ಸೂಪರ್ ಹಿಟ್ ಕನ್ನಡ ಚಿತ್ರದ ರಿಮೇಕ್ನಲ್ಲಿ ಬಣ್ಣ ಹಚ್ಚಿದ್ದರು ರಿಷಿ ಕಪೂರ್..!
Rishi Kapoor: ಬಾಬಿ ಸಿನಿಮಾ ರಿಷಿ ಕಪೂರ್ಗೆ ಬಾಲಿವುಡ್ನಲ್ಲಿ ಹೊಸ ಇಮೇಜ್ ತಂದುಕೊಟ್ಟಿತು. ಆದರೆ ರಿಷಿ ಅವರಿಗೆ ರೆಬೆಲ್ ಲುಕ್ ಕರುಣಿಸಿದ್ದು ಮಾತ್ರ ಕನ್ನಡ ನಿರ್ದೇಶಕ ಎಂಬುದು ವಿಶೇಷ.
ಬಾಲಿವುಡ್ನ ಮತ್ತೊಂದು ತಾರಾ ಕೊಂಡಿ ಕಳಚಿಕೊಂಡಿದೆ. ಬಹುಮುಖ ಪ್ರತಿಭೆ ಇರ್ಫಾನ್ ಖಾನ್ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ ಶ್ರೇಷ್ಠ ನಟ ರಿಷಿ ಕಪೂರ್ ಕೂಡ ವಿದಾಯ ಹೇಳಿದ್ದಾರೆ.
2/ 12
ಕಳೆದ ಎರಡು ವರ್ಷಗಳಿಂದ ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ಯೊಂದಿಗೆ ಹೋರಾಡುತ್ತಿದ್ದ ರಿಷಿ ಇಂದು ಮುಂಬೈನಲ್ಲಿ ನಿಧನರಾದರು.
3/ 12
ತಂದೆ ರಾಜ್ ಕಪೂರ್ ಅವರ ಮೇರಾ ನಾಮ್ ಜೋಕರ್ (1970) ಚಿತ್ರದಲ್ಲಿ ಬಾಲ ನಟನಾಗಿ ಸಿನಿ ಪಯಣ ಆರಂಭಿಸಿದ್ದ ರಿಷಿ ಕಪೂರ್ ಚೊಚ್ಚಲ ಚಿತ್ರದಲ್ಲೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
4/ 12
ಆ ಬಳಿಕ ಕಾಣಿಸಿಕೊಂಡ ಬಾಬಿ ಸಿನಿಮಾ ರಿಷಿ ಕಪೂರ್ಗೆ ಬಾಲಿವುಡ್ನಲ್ಲಿ ಹೊಸ ಇಮೇಜ್ ತಂದುಕೊಟ್ಟಿತು. ಆದರೆ ರಿಷಿ ಅವರಿಗೆ ರೆಬೆಲ್ ಲುಕ್ ಕರುಣಿಸಿದ್ದು ಮಾತ್ರ ಕನ್ನಡ ನಿರ್ದೇಶಕ ಎಂಬುದು ವಿಶೇಷ.
5/ 12
ಹೌದು, 1972 ರಲ್ಲಿ ಕನ್ನಡದಲ್ಲಿ ಬಿಡುಗಡೆಯಾಗಿದ್ದ ನಾಗರಹಾವು ಸಿನಿಮಾ ವಿಷ್ಣವರ್ಧನ್ಗೆ ಹೊಸ ಇಮೇಜ್ ತಂದುಕೊಟ್ಟಿತು. ಖ್ಯಾತಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾಯರು ಬರೆದಿರುವ ಕಾದಂಬರಿ ಆಧಾರಿತ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಹಿಂದಿಗೂ ರಿಮೇಕ್ ಮಾಡಿದ್ದರು.
6/ 12
ಬಾಲಿವುಡ್ನಲ್ಲಿ ರಾಮಾಚಾರಿ ಪಾತ್ರವನ್ನು ರಿಷಿ ಕಪೂರ್ ನಿರ್ವಹಿಸಿದ್ದರು. ಜೆಹ್ರೀಲಾ ಇನ್ಸಾನ್ ಹೆಸರಿನಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಮೌಶುಮಿ ಚಟರ್ಜಿ, ನೀತೂ ಸಿಂಗ್ ಹಾಗೂ ಜಲೀಲನ ಪಾತ್ರದಲ್ಲಿ ರೆಬೆಲ್ಸ್ಟಾರ್ ಅಂಬರೀಶ್ ಅಭಿನಯಿಸಿದ್ದರು.
7/ 12
ಈ ಚಿತ್ರದ ಹಾಡುಗಳು ಎವರ್ಗ್ರೀನ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅದರಲ್ಲೂ ಓಹ್ ಹನ್ಸಿನಿ ಗೀತಿಯು ರಿಷಿ ಕಪೂರ್ ಹಿಟ್ ಲೀಸ್ಟ್ನಲ್ಲಿ ಈಗಲೂ ಅಗ್ರಸ್ಥಾನದಲ್ಲಿದೆ.
8/ 12
ಜೆಹ್ರೀಲಾ ಇನ್ಸಾನ್ ಚಿತ್ರದ ಬಳಿಕ ಬಾಲಿವುಡ್ ಹೆಂಗಳೆಯರ ಹೃದಯ ಗೆದ್ದ ರಿಷಿ ಕಪೂರ್ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಮಾಲಿವುಡ್ ನಿರ್ದೇಶಕ ಜಿತು ಜೋಸೆಫ್ ಆ್ಯಕ್ಷನ್ ಕಟ್ ಹೇಳಿದ ಹಿಂದಿ ಸಿನಿಮಾ ದಿ ಬಾಡಿಯಲ್ಲಿ ಕೊನೆಯ ಬಾರಿ ಎವರ್ಗ್ರೀನ್ ಸ್ಟಾರ್ ಬಣ್ಣ ಹಚ್ಚಿದ್ದರು.