದರೆ ಫೂಲ್ ಔರ್ ಕಾಂಟೇ  (1991), ರೋಜಾ (1992), ಪ್ರೇಮ್ ಯೋಗ (1994), ಜಲ್ಲಾದ್ (1995), ತಲೈವಿ (2021). ಕನ್ನಡದ ಅಣ್ಣಯ್ಯ ಸಿನಿಮಾ ಕೂಡ ಒಂದಾಗಿದೆ.

  MORE
  GALLERIES

 • 48

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  ಮಧುಬಾಲಾ ರಘುನಾಥ್, ಮಧು ಎಂದೇ ಚಿರಪರಿಚಿತರಾದ್ರು. ಹುಟ್ಟುವಾಗ ಆಕೆಯ ಹೆಸರು ಪದ್ಮಾ ಮಾಲಿನಿ ಆಕೆಯ ತಂದೆ ನಂತರ ಮಧು ಮಾಲಿನಿ ಎಂದು ಬದಲಾಯಿಸಿದರು. 13ನೇ ವಯಸ್ಸಿನಲ್ಲೇ ಮಧು ಕ್ಯಾನ್ಸರ್ ನಿಂದಾಗಿ ತಾಯಿಯನ್ನು ಕಳೆದುಕೊಂಡರು. ಇದಾದ ನಂತರ ಅವರ ತಂದೆ ಅವರನ್ನು ಬೆಳೆಸಿದರು ಅವರ ಕನಸನ್ನು ನನಸಾಗಿಸಲು ಬೆಂಬಲ ನೀಡಿದರು.

  MORE
  GALLERIES

 • 58

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  ಮಧು ಮುಂಬೈನ ಜುಹುದಲ್ಲಿ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಓದಿದ್ದಾರೆ. ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಇದಾದ ನಂತರ ರೋಷನ್ ತನೇಜಾ ಅವರ ಸ್ಕೂಲ್ ಆಫ್ ಆ್ಯಕ್ಟಿಂಗ್ ನಲ್ಲಿ 2 ತಿಂಗಳು ತರಬೇತಿ ಪಡೆದಿದ್ದಾರೆ.

  MORE
  GALLERIES

 • 68

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  ರೋಷನ್ ತನೇಜಾ ಅವರ ಸ್ಕೂಲ್ ಆಫ್ ಆ್ಯಕ್ಟಿಂಗ್ ಕೇಂದ್ರದಿಂದ ಹೊರ ಬಳಿಕ ನಟಿ ತೂಕ ಇಳಿಸಿಕೊಳ್ಳಲು ವ್ಯಾಯಾಮ ಮತ್ತು ಸ್ವಿಮ್ಮಿಂಗ್ ಮಾಡಿದ್ದರಂತೆ. ನಟಿಯಾಗಲು ಏನೇನು ತಯಾರಿಗಳು ಬೇಕು ಎಲ್ಲವನ್ನೂ ಮಾಡಿದ್ದ ಮಧುಬಾಲಾ ತೆರೆಮೇಲೆ ಮಿಂಚಲು ರೆಡಿಯಾದ್ರು.

  MORE
  GALLERIES

 • 78

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  ನಟಿ ಮಧುಬಾಲಾ 1991ರಲ್ಲಿ ಮಲಯಾಳಂ ಚಲನಚಿತ್ರ ಒಟ್ಟಾಯಲ್ ಪಟ್ಟಾಲಂನಲ್ಲಿ ನಾಯಕಿಯಾಗಿ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ್ರು. ಫೂಲ್ ಔರ್ ಕಾಂಟೆ (1991) ನಲ್ಲಿ ಅಜಯ್ ದೇವಗನ್ ಜೊತೆಯಲ್ಲಿ ಸಿನಿಮಾ ಮಾಡಿ ಬಾಲಿವುಡ್​ಗೆ ಎಂಟ್ರಿ ಕೊಟ್ಟರು.

  MORE
  GALLERIES

 • 88

  Madhoobala: 'ಅಣ್ಣಯ್ಯ'ನ ಮನದನ್ನೆ ಮಧುಬಾಲಾ ಈಗ ಹೇಗಿದ್ದಾರೆ? ಅಭಿಮಾನಿಗಳಿಗೆ ಪ್ರೀತಿಯ 'ರೋಜಾ' ಕೊಟ್ಟ ಬೆಡಗಿ ಎಲ್ಲಿದ್ದಾರೆ?

  ಶ್ರೀಮಂತ ಉದ್ಯಮಿ ಆನಂದ್ ಶಾ ಅವರನ್ನು ಮದುವೆಯಾದ ನಂತರ ಮಧು ನಂತರ ಯುನೈಟೆಡ್ ಸ್ಟೇಟ್ಸ್​ಗೆ ತೆರಳಿದರು. ಮಧುಬಾಲಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಧು ಅವರ ಪತಿ ಜೂಹಿ ಚಾವ್ಲಾ ಅವರ ಪತಿ ಜೈ ಮೆಹ್ತಾ ಅವರ ಸಂಬಂಧಿಯಾಗಿದ್ದಾರೆ. ಡ್ರೀಮ್ ಗರ್ಲ್ ಖ್ಯಾತಿಯ ನಟಿ ಹೇಮಾ ಮಾಲಿನಿಯ ಸೋದರ ಸಂಬಂಧಿ ಮತ್ತು ಇಶಾ ಡಿಯೋಲ್ ಅವರ ಚಿಕ್ಕಮ್ಮ ಮಧುಬಾಲಾ ಎಂಬುದು ಅನೇಕರಿಗೆ ತಿಳಿದಿಲ್ಲ.

  MORE
  GALLERIES