ರಿತೇಶ್ ಮತ್ತು ಜೆನಿಲಿಯಾ ಅವರ ಮೊದಲ ಚಿತ್ರ ತುಜೆ ಮೇರಿ ಕಸಮ್ ಬಿಡುಗಡೆಯಾಗಿ ಇಂದಿಗೆ 20 ವರ್ಷಗಳು. ಆದರೆ ಈ ಚಿತ್ರ ಟಿವಿಯಲ್ಲಿ ಏಕೆತೋರಿಸುವುದಿಲ್ಲ? ಇದಕ್ಕೆ ಕಾರಣ 20 ವರ್ಷಗಳ ನಂತರ ಬೆಳಕಿಗೆ ಬಂದಿದೆ.
2/ 12
ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್ ಸದ್ಯ ಸುದ್ದಿಯಲ್ಲಿರುವ ಮುದ್ದಾದ ಜೋಡಿ. ತಮ್ಮ ಲೇಟೆಸ್ಟ್ ಸಿನಿಮಾ ಮೂಲಕ ಸುದ್ದಿಯಾಗಿದ್ದಾರೆ.
3/ 12
ಇವರಿಬ್ಬರ ಮೊದಲ ಮರಾಠಿ ಸಿನಿಮಾ 'ವೇದ್' ಪ್ರೇಕ್ಷಕರ ಮುಂದೆ ಬಂದಿದೆ. ರಿತೇಶ್ ಮತ್ತು ಜೆನಿಲಿಯಾ ಮಹಾರಾಷ್ಟ್ರದ ಪ್ರೇಕ್ಷಕರ ನೆಚ್ಚಿನ ಜೋಡಿ.
4/ 12
ರಿತೇಶ್ ಮತ್ತು ಜೆನಿಲಿಯಾ ಮೊದಲು ಒಟ್ಟಿಗೆ ಬಂದಿದ್ದು 'ಹೇ ತುಜೆ ಮೇರಿ ಕಸಮ್' ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಭಾರೀ ಮೆಚ್ಚುಗೆ ಪಡೆದಿತ್ತು.
5/ 12
ತುಜೆ ಮೇರಿ ಕಸಮ್ ಚಿತ್ರ ಇಂದಿಗೆ 20 ವರ್ಷ ಪೂರೈಸಿದೆ. ಸಿನಿಮಾ 3 ಜನವರಿ 2003 ರಂದು ಬಿಡುಗಡೆಯಾಯಿತು. ಈ ಚಿತ್ರ ರಿತೇಶ್ ಮತ್ತು ಜೆನಿಲಿಯಾ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು .
6/ 12
ತುಜೆ ಮೇರಿ ಕಸಮ್ನ ಸೆಟ್ನಲ್ಲಿ ರಿತೇಶ್ ಜಿನಿಲಿಯಾ ಅವರನ್ನು ಭೇಟಿಯಾದರು. ಡೇಟಿಂಗ್ ಪ್ರಾರಂಭಿಸಿದರು. ಈಗ್ ವೇದ್ ಚಿತ್ರದಲ್ಲಿ ರಿತೇಶ್ ಮತ್ತು ಜಿನಿಲಿಯಾ ಬಹಳ ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
7/ 12
ನಮ್ಮಲ್ಲಿ ಕೆಲವರು ರಿತೇಶ್ ಮತ್ತು ಜೆನಿಲಿಯಾ ಒಟ್ಟಿಗೆ ಕಾಣಿಸಿಕೊಂಡ ತುಜೆ ಮೇರಿ ಕಸಮ್ ಚಿತ್ರವನ್ನು ನೋಡಿದ್ದಾರೆ. ಇನ್ನು ಕೆಲವರು ನೋಡಿಲ್ಲ.
8/ 12
ಕಳೆದ 20 ವರ್ಷಗಳಲ್ಲಿ ಸಿನಿಮಾವನ್ನು ಟಿವಿಯಲ್ಲಿ ಎಂದಿಗೂ ತೋರಿಸಿಲ್ಲ. ಯಾವುದೇ OTT ಪ್ಲಾಟ್ಫಾರ್ಮ್ನಲ್ಲಿ ಸಿನಿಮಾ ನೋಡೋಕೆ ಸಿಗಲ್ಲ. ಇದಕ್ಕೆ ಕಾರಣ ಏನು ಗೊತ್ತಾ?
9/ 12
ರಿತೇಶ್ ಮತ್ತು ಜೆನಿಲಿಯಾ ಜೋಡಿಯ ಮೊದಲ ಚಿತ್ರವನ್ನು ರಾಮೋಜಿ ರಾವ್ ನಿರ್ಮಿಸಿದ್ದರು. ಜನ ಥಿಯೇಟರ್ಗಳಲ್ಲಿ ಸಿನಿಮಾ ನೋಡಲು ಮತ್ತೆ ಮತ್ತೆ ಬರಬೇಕು ಎಂದು ಅವರು ಬಯಸಿದ್ದರು.
10/ 12
ಆ ಸಮಯದಲ್ಲಿ ರಾಮೋಜಿ ರಾವ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿರಲಿಲ್ಲ. ಮೂವಿ ಚಾನಲ್ ಅವರು ಹಕ್ಕುಗಳನ್ನು ಹೊಂದಿರುವ ಸಿನಿಮಾ ಮಾತ್ರ ತೋರಿಸಬಹುದು. ಅವರು ಪ್ರೊಡಕ್ಷನ್ ಹೌಸ್ನಿಂದ ಖರೀದಿಸಿದ ಚಲನಚಿತ್ರಗಳನ್ನು ತೋರಿಸುತ್ತಾರೆ.
11/ 12
ತುಜೆ ಮೇರಿ ಕಸಮ್ ಚಲನಚಿತ್ರವು 2003 ರಲ್ಲಿ ಬಿಡುಗಡೆಯಾಯಿತು. ಆದರೆ ಡಿಜಿಟಲ್ ಹಕ್ಕು ಇರದ ಕಾರಣ ಸಿನಿಮಾವನ್ನು ಇಲ್ಲಿಯವರೆಗೆ ಚಾನಲ್ನಲ್ಲಿ ತೋರಿಸಲಾಗಿಲ್ಲ.
12/ 12
ಆದ್ದರಿಂದ, ರಿತೇಶ್ ಮತ್ತು ಜೆನಿಲಿಯಾ ದೇಶಮುಖ್ ಅವರ ಮೊದಲ ಸಿನಿಮಾ ತುಜೆ ಮೇರಿ ಕಸಮ್ ಅನ್ನು ಇಂದಿಗೂ OTT ಅಥವಾ ಚಾನೆಲ್ಗಳಲ್ಲಿ ವೀಕ್ಷಿಸಲು ಸಾಧ್ಯವಿಲ್ಲ.