Rocking Star Yash: 1 ಗಂಟೆ ನಿಂತುಕೊಂಡು 700ಕ್ಕೂ ಹೆಚ್ಚು ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟ ರಾಕಿಂಗ್ ಸ್ಟಾರ್
ನಟ, ನಟಿಯರು ಅಭಿಮಾನಿಗಳ ಫೋಟೋಗೆ ಪೋಸ್ ಕೊಡುತ್ತಾ 5 ನಿಮಿಷಕ್ಕಿಂತ ಹೆಚ್ಚು ನಿಲ್ಲುವುದಿಲ್ಲ. ಕಾರಣ ಸೆಲ್ಫಿ ತೆಗೆಸಿಕೊಂಡಷ್ಟು ಅಭಿಮಾನಿಗಳು ಬರುತ್ತಲೇ ಇರುತ್ತಾರೆ. ಆದರೆ ಯಶ್ ಅಭಿಮಾನಿಗಳಿಗೆ ಪೋಸ್ ಕೊಡುವುದಕ್ಕೆಂದೇ 1 ಗಂಟೆ ವ್ಯಯಿಸಿದ್ದಾರೆ.
ಸ್ಟಾರ್ ನಟರು ಅಭಿಮಾನಿಗಳ ಜೊತೆ ಸೆಲ್ಫೀಗೆ, ಫೋಟೋಗೆ ಪೋಸ್ ಕೊಡಲು ಎಷ್ಟು ಲಿಮಿಟೆಡ್ ಸಮಯ ಕೊಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಕಾರಣ ಅವರು ಅಷ್ಟೇ ಬ್ಯುಸಿಯಾಗಿರುತ್ತಾರೆ. ಆದರೆ ಯಶ್ ಅವರ ಇತ್ತೀಚಿನ ನಡೆಯೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ.
2/ 8
ರಾಕಿ ಭಾಯ್ ಅಭಿಮಾನಿಗಳ ಸೆಲ್ಫೀ ತೆಗೆಸಿಕೊಳ್ಳುವ ಆಸೆಯನ್ನು ನೆರವೇರಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಟ 700 ಅಭಿಮಾನಿಗಳ ಜೊತೆ ಸೆಲ್ಫೀಗೆ ಪೋಸ್ ಕೊಟ್ಟಿದ್ದಾರೆ.
3/ 8
ಶೋ ನಂತರ ಕಾರ್ಯಕ್ರಮದ ಆಯೋಜಕರು ಒಂದು ಗುಂಪಿನೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ವೇದಿಕೆಗೆ ಬಂದಿದ್ದರು. ಸ್ಟಾರ್ ನಟರಿಗೆ ತೊಂದರೆ ಕೊಡೋದು ಬೇಡ, ಒಂದು ಗ್ರೂಪ್ ಸೆಲ್ಫೀ ತಗೊಳೋಣ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ.
4/ 8
ಆಗ ಪ್ರತಿಕ್ರಿಯಿಸಿದ ಯಶ್, ತೊಂದರೆ ಇಲ್ಲ ನಾನು ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆಯೋಜನರು ಎಲ್ಲರೊಂದಿಗೂ ಸೆಲ್ಫೀ ತೆಗೆದುಕೊಳ್ತೀರಾ ಎಂದು ನಂಬಲು ಸಾಧ್ಯವಾಗದೆ ಅಚ್ಚರಿಯಿಂದ ಕೇಳುತ್ತಾರೆ.
5/ 8
ಆಗ ಪ್ರತಿಕ್ರಿಯಿಸಿದ ಯಶ್, ತೊಂದರೆ ಇಲ್ಲ ನಾನು ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆಯೋಜನರು ಎಲ್ಲರೊಂದಿಗೂ ಸೆಲ್ಫೀ ತೆಗೆದುಕೊಳ್ತೀರಾ ಎಂದು ನಂಬಲು ಸಾಧ್ಯವಾಗದೆ ಅಚ್ಚರಿಯಿಂದ ಕೇಳುತ್ತಾರೆ.
6/ 8
ನೀವು ಹೊರಡಿ, ಸ್ವಲ್ಪ ಹೊತ್ತಾಗುತ್ತದೆ ಎಂದು ಅವರನ್ನು ಕಳಿಸಿ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ಕೊಡುತ್ತಾ ನಿಂತಿದ್ದರು ರಾಕಿ ಭಾಯ್. ಈ ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ.
7/ 8
ಯಶ್ ಅವರ ಸರಳೆಗೆ ಎಲ್ಲರೂ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. 700 ಅಭಿಮಾನಿಗಳ ವೈಯಕ್ತಿಕ ಸೆಲ್ಫೀಗೆ ಪೋಸ್ ಕೊಡೋದಂದ್ರೆ ಸುಮ್ನೇನಾ ಅಂತಿದ್ದಾರೆ ನೆಟ್ಟಿಗರು.
8/ 8
ಯಶ್ ಅವರ ಮುಂದಿನ ಸಿನಿಮಾಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಟ್ವಿಟರ್ನಲ್ಲಂತೂ ಪ್ರತಿದಿನವೂ ಯಶ್ 19 ಟ್ರೆಂಡಿಂಗ್ನಲ್ಲಿರುತ್ತದೆ.