ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳು ಐರಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಡಿಸೆಂಬರ್ 2, 2018ರಂದು ಐರಾ ಹುಟ್ಟಿದ್ದು. ಹುಟ್ಟಿದಾಗಿನಿಂದಲೂ ಸ್ಟಾರ್ ಆಗಿ ಮೆರೆಯುತ್ತಿರುವ ಐರಾ ಇಂದು 4ನೇ ವರ್ಷದ ಜನ್ಮದಿನದ ಖುಷಿಯಲ್ಲಿದ್ದಾರೆ. ಮುದ್ದಿನ ಮಗಳ ಹುಟ್ಟುಹಬ್ಬದಂದು ಪೋಷಕರು ಖುಷಿಯಾಗಿದ್ದಾರೆ. ಐರಾ ಥೇಟ್ ಅಪ್ಪನ ರೀತಿ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ. ಅಲ್ಲದೇ ಅಪ್ಪನ ನೆಚ್ಚಿನ ಮಗಳು. ಸದಾ ಮಕ್ಕಳೊಂದಿಗೆ ಯಶ್ ಕಾಲ ಕಳೆಯುತ್ತಾರೆ. ನಟಿ ರಾಧಿಕಾ ಪಂಡಿತ್ ಯಾವಗಲೂ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಐರಾ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾ ಇರ್ತಾರೆ. ಯಶ್ ಮಗಳು ಐರಾ 4 ವರ್ಷ ತುಂಬಿದ್ದು, ತಮ್ಮ ಯಥರ್ವ್ನ ಜೊತೆ ಆಡಿಕೊಂಡು ಇರುತ್ತಾಳೆ. ಯಾವಾಗಲೂ ಖುಷಿಯಿಂದ ಕಾಲ ಕಳೆಯುತ್ತಾರೆ. ಕೊರೊನಾ ಟೈಂನಲ್ಲಿ ಯಶ್ ಮನೆಯಲ್ಲೇ ಇದ್ದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಐರಾಗೆ ಅಪ್ಪ ಎಂದ್ರೆ ತುಂಬಾ ಇಷ್ಟ. ಅವರಿಗೆ ಅವಾಜ್ ಹಾಕ್ತಾ, ನನ್ನ ಮಾತು ಕೇಳಬೇಕು ಎನ್ನುತ್ತಾಳೆ. ಯಶ್ ಕುಟುಂಬ ಹಬ್ಬಗಳನ್ನು ಯಾವಾಗಲೂ ಗ್ರ್ಯಾಂಡ್ ಆಗಿ ಮಾಡ್ತಾರೆ. ಯಶ್ ಮತ್ತು ರಾಧಿಕಾ ಕೆಲಸದಷ್ಟೇ ಕುಟುಂಬಕ್ಕೂ ಸಮಯ ಕೊಡ್ತಾರೆ. ರಾಧಿಕಾ ಪಂಡಿತ್ ತಮ್ಮ ಮಕ್ಕಳ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅದನ್ನು ಮೆಚ್ಚಿಕೊಳ್ತಾರೆ.