Asha Bhat: ಹುಬ್ಬಳ್ಳಿಯಲ್ಲಿ ಶೇಂಗಾ ಹೋಳಿಗೆ-ರೊಟ್ಟಿ ಊಟ ಸವಿದ ರಾಬರ್ಟ್ ರಾಣಿ ಆಶಾ ಭಟ್..!
Roberrt Pre Release Event: ಭದ್ರಾವತಿ ಹುಡುಗಿ ಆಶಾ ಭಟ್ ರಾಬರ್ಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಇದೇ ತಿಂಗಳ 11ರಂದು ರಾಬರ್ಟ್ ತೆರೆ ಕಾಣಲಿದೆ. ಇನ್ನು ಈ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಫೆ. 28ರಂದು ಹುಬ್ಬಳ್ಳಿಯಲ್ಲಿ ನಡೆಯಿತು. ಈ ಕಾರ್ಯಕ್ರಮ ಮುಗಿಸಿದ ನಂತರ ಆಶಾ ಭಟ್ ಹುಬ್ಬಳ್ಳಿಯಲ್ಲಿರುವ ಖಾನಾವಳಿಯಲ್ಲಿ ಶೇಂಗಾ ಹೋಳಿಗೆ ಹಾಗೂ ರೊಟ್ಟಿ ಊಟ ಸವಿದಿದ್ದಾರೆ. (ಚಿತ್ರಗಳು ಕೃಪೆ: ಆಶಾ ಭಟ್ ಇನ್ಸ್ಟಾಗ್ರಾಂ ಖಾತೆ)
ಆಶಾ ಭಟ್ ಸಿನಿಮಾದಲ್ಲಿ ಸ್ಟಾರ್ ಆದರೆ ನಿಜ ಜೀವನದಲ್ಲಿ ಬಹಳ ಸಿಂಪಲ್ . ಅದಕ್ಕೆ ಅವರು ತಮ್ಮ ಸಿಂಪ್ಲಿಸಿಟಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.
2/ 20
ಈ ಹಿಂದೆ ಅಜ್ಜಿ ಮನೆಯಲ್ಲಿ ಅಡಿಕೆ ಸುಲಿದು ಸುದ್ದಿಯಾಗಿದ್ದ ಆಶಾ ಭಟ್ ಈಗ ಹುಬ್ಬಳ್ಳಿಯಲ್ಲಿರುವ ಖಾನಾವಳಿಯಲ್ಲಿ ಶೇಂಗಾ ಹೋಳಿಗೆ ಸವಿಯುವ ಮೂಲಕ ಸದ್ದು ಮಾಡುತ್ತಿದ್ದಾರೆ.
3/ 20
ಹುಬ್ಬಳ್ಳಿಯಲ್ಲಿರುವ ಫೇಮಸ್ ಬಸವೇಶ್ವರ ಖಾನಾವಾಳಿಯಲ್ಲಿ ಆಶಾ ಭಟ್ ರೊಟ್ಟಿ ಊಟದ ಜೊತೆ ಶೇಂಗಾ ಹೋಳಿಗೆ ಸವಿದಿದ್ದಾರೆ.
4/ 20
ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಮುಗಿಸಿಕೊಂಡ ನಂತರ ಹುಬ್ಬಳ್ಳಿಯಲ್ಲಿ ಅಲ್ಲಿ ಸ್ಥಳೀಯ ಖಾದ್ಯಗಳ ರುಚಿ ನೋಡಿದ್ದಾರೆ ಈ ನಟಿ. ಅದನ್ನು ಖುಷಿಯಿಂದ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
5/ 20
ಇನ್ನು ನಟಿ ಆಶಾ ಭಟ್ ಜೊತೆ ಗಾಯಕ ಹೇಮಂತ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಉತ್ತರ ಕರ್ನಾಟಕ ಖಾದ್ಯಗಳ ರುಚಿ ನೋಡಿದ್ದಾರೆ.
6/ 20
ನಂತರ ಈ ಸೆಲೆಬ್ರಿಟಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.