Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

ರಣಬೀರ್ ಕಪೂರ್ ಪ್ರಕಾರ ರಿಷಿ ಕಪೂರ್ ದಿನಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡುತ್ತಿದ್ದರಂತೆ. ಈ ಬಗ್ಗೆ ಹೊಸ ಸಂದರ್ಶನವೊಂದರಲ್ಲಿ ತನ್ನ ಧಾರ್ಮಿಕ ನಂಬಿಕೆಗಳ ಮೇಲೆ ಪ್ರಭಾವ ಬೀರಿದ ತನ್ನ ದಿವಂಗತ ತಂದೆಯನ್ನು ರಣಬೀರ್​ ಕಪೂರ್​ ನೆನಪಿಸಿಕೊಂಡಿದ್ದಾರೆ.

First published:

  • 18

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ಸಾಮಾನ್ಯವಾಗಿ ನಾವೆಲ್ಲಾ ನಮ್ಮನ್ನು ಅಗಲಿದ ಆಪ್ತರ ಬಗ್ಗೆ ಹಳೆಯ ನೆನಪುಗಳನ್ನು ಆಗಾಗ್ಗೆ ಮೆಲುಕು ಹಾಕುತ್ತಿರುತ್ತೇವೆ.ಈಗ ಮತ್ತೊಬ್ಬ ಬಾಲಿವುಡ್ ನಟ ತನ್ನ ದಿವಂಗತ ತಂದೆ ಮತ್ತು ನಟನ ಬಗ್ಗೆ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ ನೋಡಿ. ಕಳೆದ ವರ್ಷವಷ್ಟೆ ಪತ್ನಿ ಮತ್ತು ನಟಿ ಆಲಿಯಾ ಭಟ್ ಅವರೊಂದಿಗೆ ಮಗಳು ರಾಹಾ ಕಪೂರ್ ಅವರನ್ನು ಸ್ವಾಗತಿಸಿದ ರಣಬೀರ್ ಕಪೂರ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ತಂದೆ ರಿಷಿ ಕಪೂರ್ ಅವರ ಬಗ್ಗೆ ಮಾತನಾಡಿದ್ದಾರೆ.

    MORE
    GALLERIES

  • 28

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ದಿವಂಗತ ತಂದೆ ಮತ್ತು ನಟ ರಿಷಿ ಕಪೂರ್ ಅವರೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ರಣಬೀರ್ ಮಾತನಾಡಿದರು. ಅವರು ತಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡುತ್ತಾ, ನಟ ತನ್ನಲ್ಲಿ ಆ ಗುಣಗಳು ಬರುವುದಕ್ಕೆ ತನ್ನ ತಂದೆಯೇ ಪ್ರಮುಖ ಕಾರಣ ಎಂದು ಹೇಳಿದರು.

    MORE
    GALLERIES

  • 38

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ಕೆಲವು ವರ್ಷಗಳ ಕಾಲ ಲ್ಯುಕೇಮಿಯಾ ಕಾಯಿಲೆಯ ವಿರುದ್ಧ ಹೋರಾಡಿದ ನಂತರ 2020 ರ ಏಪ್ರಿಲ್ 30 ರಂದು 67ನೇ ವಯಸ್ಸಿನಲ್ಲಿ ನಿಧನರಾದ ರಿಷಿ ಕಪೂರ್ ಅವರು ತುಂಬಾ ಧಾರ್ಮಿಕರಾಗಿದ್ದಂತಹ ವ್ಯಕ್ತಿ ಎಂದು ಮಗ ರಣಬೀರ್ ಸಂದರ್ಶನದಲ್ಲಿ ಹೇಳಿದರು. ತನ್ನ ತಂದೆಯನ್ನು ನೋಡುತ್ತಾ ಬೆಳೆದದ್ದು ತನಗೂ ಸಹ ದೇವರ ಮೇಲೆ ನಂಬಿಕೆ ಹುಟ್ಟಲು ಕಾರಣವಾಯಿತು ಎಂದು ರಣಬೀರ್ ಹೇಳಿದರು.

    MORE
    GALLERIES

  • 48

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ದಿವಂಗತ ನಟ ರಿಷಿ ಕಪೂರ್ ಅವರಿಂದ 'ಯಾವುದಾದರೂ ಧಾರ್ಮಿಕ ಆಲೋಚನೆಗಳನ್ನು ಆನುವಂಶಿಕವಾಗಿ ಪಡೆದಿರಾ' ಅಂತ ಕೇಳಿದ ಪ್ರಶ್ನೆಗೆ ರಣಬೀರ್ ಫ್ರೀ ಪ್ರೆಸ್ ಜರ್ನಲ್ ಗೆ "ನಾನು ತುಂಬಾನೇ ತೀವ್ರವಾದಿ ಮತ್ತು ನಾನು ದೇವರನ್ನು ನಂಬುತ್ತೇನೆ ಅಷ್ಟೇ. ಆದರೆ ನನ್ನ ತಂದೆ ಬಹಳ ಧಾರ್ಮಿಕ ಮತ್ತು ಧರ್ಮನಿಷ್ಠರಾಗಿದ್ದರು. 

    MORE
    GALLERIES

  • 58

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ಅವರು ದಿನಕ್ಕೆ ಎರಡು ಬಾರಿ ಪ್ರಾರ್ಥಿಸುತ್ತಿದ್ದರು. ಕಾರಿನಲ್ಲಿ ಪ್ರಯಾಣಿಸುವಾಗ ಸಹ ರಸ್ತೆಯಲ್ಲಿ ಯಾವುದಾದರೂ ಸಣ್ಣ ಮಂದಿರವನ್ನು ನೋಡಿದರೂ ಸಹ ಆ ದೇವರಿಗೆ 'ಜೈ' ಅಂತ ಹೇಳುತ್ತಿದ್ದರು” ಎಂದು ಹೇಳಿದರು.

    MORE
    GALLERIES

  • 68

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ರಿಷಿ ಕಪೂರ್ ಅವರ ಬಗ್ಗೆ ಮತ್ತಷ್ಟು ಮಾತನಾಡಿದ ರಣಬೀರ್ "ಅಪ್ಪ ತುಂಬಾ ಕಟ್ಟುನಿಟ್ಟಾಗಿದ್ದರು, ಆದರೆ ಅವರು ತುಂಬಾನೇ ಅದ್ಭುತವಾದ ವ್ಯಕ್ತಿತ್ವವನ್ನು ಹೊಂದಿದ್ದರು. ನನ್ನನ್ನು ಹೆಚ್ಚಿನ ಶಿಕ್ಷಣಕ್ಕಾಗಿ ಅಪ್ಪ ನನಗೆ ವಿದೇಶಕ್ಕೆ ಕಳುಹಿಸಿದರು ಮತ್ತು ನಾನು ಅಲ್ಲಿ ಪ್ರಾಯೋಗಿಕ ಮತ್ತು ಶೈಕ್ಷಣಿಕವಾಗಿ ತುಂಬಾನೇ ಕಲಿಯಲು ಸಾಧ್ಯವಾಯಿತು.

    MORE
    GALLERIES

  • 78

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ನನ್ನ ತಂದೆಗೆ ನಾನು ತುಂಬಾನೇ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ನನ್ನನ್ನು ಬೆಳೆಸುವಾಗ ನನ್ನ ಪೋಷಕರು ನನಗೆ ಹೇಳಿಕೊಟ್ಟ ಮಾತುಗಳನ್ನು ನಾನು ಮುಂದೆ ನನ್ನ ಮಕ್ಕಳಿಗೂ ಹೇಳಲು ಇಷ್ಟಪಡುತ್ತೇನೆ. ಇದರಿಂದ ಅವರು ಸಹ ನನ್ನ ಹಾಗೆ ಸ್ವಂತ ಅರ್ಹತೆಯನ್ನು ಬೆಳೆಸಿಕೊಳ್ಳಬಹುದು" ಎಂದು ಹೇಳಿದರು.

    MORE
    GALLERIES

  • 88

    Ranbir Kapoor: ರಿಷಿ ಕಪೂರ್​ಗೆ ದೇವರ ಮೇಲೆ ಬಹಳ ನಂಬಿಕೆಯಂತೆ, ಅಪ್ಪನನ್ನು ನೆನೆದು ಭಾವುಕರಾದ ರಣಬೀರ್

    ಇದೇ ಸಂದರ್ಶನದಲ್ಲಿ, ರಣಬೀರ್ ಸ್ವತಃ ತಾವು ಒಂದು ಮಗುವಿನ ತಂದೆಯಾದ ನಂತರ ತನ್ನ ಹೆತ್ತವರ ಬಗ್ಗೆ ತನ್ನ ಮನೋಭಾವ ಹೇಗೆ ಬದಲಾಯಿತು ಎಂಬುದರ ಬಗ್ಗೆ ಸಹ ಮನಸ್ಸು ಬಿಚ್ಚಿ ಮಾತನಾಡಿದರು. ಅವರು ತಂದೆಯಾದ ನಂತರ, ಅವರ ಹೆತ್ತವರ ಬಗ್ಗೆ ಅವರಿಗಿದ್ದ ಗೌರವವೂ ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

    MORE
    GALLERIES