Sandalwood: ಕನ್ನಡದ ನಟರ ಹೆಸರಲ್ಲಿರುವ ರಸ್ತೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಏಷ್ಯಾದಲ್ಲೇ ಉದ್ದನೆಯ ರಸ್ತೆ ಇವರ ಹೆಸರಲ್ಲಿದೆ!
Sandalwood: ನಮ್ಮ ಸ್ಯಾಂಡಲ್ವುಡ್ ಕಲಾವಿದರ ಹೆಸರಗಳಲ್ಲಿ ಹಲವಾರು ರಸ್ತೆಗಳಿವೆ. ಅವರ ನಿಧನದ ನಂತರ ಅಥವಾ ಬದುಕಿರುವಾಗಲೇ ಅಭಿಮಾನದ ಹಾಗೂ ಅವರ ಸಾಧನೆಯ ಪ್ರತೀಕವಾಗಿ ಇಡುತ್ತಾರೆ. ನಮ್ಮ ಕರ್ನಾಟಕದ ಯಾವ ನಟರ ಹೆಸರಿನ ರಸ್ತೆ ಉದ್ದವಿದೆ, ಎಲ್ಲಿದೆ , ಇಲ್ಲಿದೆ ಫುಲ್ ಮಾಹಿತಿ.
ಡಾ.ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೆಚ್ಚು ಉದ್ದದ ರಸ್ತೆ ಇದ್ದು, ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ವರೆಗಿನ ರಸ್ತೆಗೆ ಕರ್ನಾಟಕ ರತ್ನ ಡಾll ಪುನೀತ್ ರಾಜ್ಕುಮಾರ್ ರಸ್ತೆ ಎಂದು ಹೆಸರಿಡಲಾಗಿದ್ದು,
2/ 8
12 ಕಿ.ಮೀ ಉದ್ದದ ರಸ್ತೆ ಇದಾಗಿದ್ದು, ಇದು ಕರ್ನಾಟಕದ ನಟರ ಹೆಸರಲ್ಲಿರುವ ಉದ್ದದ ರಸ್ತೆಗಳಲ್ಲಿ ಒಂದಾಗಿದೆ.
3/ 8
ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ ಸಹ ರಸ್ತೆಗೆ ಹೆಸರಿಡಲಾಗಿದ್ದು, ಸಿನಿಮಾ ರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಹೆಸರನ್ನು ಇಡಲಾಗಿದೆ.
4/ 8
ಸೌತ್ ಎಂಡ್ ರಸ್ತೆ ಬಳಿಯ, ಮಾಧವ ರಾಮ್ ಸರ್ಕಲ್ ಇಂದ ನಾಗಸಂದ್ರದ ತನಕದ ರಸ್ತೆಗೆ ಪಾರ್ವತಮ್ಮ ರಾಜ್ಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.
5/ 8
ವರನಟ ರಾಜ್ಕುಮಾರ್ ಅವರ ಹೆಸರು ಬಹಳಷ್ಟು ರಸ್ತೆಗಳಿಗೆ ಇಡಲಾಗಿದೆ. ಅವರ ಅಭಿಮಾನಿಗಳು ಅಭಿಮಾನದ ಸಂಕೇತವಾಗಿ ರಾಜ್ಯದ ಹಲವಾರು ಸ್ಥಳಗಳಲ್ಲಿ ರಸ್ತೆಗೆ ಅವರ ಹೆಸರಿಟ್ಟಿದ್ದಾರೆ.
6/ 8
ಇನ್ನು ಬೆಂಗಳೂರಿನ ರಾಜಾಜಿನಗರದ ರಾಜ್ಕುಮಾರ್ ರಸ್ತೆಯ ಉದ್ದ 6 ಕಿಮೀ ಆಗಿದೆ. ಆದರೆ ಅತಿ ಹೆಚ್ಚು ರಸ್ತೆಗಳು ಇವರ ಹೆಸರಿನಲ್ಲಿದೆ.
7/ 8
ವಿಷ್ಟುವರ್ಧನ್ ಹೆಸರಿನಲ್ಲಿನಲ್ಲಿರುವ ರಸ್ತೆ ದಾಖಲೆಯನ್ನು ಮಾಡಿರುವ ರಸ್ತೆ ಎನ್ನಬಹುದು. ಅತಿ ಉದ್ದದ ರಸ್ತೆಗೆ ತನ್ನ ಹೆಸರನ್ನು ಹೊಂದಿದ ಏಕೈಕ ಕಲಾವಿದ ವಿಷ್ಟು ದಾದಾ.
8/ 8
ಸುಮಾರು 14.5 ಕಿ.ಮೀ ಉದ್ದದ ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ಇಡಲಾಗಿದ್ದು, ಕನ್ನಡಕ್ಕೆ ಹೆಮ್ಮೆಯ ತಿಲಕ ಎನ್ನಬಹುದು.