Rishi Kapoor- Neetu Singh Love Story: ಬಾಲಿವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಭಾರೀ ಸೃಷ್ಟಿಸಿಕೊಂಡಿದ್ದ ನಟ ರಿಷಿ ಕಪೂರ್ ಯಶಸ್ಸಿನ ಉತ್ತುಂಗದಲ್ಲಿದ್ದ ನಾಯಕ. ಮೇರಾ ನಾಮ್ ಜೋಕರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಿಷಿ ಕಪೂರ್ ತನ್ನ ಆಪ್ತ ಸ್ನೇಹಿತೆಯಾಗಿದ್ದ ನಟಿ ನೀತು ಸಿಂಗ್ ಅವರನ್ನೇ ಮದುವೆಯಾದರು. ಕ್ಯಾನ್ಸರ್ನಿಂದ ರಿಷಿ ಕಪೂರ್ ಇಂದು ಕೊನೆಯುಸಿರೆಳೆದಿದ್ದು, ಅವರ ಜೀವನದ ಬಗ್ಗೆ ನಿಮಗೆ ತಿಳಿಯದೆ ಸಂಗತಿಗಳು ಇಲ್ಲಿವೆ... (ಫೋಟೋ ಕೃಪೆ: ನೀತು ಸಿಂಗ್ ಫೇಸ್ಬುಕ್ ಖಾತೆ)
ಬಹುತೇಕ ಎಲ್ಲರಿಗೂ ಗೊತ್ತಿರುವ ಹಾಗೆ ರಿಷಿ ಕಪೂರ್ ಮತ್ತು ನೀತು ಸಿಂಗ್ ಅವರದ್ದು ಪ್ರೇಮ ವಿವಾಹ.
3/ 41
ಬಾಲಿವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಭಾರೀ ಸೃಷ್ಟಿಸಿಕೊಂಡಿದ್ದ ನಟ ರಿಷಿ ಕಪೂರ್ ಯಶಸ್ಸಿನ ಉತ್ತುಂಗದಲ್ಲಿದ್ದ ನಾಯಕ.
4/ 41
ಮೇರಾ ನಾಮ್ ಜೋಕರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಿಷಿ ಕಪೂರ್ ತನ್ನ ಆಪ್ತ ಸ್ನೇಹಿತೆಯಾಗಿದ್ದ ನಟಿ ನೀತು ಸಿಂಗ್ ಅವರನ್ನೇ ಮದುವೆಯಾದರು.
5/ 41
ಬಾಲನಟಿಯಾಗಿದ್ದ ನೀತು ಸಿಂಗ್ ನಂತರ ನಾಯಕಿಯಾಗಿ ಬಾಲಿವುಡ್ನಲ್ಲಿ ಅಭಿನಯಿಸತೊಡಗಿದರು.
6/ 41
ಯಾವುದೇ ನಟನಾ ಹಿನ್ನೆಲೆಯಿಲ್ಲದೆ, ಅಪ್ಪನ ಆಸರೆಯಿಲ್ಲದೆ ಅಮ್ಮನೊಂದಿಗೆ ಬೆಳೆದ ಹುಡುಗಿ ನೀತು ಸಿಂಗ್.
7/ 41
ಆದರೆ, ರಿಷಿ ಕಪೂರ್ ಹಾಗಲ್ಲ. ದಿ ಶೋ ಮ್ಯಾನ್ ಎಂದೇ ಕರೆಸಿಕೊಂಡಿದ್ದ ರಾಜ್ ಕಪೂರ್ ಮಗನಾಗಿದ್ದ ರಿಷಿ ಕಪೂರ್ಗೆ ಚಿತ್ರರಂಗದಲ್ಲಿ ನೆಲೆಯೂರುವುದು ಕಷ್ಟವೇನೂ ಆಗಲಿಲ್ಲ.
8/ 41
ಮೇರಾ ನಾಮ್ ಜೋಕರ್ ಸಿನಿಮಾದಲ್ಲಿ ತನ್ನ ತಂದೆ ರಾಜ್ ಕಪೂರ್ ಅವರ ಯೌವನದ ಪಾತ್ರವನ್ನು ನಿರ್ವಹಿಸಿದ್ದರೂ ರಿಷಿ ಕಪೂರ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ 1973ರಲ್ಲಿ ತೆರೆಕಂಡ ಬಾಬಿ ಸಿನಿಮಾ ಮೂಲಕ.
9/ 41
ಅದಾದ ಒಂದು ವರ್ಷಕ್ಕೆ ಅಂದರೆ 1974ರಲ್ಲಿ ನೀತು ಸಿಂಗ್ ಜೊತೆ ಜಹ್ರೀಲಾ ಇನ್ಸಾನ್ ಸಿನಿಮಾದಲ್ಲಿ ರಿಷಿ ಕಪೂರ್ ನಾಯಕನಾಗಿ ಕಾಣಿಸಿಕೊಂಡರು.
10/ 41
ಅವರಿಬ್ಬರ ಜೋಡಿಗೆ ಬಾಲಿವುಡ್ ಸಿನಿಪ್ರಿಯರಿಂದ ಭಾರೀ ಮೆಚ್ಚುಗೆಗಳು ಕೇಳಿಬಂದವು.
11/ 41
ಅಲ್ಲಿಂದಲೇ ಅವರಿಬ್ಬರ ನಡುವೆ ಸ್ನೇಹ ಶುರುವಾಗಿದ್ದು...
12/ 41
ರಿಷಿ ಕಪೂರ್ ಬೇರೆ ಸಿನಿಮಾದ ಶೂಟಿಂಗ್ನಲ್ಲಿದ್ದಾಗ ನೀತು ಸಿಂಗ್ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದರು.
13/ 41
ಈ ಬಗ್ಗೆ ನೀತು ಸಿಂಗ್ ಬಳಿ ಹೇಳಿದ ಅವರು ಪ್ರೇಮ ನಿವೇದನೆ ಮಾಡಿಕೊಂಡರು. ಅದಕ್ಕೆ ನೀತು ಸಿಂಗ್ ಒಪ್ಪಿಗೆ ಕೂಡ ಸಿಕ್ಕಿತು.
14/ 41
ಆದರೆ, ಆ ಲವ್ ಸ್ಟೋರಿ ಅಷ್ಟಕ್ಕೇ ಸುಖಾಂತ್ಯವಾಗಲಿಲ್ಲ! ರಿಷಿ ಕಪೂರ್ಗೆ ಮದುವೆ ಮಾಡಿಕೊಳ್ಳಲು ಇಷ್ಟವಿರಲಿಲ್ಲ.
15/ 41
ನಾನು ನಿನ್ನೊಂದಿಗೆ ಡೇಟಿಂಗ್ ಮಾಡುತ್ತೇನೆ. ಆದರೆ, ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ ರಿಷಿ ಮಾತಿನಿಂದ ನೀತು ನೊಂದುಕೊಂಡರು.
16/ 41
ಅದಾಗಿ ಹತ್ತರಿಂದ ಹನ್ನೆರಡು ಸಿನಿಮಾಗಳನ್ನು ಒಟ್ಟಾಗಿ ಮಾಡಿದ ನೀತು ಮತ್ತು ರಿಷಿ ಕಪೂರ್ ನಡುವೆ ಬಾಂಧವ್ಯವೊಂದು ಗಟ್ಟಿಯಾಗಿತ್ತು. ಅದೆಲ್ಲ ಆಗಿ 5 ವರ್ಷಗಳ ಬಳಿಕ ಅಂತೂಇಂತು ನೀತು ರಿಷಿಯ ಮನಸು ಬದಲಾಯಿಸಿ ಮದುವೆಗೆ ಒಪ್ಪಿಸಿದರು.
17/ 41
ಕೊನೆಗೂ 21 ವರ್ಷದ ನೀತು ಜೊತೆಗೆ 26 ವರ್ಷದ ರಿಷಿ ಕಪೂರ್ ಮದುವೆ ಅದ್ದೂರಿಯಾಗೇ ನಡೆಯಿತು.
18/ 41
ಅದಾದ ನಂತರ ರಿಷಿ ಕಪೂರ್ ಜೀವನದಲ್ಲಿ ನೀತು ಎಲ್ಲವೂ ಆದರು. ಗೆಳತಿಯಾಗಿ, ಮಡದಿಯಾಗಿ, ಪ್ರೇಯಸಿಯಾಗಿ, ರಣಬೀರ್ ಮತ್ತು ರಿಧಿಮಾರ ಅಮ್ಮನಾಗಿ ಎಲ್ಲ ಜವಾಬ್ದಾರಿಗಳನ್ನೂ ನೀತು ಸಿಂಗ್ ಅಚ್ಚುಕಟ್ಟಾಗಿ ನಿಭಾಯಿಸಿದರು.
19/ 41
ಮದುವೆಯಾದ ಬಳಿಕ ತನ್ನ ಸಂಪೂರ್ಣ ಗಮನವನ್ನು ಮನೆಯ ಕಡೆ ಕೊಡಲು ನಿರ್ಧರಿಸಿದ ನೀತು ಸಿಂಗ್ ತಾನಿನ್ನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಮಾಪಕರಿಗೆ ಹೇಳಿದರು.
20/ 41
ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನೀತು ತೆರೆಯಿಂದ ಹಿಂದೆ ಸರಿದರು.
21/ 41
ಈ ನಿರ್ಧಾರಕ್ಕೆ ರಿಷಿ ಕಪೂರ್ ಒತ್ತಾಯವೇ ಕಾರಣ ಎಂಬ ಟೀಕೆಗಳು ವ್ಯಕ್ತವಾದವು.
22/ 41
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ನೀತು ಸಿಂಗ್, ನಾನು 5 ವರ್ಷದವಳಿದ್ದಾಗಿನಿಂದ ಸಿನಿಮಾಗಳಲ್ಲಿ ಅಭಿನಯಿಸತೊಡಗಿದೆ. 15 ವರ್ಷಕ್ಕೂ ಹೆಚ್ಚು ಕಾಲ ಬಣ್ಣ ಹಚ್ಚಿದ್ದೇನೆ. ಇನ್ನು ನಿಜವಾದ ಬದುಕನ್ನು ಅನುಭವಿಸಬೇಕೆಂಬ ಆಸೆಯಾಗಿದೆ. ಅದಕ್ಕಾಗಿ ಈ ನಿರ್ಧಾರ ಎಂದು ಹೇಳಿದ್ದರು.
23/ 41
21 ವರ್ಷದೊಳಗೆ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನೀತು ನಂತರ ಕೆಲವೇ ಕೆಲವು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರು.
24/ 41
ಇತ್ತೀಚೆಗೆ ತೆರೆಕಂಡ ಲವ್ ಆಜ್ ಕಲ್ ಮತ್ತು ದೋ ದೋನಿ ಚಾರ್ ಸಿನಿಮಾಗಳಲ್ಲಿ ನೀತು ಸಿಂಗ್ ರಿಷಿ ಕಪೂರ್ ಜೊತೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
25/ 41
39 ವರ್ಷಗಳ ಬಳಿಕ ಈ ಜೋಡಿ ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
26/ 41
ರಿಷಿ ಕಪೂರ್ಗೆ ವಿರೀತ ಕುಡಿಯುವ ಚಟವಿತ್ತು, ಮುಂಗೋಪವಿತ್ತು. ಅದನ್ನೆಲ್ಲ ಸಹಿಸಿಕೊಂಡು, ಕೊನೆಯವರೆಗೂ ಆತನನ್ನು ತಿದ್ದುತ್ತ ನೀತು ಸಿಂಗ್ ಇಡೀ ಕುಟುಂಬವನ್ನು ನಿಭಾಯಿಸಿದರು.
27/ 41
ರಿಷಿ ಕಪೂರ್ ಜೊತೆ ನೀತು ಸಿಂಗ್
28/ 41
ರಿಷಿ ಕಪೂರ್, ಮಗಳ ರಿಧಿಮಾ ಕಪೂರ್ ಜೊತೆ ನೀತು ಸಿಂಗ್
29/ 41
ರಿಷಿ ಕಪೂರ್ ಜೊತೆ ನೀತು ಸಿಂಗ್
30/ 41
ರಿಷಿ ಕಪೂರ್
31/ 41
ರಿಷಿ ಕಪೂರ್ ಜೊತೆ ನೀತು ಸಿಂಗ್
32/ 41
ರಿಷಿ ಕಪೂರ್ ಜೊತೆ ನೀತು ಸಿಂಗ್
33/ 41
ರಿಧಿಮಾ ಕಪೂರ್ ಜೊತೆ ನೀತು ಸಿಂಗ್
34/ 41
ರಿಷಿ ಕಪೂರ್ ಜೊತೆ ನೀತು ಸಿಂಗ್
35/ 41
ರಿಷಿ ಕಪೂರ್ -ನೀತು ಸಿಂಗ್ ಫ್ಯಾಮಿಲಿ
36/ 41
ಮಗ ರಣಬೀರ್ ಕಪೂರ್ ಜೊತೆ ನೀತು ಸಿಂಗ್
37/ 41
ರಿಷಿ ಕಪೂರ್ , ನೀತು ಸಿಂಗ್ ಜೊತೆ ಕ್ರಿಕೆಟಿಗ ಕಪಿಲ್ ದೇವ್