Yash-KGF 3 Movie: ಕೆಜಿಎಫ್-3 ಚಿತ್ರದ ರಿಲೀಸ್ ಡೇಟ್ ಅನೌನ್ಸ್!
ಜೇಮ್ಸ್ ಬಾಂಡ್ ಸಿನಿಮಾ ರೀತಿನೇ ಕೆಜಿಎಫ್ ಸಿನಿಮಾ ಸರಣಿಯಲ್ಲಿಯೇ ಸಾಗಲಿದೆ. ಐದು ಭಾಗದಲ್ಲಿ ಕೆಜಿಎಫ್ ಸಿನಿಮಾ ಬರಲಿದೆ. ಐದನೇ ಭಾಗವಾದ್ಮೇಲೆ ಹೀರೋ ಬದಲಾಗೋ ಸಾಧ್ಯತೆನೂ ಇದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-3 ಚಿತ್ರ ರಿಲೀಸ್ ಯಾವಾಗ ಅನ್ನೋ ಕುತೂಹಲ ಜಾಸ್ತಿನೇ ಇದೆ. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಇದರ ಬಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ.
2/ 7
ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ. ಆದರೆ ವರ್ಷಕ್ಕೆ ಒಂದೇ ಚಿತ್ರ ಅನ್ನೋಮಟ್ಟಿಗೆ ಯಶ್ ಫುಲ್ ಡೇಡಿಕೇಟೆಡ್ ಆಗಿಯೇ ಚಿತ್ರ ಮಾಡ್ತಿದ್ದಾರೆ.
3/ 7
ಕೆಜಿಎಫ್-1 ಮತ್ತು ಕೆಜಿಎಫ್-2 ಚಿತ್ರ ಆದ್ಮೇಲೆ ಕೆಜಿಎಫ್-3 ಚಿತ್ರ ಬರುತ್ತದೆ ಅನ್ನೋ ಮಾತು ಇದೆ. ಅದಕ್ಕೆ ಉತ್ತರ ಕೂಡ ಈಗ ಸಿಕ್ಕಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈ ಚಿತ್ರದ ಬಗ್ಗೆ ಈಗ ಹೇಳಿದ್ದಾರೆ.
4/ 7
ಕೆಜಿಎಫ್ ಚಿತ್ರದ ಮೂರನೇ ಸರಣಿ ಚಿತ್ರ 2025ಕ್ಕೆ ಸೆಟ್ಟೇರಲಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು "ದೈನಿಕ್ ಭಾಸ್ಕರ್" ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ.
5/ 7
ಜೇಮ್ಸ್ ಬಾಂಡ್ ಸಿನಿಮಾ ರೀತಿನೇ ಕೆಜಿಎಫ್ ಸಿನಿಮಾ ಸರಣಿಯಲ್ಲಿಯೇ ಸಾಗಲಿದೆ. ಐದು ಭಾಗದಲ್ಲಿಯೇ ಕೆಜಿಎಫ್ ಸಿನಿಮಾ ಬರಲಿದೆ. ಐದೇನೆ ಭಾಗವಾದ್ಮೇಲೆ ಹೀರೋ ಬದಲಾಗೋ ಸಾಧ್ಯತೆನೂ ಇದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
6/ 7
ಕೆಜಿಎಫ್-3 ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದ ಕೆಲಸದಲ್ಲಿಯೆ ಬ್ಯುಸಿಯಿದ್ದಾರೆ. ಇದಾದ್ಮೇಲೆ ಜೂನಿಯರ್ ಎನ್ಟಿಆರ್ ಚಿತ್ರವನ್ನ ಪ್ರಶಾಂತ್ ನೀಲ್ ಮಾಡಲಿದ್ದಾರೆ.
7/ 7
ಪ್ರಶಾಂತ್ ನೀಲ್ ಈಗಾಗಲೇ ಒಪ್ಪಿಕೊಂಡಿರೋ ಚಿತ್ರ ಮುಗಿಸೋಕೆ 2025 ಆಗುತ್ತದೆ. ಆಗಲೇ ಕೆಜಿಎಫ್-3 ಸಿನಿಮಾ ಸೆಟ್ಟೇರುತ್ತದೆ. 2026ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಅಂತಲೂ ವಿಜಯ್ ಕಿರಗಂದೂರು ಪತ್ರಿಕೆಗೆ ಹೇಳಿಕೊಂಡಿದ್ದಾರೆ.