Bigg Boss Mini Season: ಜಿಮ್ನಲ್ಲಿ ಎದುರಾಗಿದ್ದ ಆ ಹುಡುಗಿ ಗಿಣಿರಾಮ ಧಾರಾವಾಹಿಯ ನಟ ರಿತ್ವಿಕ್ ಬಳಿ ಕೇಳಿದ್ದರು ವಿಚಿತ್ರ ಪ್ರಶ್ನೆ..!
ಗಿಣಿರಾಮ ಧಾರಾವಾಹಿಯ ಮೂಲಕ ಮನೆ ಮನೆಯಲ್ಲಿ ಮನೆ ಮಾತಾಗಿರುವ ಶಿವರಾಮ ಪಾತ್ರಧಾರಿ ರಿತ್ವಿಕ್ ಮಠದ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಹೌದು, ಬಿಗ್ ಬಾಸ್ ಮಿನಿ ಸೀಸನ್ನಲ್ಲಿ ಸ್ಪರ್ಧಿಯಾಗಿ ರಿತ್ವಿಕ್ ದೊಡ್ಮನೆಯಲ್ಲಿದ್ದಾರೆ. ಈ ಮನೆಯಲ್ಲಿ ರಿತ್ವಿಕ್ ತಮಗೆ ಈ ಹಿಂದೆ ಎದುರಾಗಿದ್ದ ವಿಚಿತ್ರ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಿತ್ವಿಕ್ ಮಲ್ನಾಡ್ ಇನ್ಸ್ಟಾಗ್ರಾಂ ಖಾತೆ)
ಉತ್ತರ ಕರ್ನಾಟಕ ಭಾಷೆಯನ್ನಾಡುತ್ತಾ ಕಿರುತೆರೆಯ ಮೇಲೆ ಶಿವರಾಮನಾಗಿ ಮಿಂಚುತ್ತಿರುವ ನಟ ರಿತ್ವಿಕ್ ಮಲ್ನಾಡ್.
2/ 12
ರಿತ್ವಿಕ್ ಇತ್ತೀಚೆಗಷ್ಟೆ ಮದುವೆಯಾಗಿದ್ದು ಜೀವನದಲ್ಲಿ ಖುಷಿಯಾಗಿದ್ದಾರೆ.
3/ 12
ಇಂತಹ ಶಿವರಾಮ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ.
4/ 12
ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದ ನಂತರ ಈ ಮನೆಯಲ್ಲಿ ಮಿನಿ ಸೀಸನ್ ಆರಂಭವಾಗಿದೆ.
5/ 12
ಈ ಮಿನಿ ಸೀಸನ್ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಾಕಷ್ಟು ಮಂದಿ ಸ್ಪರ್ಧಿಗಳಾಗಿದ್ದಾರೆ.
6/ 12
ಇದರಲ್ಲಿ ರಿತ್ವಿಕ್ ಸಹ ಒಬ್ಬರು. 6 ದಿನಗಳ ಕಾಲ ನಡೆಯಲಿರುವ ಮಿನಿ ಸೀಸನ್ ಕಳೆದ ಶನಿವಾರದಿಂದ ಆರಂಭವಾಗಿದೆ.
7/ 12
ಮಿನಿ ಸೀಸನ್ನಲ್ಲಿರುವ ನಟ ರಿತ್ವಿಕ್ ಮಠದ್ ಅವರು ಎರಡು ತಿಂಗಳ ಹಿಂದೆ ತಮಗೆ ಎದುರಾಗಿದ್ದ ವಿಚಿತ್ರ ಘಟನೆಯೊಂದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರ ಬಳಿ ಹೇಳಿಕೊಂಡಿದ್ದಾರೆ.
8/ 12
ನಿತ್ಯ ಜಿಮ್ಗೆ ಹೋಗಿ ವರ್ಕೌಟ್ ಮಾಡಿ ಬರುತ್ತಿದ್ದ ರಿತ್ವಿಕ್ ಅವರನ್ನು ಇಬ್ಬರು ಹುಡುಗಿಯರು ತುಂಬಾ ದಿನಗಳಿಂದ ಗಮನಿಸುತ್ತಿದ್ದರಂತೆ.
9/ 12
ಒಮ್ಮೆ ಈ ಇಬ್ಬರು ಹುಡುಗಿಯರಲ್ಲಿ ಒಬ್ಬರು ರಿತ್ವಿಕ್ ಬಳಿ ಬಂದು ನಿಮ್ಮ ಬಳಿ ಮಾತಾಡಬೇಕು ಎಂದಿದ್ದರಂತೆ.
10/ 12
ಜಿಮ್ನಲ್ಲಿ ನಿಮ್ಮ ಬಳಿ ಮಾತಾಡಬೇಕು ಎಂದ ಆ ಹುಡುಗಿ ಸೆಲ್ಫಿ ಕೇಳುತ್ತಾರೇನೋ ಅಂತ ತಿಳಿದು ರಿತ್ವಿಕ್ ಹೇಳಿ ಎಂದಿದ್ದರಂತೆ.
11/ 12
ಆಗ ಆ ಹುಡುಗಿ ಸರ್ ನೀವು ಜೀವನದಲ್ಲಿ ತುಂಬಾ ದುಃಖಕರ ಘಟನೆ ಏನಾದರೂ ನಡೆದಿದೆಯಾ ಎಂದಿದ್ದಾರೆ. ಏಕೆ ಹೀಗೆ ಕೇಳ್ತೀರಾ ಅಂದ್ರೆ, ನೀವು ಯಾವಾಗೂ ಒಂದು ರೀತಿ ದುಃಖದಲ್ಲಿರುವಂತೆ ಕಾಣುತ್ತೆ ಎಂದರಂತೆ.
12/ 12
ಅದಕ್ಕೆ ಪ್ರತಿಕ್ರಿಯಿಸಿದ್ದ ರಿತ್ವಿಕ್ ನನ್ನ ಮುಖ ಇರೋದೇ ಹಾಗೆ ಎಂದ ರಿತ್ವಿಕ್ ನಾನು ಆರಾಮಾಗಿದ್ದೇನೆ ಎಂದಿದ್ದರಂತೆ. ಈ ಘಟನೆಯನ್ನು ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬರು ಸ್ಪರ್ಧಿ ಬಳಿ ಹೇಳಿಕೊಂಡಿದ್ದಾರೆ ರಿತ್ವಿಕ್.