Rocking Star Yash: ತೆಲುಗಿನಲ್ಲಿ ಯಶ್ ಅಭಿನಯದ ಲಕ್ಕಿ ಚಿತ್ರ - ಬರೋಬ್ಬರಿ 10 ವರ್ಷದ ನಂತರ ಡಬ್ ಆಯ್ತು ಸಿನಿಮಾ
Sandalwood Update: ಸ್ಯಾಂಡಲ್ ವುಡ್ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗುವುದು ಅಥವಾ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗುವುದು ಹೊಸದೇನಲ್ಲ. ಚಿತ್ರ ಬಿಡುಗಡೆಯಾದ 1 ರಿಂದ 2 ವರ್ಷದ ಒಳಗೆ ಆಗಿಬಿಡುತ್ತದೆ. ಆದರೆ ರಾಕಿಂಗ್ ಸ್ಟಾರ್ ಅಭಿನಯದ ಲಕ್ಕಿ ಚಿತ್ರ ಮಾತ್ರ ಬರೋಬ್ಬರಿ 10 ವರ್ಷಗಳ ನಂತರ ತೆಲುಗಿಗೆ ಡಬ್ ಆಗಿದೆ.
ಕೆಜಿಎಫ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಬೇಡಿಕೆ ಹೆಚ್ಚಾಗಿದೆ. ಎಲ್ಲಾ ಭಾಷೆಗಳಲ್ಲಿ ಜನರು ಅವರನ್ನು ಇಷ್ಟಪಡುತ್ತಿದ್ದಾರೆ. ಹಾಗೆಯೇ ಅವರ ಹಳೆಯ ಚಿತ್ರಗಳನ್ನು ಸಹ ನೊಡಲು ಬಯಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಈ ಲಕ್ಕಿ ಚಿತ್ರ.
2/ 8
ಬಿಡುಗಡೆಯಾಗಿ ಸುಮಾರು ಹತ್ತು ವರ್ಷಗಳ ನಂತರ ತೆಲುಗಿಗೆ ಈ ಚಿತ್ರ ಡಬ್ ಆಗುತ್ತಿದ್ದು, ಈಗಾಗಲೇ ಡಬ್ ಆಗಿ, ಸೆನ್ಸಾರ್ ಆಗಿ ಬಿಡುಗಡೆಗೆ ಸಜ್ಜಾಗಿ ಕುಳಿತಿದೆ, ಆದರೆ ಇನ್ನೂ ಬಿಡುಗಡೆ ಯಾವಾಗ ಎಂಬುದು ಅಧಿಕೃತವಾಗಿಲ್ಲ.
3/ 8
ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿನಯದ ಮೊದಲ ಚಿತ್ರ ಇದಾಗಿದ್ದು, ಪ್ರೇಮ ಕಥೆಯಲ್ಲಿ ನಾಯಿಯೇ ಪ್ರಮುಖ ಪಾತ್ರವಹಿಸುತ್ತದೆ. ಈ ವಿಭಿನ್ನ ಕಥೆಯಲ್ಲಿ ಯಶ್ ಅಭಿನಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
4/ 8
ಈ ಚಿತ್ರದಲ್ಲಿ ನಾಯಕಿಯನ್ನು ಇಂಪ್ರೆಸ್ ಮಾಡಲು ಯಶ್ ಮಾಡುವ ಸಾಹಸಗಳು ಹಲವಾರು. ವಿಭಿನ್ನ ವೇಷದಲ್ಲಿ ಕಾಣಿಸಿಕೊಂಡು, ಆಕೆಯನ್ನು ಬೀಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ.
5/ 8
ಡಾ. ಸೂರಿ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು. ಇನ್ನು ಯಶ್ ಜೊತೆ ಗೆಳೆಯನಾಗಿ ನಟ ಶರಣ್ ಕೂಡ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
6/ 8
ಇದೊಂದೇ ಚಿತ್ರವಲ್ಲದೇ ಯಶ್ ಅಭಿನಯದ ಹಳೆಯ ಚಿತ್ರಗಳನ್ನು ಡಬ್ ಮಾಡಿ ಬಿಡಿಗಡೆ ಮಾಡಲು ಹಲವಾರು ನಿರ್ಮಾಪಕರು ಸಿದ್ದರಿದ್ದು, ಯಶ್ ಚಿತ್ರಗಳಿಗೆ ಎಲ್ಲಾ ಭಾಷೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ.
7/ 8
ಸದ್ಯ ಕೆಜಿಎಫ್ 2 ಯಶಸ್ಸಿನಲ್ಲಿರುವ ಯಶ್ ಮುಂದಿನ ಚಿತ್ರಗಳಿಗೆ ಸಹ ಸಜ್ಜಾಗುತ್ತಿದ್ದಾರೆ. ಜೂನ್ನಲ್ಲಿ ಅವರ ಹೊಸ ಚಿತ್ರದ ಬಗ್ಗೆ ಅಪ್ಡೇಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಕೆಜಿಎಫ್ 3 ಸಹ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
8/ 8
ಒಟ್ಟಾರೆಯಾಗಿ ಕನ್ನಡದ ನಟನೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.